Site icon Vistara News

IND VS NZ | ಅಭಿಮಾನಿಗಳ ಟೀಕೆ ಮತ್ತು ಪ್ರಶಂಸೆಯನ್ನು ಸಮಾನವಾಗಿ ಸ್ವೀಕರಿಸಬೇಕು; ಅರ್ಶ್​ದೀಪ್​ ಸಿಂಗ್​

Arshdeep Singh

ಕ್ರೈಸ್ಟ್​ಚರ್ಚ್​: ಆಟಗಾರರ ವಿರುದ್ಧ ಅಭಿಮಾನಿಗಳಿಗೆ ತಮ್ಮ ಪ್ರೀತಿ ಹಾಗೂ ಆಕ್ರೋಶ ವ್ಯಕ್ತಪಡಿಸುವ ಹಕ್ಕು ಇದೆ ಎಂದು ಟೀಮ್​ ಇಂಡಿಯಾದ ಯುವ ಎಡಗೈ ವೇಗಿ ಅರ್ಶ್​ದೀಪ್​ ಸಿಂಗ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲ್ಯಾಂಡ್​ ವಿರುದ್ಧ ಬುಧವಾರ ನಡೆಯಲಿರುವ ಅಂತಿಮ ಏಕ ದಿನ ಪಂದ್ಯಕ್ಕೂ ಮುನ್ನ ಮಾಧ್ಯಮದ ಜತೆ ಮಾತನಾಡಿದ ಅರ್ಶ್​ದೀಪ್​, ಜನರು ನಮ್ಮನ್ನು ಹಾಗೂ ನಮ್ಮ ಆಟವನ್ನು ಸಾಕಷ್ಟು ಇಷ್ಟಪಡುತ್ತಾರೆ. ನಾವು ಯಾವಾಗ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತೇವೋ ಆಗ ನಮ್ಮ ಮೇಲೆ ಪ್ರೀತಿ ವ್ಯಕ್ತಪಡಿಸುತ್ತಾರೆ. ಯಾವಾಗ ನಮ್ಮಿಂದ ಉತ್ತಮ ಪ್ರದರ್ಶನ ಬರುವುದಿಲ್ಲವೋ ಆಗ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ. ಇದನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದು ಹೇಳಿದ್ದಾರೆ.

ಕಳೆದ ಏಷ್ಯಾಕಪ್‌ ಟೂರ್ನಿಯ ಸಂದರ್ಭದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಸಿಫ್ ಅಲಿ ನೀಡಿದ್ದ ಕ್ಯಾಚ್​ ಕೈಚೆಲ್ಲಿ ಪಂದ್ಯ ಸೋಲಿಗೆ ಕಾರಣರಾದ ಅರ್ಶ್‌ದೀಪ್ ವಿರುದ್ಧ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆ ವ್ಯಕ್ತಪಡಿಸಿದ್ದರು.

ಏಕ ದಿನ ವಿಶ್ವ ಕಪ್​ ಮುಂದಿನ ಗುರಿ

ಭಾರತ ಟಿ20 ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡ ಬಳಿಕ ಏಕ ದಿನ ತಂಡದಲ್ಲಿ ಅವಕಾಶ ದೊರೆತಿರುವುದು ಖುಷಿ ನೀಡಿದೆ. ಪ್ರತಿಯೊಬ್ಬ ಕ್ರಿಕೆಟಿಗನೂ ಭಾರತ ಪರ ಆಡುವ ಕನಸು ಕಾಣುತ್ತಿರುತ್ತಾನೆ. ಅಂಥಾ ಅವಕಾಶ ನನಗೆ ದೊರೆತಿರುವುದು ನನ್ನ ಸೌಭಾಗ್ಯ. ದೇಶವನ್ನು ಪ್ರತಿನಿಧಿಸುವುದರ ಜತೆಗೆ ಮುಂದಿನ ವರ್ಷ ಭಾರತದಲ್ಲೇ ನಡೆಯುವ ಏಕ ದಿನ ವಿಶ್ವ ಕಪ್​ ತಂಡದಲ್ಲಿ ಸ್ಥಾನ ಪಡೆಯುವುದು ನನ್ನ ಪ್ರಮುಖ ಗುರಿಯಾಗಿದೆ ಎಂದು ಅರ್ಶ್​ದೀಪ್​ ಹೇಳಿದರು.

ಇದನ್ನೂ ಓದಿ | IND VS NZ | ಭಾರತ ಮತ್ತು ಕಿವೀಸ್​ ವಿರುದ್ಧದ ಅಂತಿಮ ಪಂದ್ಯದ ಪಿಚ್​ ರಿಪೋರ್ಟ್​, ಹವಾಮಾನ ವರದಿ ಹೇಗಿದೆ?

Exit mobile version