Site icon Vistara News

IND vs NZ: ಇಂಡೋ-ಕಿವೀಸ್​ ಪಂದ್ಯಕ್ಕೂ ಮುನ್ನ ಧೋನಿ ರನೌಟ್​ ನೆನಪಿಸಿದ ಐಸಿಸಿ

ms dhoni run out 2019

ಧರ್ಮಶಾಲ: ಭಾರತ ಮತ್ತು ನ್ಯೂಜಿಲ್ಯಾಂಡ್​(IND vs NZ) ತಂಡಗಳು ವಿಶ್ವಕಪ್​ನಲ್ಲಿ ಮುಖಾಮುಖಿಯಾಗುವಾಗ ನೆನಪಾಗುವುದು 2019ರಲ್ಲಿ ಧೋನಿ ರನೌಟ್​(ms dhoni run out 2019) ಆಗಿ ಭಾರತದ ಫೈನಲ್‌ ಕನಸು ಕಮರಿ ಹೋದದ್ದು. ಇದೀಗ ನಾಲ್ಕು ವರ್ಷಗಳ ಬಳಿಕ ಮತ್ತೆ ಇತ್ತಂಡಗಳು ವಿಶ್ವಕಪ್​ ಪಂದ್ಯವಾಳಿಯಲ್ಲಿ ಮುಖಾಮುಖಿಯಾಗುತ್ತಿವೆ. ಅಂದಿನ ಪಂದ್ಯದ ಘಟನೆಯ ವಿಡಿಯೊವನ್ನು ಐಸಿಸಿ ಪಂದ್ಯಕ್ಕೂ ಮುನ್ನ ಮೆಲುಕು ಹಾಕಿದೆ. ಈ ವಿಡಿಯೊ ವೈರಲ್​ ಆಗಿದೆ.

ಗೆಲುವು ಕಸಿದ ಗಪ್ಟಿಲ್​

ಅದು, 2019ರ ವಿಶ್ವಕಪ್‌ ಸೆಮಿಫೈನಲ್‌. ಸ್ಥಳ ಮ್ಯಾಂಚೆಸ್ಟರ್‌. ಮೀಸಲು ದಿನದಲ್ಲಿ ಭಾರತ ಗೆಲುವಿವೆ 239 ರನ್‌ ಚೇಸಿಂಗ್‌ ಲಭಿಸಿತ್ತು. 5 ರನ್ನಿಗೆ 3 ವಿಕೆಟ್‌ ಕಳೆದುಕೊಂಡ ವಿರಾಟ್​ ಕೊಹ್ಲಿ ಬಳಗಕ್ಕೆ ಭಾರೀ ಗಂಡಾಂತರ ಎದುರಾಗಿತ್ತು. ಆದರೆ ಮಹೇಂದ್ರ ಸಿಂಗ್​ ಧೋನಿ ಮತ್ತು ರವೀಂದ್ರ ಜಡೇಜಾ ಸೇರಿಕೊಂಡು ಇನ್ನಿಂಗ್ಸ್‌ ಒಂದನ್ನು ಕಟ್ಟತೊಡಗಿದರು. ಶತಕದ ಜತೆಯಾಟ ದಾಖಲಾಯಿತು. ಭಾರತ ಗೆಲುವಿನ ಹಾದಿಗೆ ಮರಳುತ್ತಿತ್ತು. ಇದೇ ವೇಳೆ ಜಡೇಜಾ ನಿರ್ಗಮನ. ಆ ಬಳಿಕವೂ ಧೋನಿ ಹೋರಾಟವನ್ನು ಜಾರಿಯಲ್ಲಿರಿಸಿದ್ದರು.


