Site icon Vistara News

IND VS NZ | ಭಾರತ ಮತ್ತು ಕಿವೀಸ್​ ವಿರುದ್ಧದ ಅಂತಿಮ ಪಂದ್ಯದ ಪಿಚ್​ ರಿಪೋರ್ಟ್​, ಹವಾಮಾನ ವರದಿ ಹೇಗಿದೆ?

India tour of New Zealand

ಕ್ರೈಸ್ಟ್​ಚರ್ಚ್​: ನ್ಯೂಜಿಲ್ಯಾಂಡ್​ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಈಗಾಗಲೇ 1-0 ಹಿನ್ನಡೆ ಅನುಭವಿಸಿರುವ ಭಾರತ(IND VS NZ) ತಂಡ ಅಂತಿಮ ಪಂದ್ಯವನ್ನಾಡಲು ಸಜ್ಜಾಗಿದೆ. ದ್ವಿತೀಯ ಪಂದ್ಯ ಮಳೆಯಿಂದ ರದ್ದುಕೊಂಡಿತ್ತು. ಇದೀಗ ಸರಣಿಯ ಮೂರನೇ ಪಂದ್ಯಕ್ಕೂ ಮಳೆ ಭೀತಿ ಕಾಡಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಳೆ ಸಾಧ್ಯತೆ ಅಧಿಕ

ಸರಣಿಯನ್ನು ಸಮಬಲಕ್ಕೆ ತರುವ ನಿಟ್ಟಿನಲ್ಲಿ ಟೀಮ್​ ಇಂಡಿಯಾಕ್ಕೆ ಗೆಲ್ಲಲೇ ಬೇಕಾಗಿರುವ ಮೂರನೇ ಏಕ ದಿನ ಪಂದ್ಯಕ್ಕೂ ಮಳೆಯ ಕಾಟ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಂತೆ ಪಂದ್ಯದ ವೇಳೆ ಕ್ರಿಸ್ಟ್ ಚರ್ಚ್​ನಲ್ಲಿ ಶೇ. 70ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮೂರನೇ ಏಕದಿನ ಪಂದ್ಯವೂ ಮಳೆಯಿಂದ ರದ್ದಾಗುವ ಸಾಧ್ಯತೆ ಹೆಚ್ಚಿದೆ. ಒಂದೊಮ್ಮೆ ಈ ಪಂದ್ಯ ಮಳೆಯಿಂದ ರದ್ದಾದರೆ 1-0 ಮುನ್ನಡೆಯಲ್ಲಿರುವ ಆತಿಥೇಯ ನ್ಯೂಜಿಲ್ಯಾಂಡ್​ಗೆ ಏಕದಿನ ಸರಣಿ ಒಲಿಯಲಿದೆ.

ಪಿಚ್ ರಿಪೋರ್ಟ್

ಕ್ರೈಸ್ಟ್ ಚರ್ಚ್‌ನ ಹ್ಯಾಗ್ಲೀ ಓವಲ್‌ ಮೈದಾನದ ಪಿಚ್‌ನ ಅಂಕಿಅಂಶವನ್ನು ಗಮನಿಸಿದಾಗ ಕಳೆದ ಐದು ಪಂದ್ಯಗಳಲ್ಲಿ ಇಲ್ಲಿ ವೇಗಿಗಳು ಶೇ. 71ರಷ್ಟು ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ಇಲ್ಲಿ ವೇಗದ ಬೌಲಿಂಗ್ ಮಹತ್ವದ ಪಾತ್ರವನ್ನು ವಹಿಸಲಿದೆ. ಆದ್ದರಿಂದ ಬ್ಯಾಟ್ಸ್‌ಮನ್‌ಗಳ ಸ್ವಲ್ಪ ಜಾಗರೂಕತೆಯಿಂದ ಬ್ಯಾಟ್‌ ಮಾಡಬೇಕಾಗುತ್ತದೆ. 150 ಕಿ.ಮೀ. ವೇಗದಲ್ಲಿ ಬೌಲಿಂಗ್​ ನಡೆಸುವ ಸಾಮರ್ಥ್ಯವಿರುವ ಉಮ್ರಾನ್​ ಮುಲಿಕ್​ಗೆ ಈ ಪಿಚ್​ನಲ್ಲಿ ಹೆಚ್ಚು ವಿಕೆಟ್​ ಬೇಟೆಯಾಡುವ ಅವಕಾಶವಿದೆ. ಒಂದೊಮ್ಮೆ ಅವರು ಈ ಪಂದ್ಯದಲ್ಲಿ ಯಶಸ್ಸುಗಳಿಸಿದರೆ ಭಾರತಕ್ಕೆ ಗೆಲುವು ಖಂಡಿತ ಎನ್ನಲಡ್ಡಿಯಿಲ್ಲ.

ಇದನ್ನೂ ಓದಿ | Team india | ಭಾರತ ತಂಡದಲ್ಲಿ ಪೃಥ್ವಿ, ಋತುರಾಜ್‌ ಇರಲೇಬೇಕು ಎಂದ ಐಪಿಎಲ್‌ನ ಚಾಂಪಿಯನ್ ಕೋಚ್‌

Exit mobile version