Site icon Vistara News

IND VS NZ: ಅಂತಿಮ ಟಿ20 ಪಂದ್ಯಕ್ಕೂ ಮುನ್ನ ಪ್ರಮುಖ ವೇಗಿಯನ್ನು ತಂಡದಿಂದ ಬಿಡುಗಡೆ ಮಾಡಿದ ಭಾರತ

Mukesh Kumar

#image_title

ಕೋಲ್ಕೊತಾ: ಭಾರತ ಮತ್ತು ನ್ಯೂಜಿಲ್ಯಾಂಡ್(IND VS NZ)​ ನಡುವಿನ ಟಿ20 ಸರಣಿಯ ಅಂತಿಮ ಪಂದ್ಯ ಬುಧವಾರ ಅಹಮದಾಬಾದ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನವೇ ವೇಗಿ ಮುಖೇಶ್ ಕುಮಾರ್(Mukesh Kumar) ಅವರನ್ನು ತಂಡದಿಂದ ಸದ್ದಿಲ್ಲದೆ ಬಿಡುಗಡೆ ಮಾಡಿದೆ.

ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ತಂಡದಲ್ಲಿದ್ದ ಮುಖೇಶ್ ಕುಮಾರ್​ ಆಡುವ ಬಳಗದಲ್ಲಿ ಅವಕಾಶ ಪಡೆದಿರಲಿಲ್ಲ. ಮೂರನೇ ಪಂದ್ಯದಲ್ಲಿಯೂ ಅವಕಾಶ ಸಿಗದ ಲಕ್ಷಣ ತೋರಿದ ಕಾರಣದಿಂದ ಬೆಂಚ್‌ ಕಾಯುವ ಬದಲು ರಣಜಿ ಪಂದ್ಯವನ್ನಾಡುವ ದೃಷ್ಟಿಯಿಂದ ಅವರು ಕೋಲ್ಕೊತಾಗೆ ಮರಳಿದ್ದಾರೆ.

ಕಿವೀಸ್​ ವಿರುದ್ಧದ ದ್ವಿತೀಯ ಟಿ20 ಪಂದ್ಯದ ಬಳಿಕವೇ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ. ಅಂದು ರಾತ್ರಿಯೇ ಅಲ್ಲಿಂದ ಹೊರಟ ಮುಖೇಶ್ ಕುಮಾರ್ ಸೋಮವಾರ ಕೋಲ್ಕೊತಾಗೆ ಆಗಮಿಸಿ ರಣಜಿ ತಂಡ ಸೇರಿದ್ದಾರೆ. ಈಡನ್ ಗಾರ್ಡನ್‌ ಅಂಗಳದಲ್ಲಿ ನಡೆಯುತ್ತಿರುವ ಜಾರ್ಖಂಡ್ ವಿರುದ್ಧದ ರಣಜಿ ಕ್ವಾರ್ಟರ್ ಫೈನಲ್‌ ಪಂದ್ಯದ ಮೊದಲನೇ ದಿನವೇ ಮಿಂಚಿರುವ ಮುಖೇಶ್ ಕುಮಾರ್ ಪ್ರಮುಖ 3 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಈ ಮೂಲಕ ತನ್ನನ್ನು ಕಡೆಗಣಿಸಿದಕ್ಕೆ ಟೀಮ್ ಮ್ಯಾನೆಜ್​ಮೆಂಟ್​ಗೆ ತಿರುಗೇಟು ನೀಡಿದ್ದಾರೆ. ಇವರ ಬೌಲಿಂಗ್​ ದಾಳಿಗೆ ನಲುಗಿದ ಜಾರ್ಖಂಡ್ ಮೊದಲನೇ ಇನ್ನಿಂಗ್ಸ್‌ನಲ್ಲಿ 173 ರನ್‌ಗಳಿಗೆ ಆಲೌಟ್ ಆಗಿದೆ.

ಇದನ್ನೂ ಓದಿ IND VS NZ: ಅಹಮದಾಬಾದ್‌ ಸ್ಟೇಡಿಯಂನಲ್ಲಿ ನಡೆದ ಟಿ20 ಪಂದ್ಯಗಳ ದಾಖಲೆಯ ​ಮಾಹಿತಿ

ಶ್ರೀಲಂಕಾ ವಿರುದ್ಧದ ಸರಣಿಯಲ್ಲಿಯೂ ಮುಖೇಶ್ ಕುಮಾರ್​ ಅವಕಾಶ ಸಿಗದೆ ಬೆಂಚ್​ ಕಾದಿದ್ದರು. ಇದೀಗ ಕಿವೀಸ್​ ವಿರುದ್ದವೂ ಅವರನ್ನು ಕಡೆಗಣಿಸಿದಕ್ಕೆ ಬಿಸಿಸಿಐ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳಪೆ ಬೌಲಿಂಗ್​ ಪದರ್ಶನ ತೋರುತ್ತಿರುವ ಅರ್ಶ್​ದೀಪ್​ ಸಿಂಗ್​ ಬದಲು ಮುಖೇಶ್ ಕುಮಾರ್​ಗೆ ಒಂದು ಅವಕಾಶ ನೀಡಬಹುದಿತ್ತು ಎಂದು ಕಿಡಿಕಾರಿದ್ದಾರೆ.

Exit mobile version