49ನೇ ಓವರ್‌ನಲ್ಲಿ ಧೋನಿ ಅರ್ಧ ಶತಕ ಪೂರೈಸಿದರು. ಧೋನಿ ಸ್ಟ್ರೈಕ್​ನಲ್ಲಿರುವವರೆಗೆ ಭಾರತಕ್ಕೆ ಗೆಲುವ ಖಚಿತ ಎಂದು ಎಲ್ಲ ಭಾರತೀಯರು ನಂಬಿದ್ದರು. ಆದರೆ ಎರಡು ರನ್​ ಓಡುವಾಗ ಮಾರ್ಟಿನ್‌ ಗಪ್ಟಿಲ್‌ ಅವರ ಡೈರೆಕ್ಟ್‌ ಥ್ರೋ ಧೋನಿಯನ್ನು ರನೌಟ್‌ ಮಾಡಿತು. ಅಲ್ಲಿಗೆ ಭಾರತದ ಫೈನಲ್‌ ಕನಸು ಕಮರಿ ಹೋಯಿತು. ಧೋನಿ ಕಣ್ಣೀರು ಸುರಿಸುತ್ತಾ ಪೆವಿಲಿಯನ್‌ ಕಡೆಗೆ ನಡೆದರು. ಡಗ್​ಔಟ್​ನಲ್ಲಿದ್ದ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಸೇರಿ ಎಲ್ಲ ಆಟಗಾರರು ಕೂಡ ಕಣ್ಣೀರು ಕಾಹಿದರು. ಅತ್ತ ಸ್ಟೇಡಿಯಂನಲ್ಲಿ ನೀರವ ಮೌನ ಉಂಡಾಯಿತು. ಎಲ್ಲ ಭಾರತೀಯಕರು ಕೂಡ ಸೋಲಿನ ಬೇಸರದಲ್ಲಿ ಗಪ್ಟಿಲ್​ಗೆ ಹಿಡಿ ಶಾಪ ಹಾಕುತ್ತ ಸ್ಟೇಡಿಯಂನಿಂದ ಹೊರ ನಡೆದರು. ಭಾರತ 18 ರನ್​ಗಳ ಸೋಲು ಕಂಡಿತು.

ಇದನ್ನೂ ಓದಿ IND vs NZ: ಭಾರತ-ಕಿವೀಸ್​ ಪಂದ್ಯಕ್ಕೆ ಗುಡುಗು ಸಹಿತ ಭಾರಿ ಮಳೆಯ ಮುನ್ಸೂಚನೆ

ಧೋನಿ ಅವರು ರನೌಟ್​ ಆಗಿ ಕಣೀರು ಸುರಿತುತ್ತಾ ಪೆವಿಲಿಯನ್​ಗೆ ಹೋಗುವ ದೃಶ್ಯವನ್ನು ಐಸಿಸಿ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು ಈ ಬಾರಿ ಇತ್ತಂಡಗಳಿಗೂ ಇಂತಹ ದುಖಃ ಕಾಡದಿರಲಿ, ಆದರೆ ಪಂದ್ಯ ಮಾತ್ರ ರೋಚಕವಾಗಿರಲಿ ಎಂದು ಬರೆದುಕೊಂಡಿದೆ.


ಭಾರತ ಮತ್ತು ಕಿವೀಸ್​ ನಡುವಣ ಪಂದ್ಯ ಇಂದು ಮಧ್ಯಾಹ್ನ 2 ಗಂಟೆಗೆ ಹಿಮಾಚಲ ಪ್ರದೇಶದ ಧರ್ಮಶಾಲದಲ್ಲಿ ನಡೆಯಲಿದೆ. ಆದರೆ ಈ ಪಂದ್ಯಕ್ಕೆ ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿದೆ. ಮಳೆ ಬಂದು ಪಂದ್ಯ ರದ್ದಾದರೆ ಇತ್ತಂಡಗಳಿಗೂ ತಲಾ ಒಂದು ಅಂಕ ದೊರೆಯಲಿದೆ.

ಸಂಭಾವ್ಯ ತಂಡ

ನ್ಯೂಜಿಲ್ಯಾಂಡ್​: ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್​, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗ್ಯುಸನ್, ಟ್ರೆಂಟ್ ಬೌಲ್ಟ್.

ಭಾರತ: ರೋಹಿತ್​ ಶರ್ಮ, ಶುಭಮನ್​ ಗಿಲ್​, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಕೆ.ಎಲ್​ ರಾಹುಲ್​, ಸೂರ್ಯಕುಮಾರ್​ ಯಾದವ್​, ರವೀಂದ್ರ ಜಡೇಜಾ, ಮೊಹಮ್ಮದ್​ ಸಿರಾಜ್, ಮೊಹಮ್ಮದ್​ ಶಮಿ, ಜಸ್​ಪ್ರೀತ್​ ಬುಮ್ರಾ, ಕುಲ್​ದೀಪ್​ ಯಾದವ್​.

Exit mobile version