ಆಕ್ಲೆಂಡ್: ಭಾರತ ಮತ್ತು ನ್ಯೂಜಿಲ್ಯಾಂಡ್(IND VS NZ) ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಶುಕ್ರವಾರ ನಡೆಯಲಿದೆ. ಈ ಪಂದ್ಯದ ಪಿಚ್ ರಿಪೋರ್ಟ್ ಮತ್ತು ಹಮಾಮಾನ ವರದಿ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಪಿಚ್ ರಿಪೋರ್ಟ್
ಆಕ್ಲೆಂಡ್ನ ಈಡನ್ ಪಾರ್ಕ್ ಮೈದಾನದಲ್ಲಿ ಹೆಚ್ಚಾಗಿ ರಗ್ಬಿ ಪಂದ್ಯಾಟಗಳು ನಡೆಯತ್ತದೆ. ಅದರಂತೆ ಕ್ರಿಕೆಟ್ ಪಂದ್ಯಗಳಿಗೂ ಈ ಮೈದಾನದಲ್ಲಿ ಪಿಚ್ಗಳಿಗೆ. ಆಯತಾಕಾರದಲ್ಲಿರುವ ಈ ಮೈದಾನದ ಸ್ಟ್ರೈಟ್ ಬೌಂಡರಿ ಕೇವಲ 55 ಮೀಟರ್ ಸಮೀಪದಿಂದ ಕೂಡಿದ್ದು ವಿಶ್ವದ ಅತಿ ಚಿಕ್ಕ ಬೌಂಡರಿ ಗೆರೆ ಎಂಬ ಖ್ಯಾತಿ ಪಡೆದಿದೆ. ಬ್ಯಾಟಿಂಗ್ ಸ್ನೇಹಿ ಪಿಚ್ ಇದಾಗಿದ್ದು ಬ್ಯಾಟರ್ಗಳಿಗೆ ಉತ್ತಮ ನೆರವು ನೀಡಲಿದೆ. ಅದರಲ್ಲೂ ಸ್ಟ್ರೈಟ್ ಡ್ರೈವ್ ಹೊಡೆಯುವ ಆಟಗಾರರಿಗೆ ಮತ್ತಷ್ಟು ನೆರವು ನೀಡಲಿದೆ.
ಮಳೆ ಭೀತಿ ಸಾಧ್ಯತೆ
ಈಗಾಗಲೇ ಟಿ20 ಸರಣಿಯ ಮೊದಲ ಮತ್ತು ಅಂತಿಮ ಪಂದ್ಯಗಳಿಗೆ ಮಳೆ ಅಡಚಣೆ ಮಾಡಿದೆ. ಅದರಂತೆ ಇದೀಗ ಏಕದಿನ ಸರಣಿಗೂ ಮಳೆ ಮುನ್ಸೂಚನೆ ಇದೆ. ಭಾರತದಲ್ಲಿ ಪಂದ್ಯ ಬೆಳಗ್ಗೆ 7 ಗಂಟೆಗೆ ಆರಂಭವಾದರೆ ನ್ಯೂಜಿಲ್ಯಾಂಡ್ ಕಾಲಮಾನದ ಪ್ರಕಾರ ಮಧ್ಯಾಹ್ನ ಪಂದ್ಯ ಆರಂಭವಾಗಲಿದೆ. ಪಂದ್ಯದ ಆರಂಭದಲ್ಲಿ ಮಳೆ ಕಾಟ ಇಲ್ಲದಿದ್ದರೂ ಸಂಜೆಯ ವೇಳೆಗೆ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ | IND VS NZ | ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಲಿದ್ದಾರಾ ಅರ್ಶ್ದೀಪ್ ಸಿಂಗ್?