ವೆಲ್ಲಿಂಗ್ಟನ್: ಆಸ್ಟ್ರೇಲಿಯಾದಲ್ಲಿ ಮುಕ್ತಾಯಕಂಡ ಐಸಿಸಿ ಟಿ20 ವಿಶ್ವ ಕಪ್ ಸೆಮಿಫೈನಲ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದ ಭಾರತ ಮತ್ತು ನ್ಯೂಜಿಲೆಂಡ್ (IND VS NZ) ತಂಡಗಳು ಮತ್ತೊಮ್ಮೆ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಈ ಎರಡು ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಶುಕ್ರವಾರ ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ.
ಉಭಯ ದೇಶಗಳ ನಡುವಿನ ಟಿ20 ಮತ್ತು ಏಕದಿನ ಸರಣಿಯ ಪ್ರಸಾರದ ಹಕ್ಕನ್ನು ಡಿಡಿ ಸ್ಪೋರ್ಟ್ಸ್ (DD Sports) ಪಡೆದುಕೊಂಡಿದ್ದು ಪಂದ್ಯದ ನೇರಪ್ರಾಸರ ಡಿಡಿ ಸ್ಪೋರ್ಟ್ಸ್ನಲ್ಲಿ ಇರಲಿದೆ. ಜತೆಗೆ ಡಿಜಿಟಲ್ ಹಕ್ಕುಗಳನ್ನು ಅಮೇಜಾನ್ ಪ್ರೈಂ ತನ್ನದಾಗಿಸಿಕೊಂಡಿರುವುದರಿಂದ ಪಂದ್ಯವನ್ನು ಅಮೇಜಾನ್ ಪ್ರೈಂನಲ್ಲಿಯೂ ವೀಕ್ಷಿಸಬಹುದಾಗಿದೆ.
ಈ ಹಿಂದೆ ಕಳೆದ ಜುಲೈ-ಆಗಸ್ಟ್ನಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ಏಕದಿನ ಮತ್ತು 5 ಟಿ20 ಪಂದ್ಯಗಳೂ ಸಹ ಭಾರತದಲ್ಲಿ ಡಿಡಿ ಸ್ಪೋರ್ಟ್ಸ್ ನೇರ ಪ್ರಸಾರ ಮಾಡಿತ್ತು.
ಭಾರತ-ನ್ಯೂಜಿಲೆಂಡ್ ತಂಡಗಳ ವೇಳಾಪಟ್ಟಿ
ಟಿ20 ವೇಳಾಪಟ್ಟಿ
ಪಂದ್ಯ | ಸ್ಥಳ | ದಿನಾಂಕ | ಸಮಯ (ಭಾರತೀಯ ಕಾಲಮಾನ) |
ಮೊದಲ ಟಿ20 | ವೆಲ್ಲಿಂಗ್ಟನ್ | ನವೆಂಬರ್ 18 | ಮಧ್ಯಾಹ್ನ 12.00 |
ಎರಡನೇ ಟಿ20 | ಮೌಂಟ್ ಮೌಂಗನಿ | ನವೆಂಬರ್ 20 | ಮಧ್ಯಾಹ್ನ 12.00 |
ಮೂರನೇ ಟಿ20 | ನೇಪಿಯರ್ | ನವೆಂಬರ್ 22 | ಮಧ್ಯಾಹ್ನ 12.00 |
ಏಕದಿನ ವೇಳಾಪಟ್ಟಿ
ಪಂದ್ಯ | ಸ್ಥಳ | ದಿನಾಂಕ | ಸಮಯ (ಭಾರತೀಯ ಕಾಲಮಾನ) |
ಮೊದಲ ಏಕದಿನ | ಆಕ್ಲೆಂಡ್ | ನವೆಂಬರ್ 25 | ಬೆಳಗ್ಗೆ 7.00 |
2ನೇ ಏಕದಿನ | ಹ್ಯಾಮಿಲ್ಟನ್ | ನವೆಂಬರ್ 27 | ಬೆಳಗ್ಗೆ 7.00 |
3ನೇ ಏಕದಿನ | ಕ್ರೈಸ್ಟ್ಚರ್ಚ್ | ನವೆಂಬರ್ 30 | ಬೆಳಗ್ಗೆ 7.00 |
ಇದನ್ನೂ ಓದಿ | IND VS NZ | ಭಾರತ ವಿರುದ್ಧದ ತವರಿನ ಟಿ20, ಏಕದಿನ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