Site icon Vistara News

IND vs NZ: 2 ಕ್ಯಾಚ್​ ಹಿಡಿದು ದಾಖಲೆ ಬರೆದ ಕಿಂಗ್​ ಕೊಹ್ಲಿ; ದಿಗ್ಗಜ ಆಟಗಾರನ ದಾಖಲೆ ಉಡೀಸ್​

virat kohli catch world cup

ಧರ್ಮಶಾಲಾ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ಅವರು ನ್ಯೂಜಿಲ್ಯಾಂಡ್​ ವಿರುದ್ಧ ಭಾನುವಾರ ನಡೆದ ವಿಶ್ವಕಪ್​ ಪಂದ್ಯದಲ್ಲಿ ಪಂದ್ಯದಲ್ಲಿ 2 ಕ್ಯಾಚ್​ ಹಿಡಿಯುವ ಮೂಲಕ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ಕ್ಯಾಚ್(Most catches in World Cup)​ ಪಡೆದ ಸಾಧಕರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್​ ಅಸೋಸಿಯೇಶನ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅವರು ಕಿವೀಸ್​ ಆಟಗಾರ ಡೇರಿಯಲ್ ಮಿಚೆಲ್​ ಮತ್ತು ಮಾರ್ಕ್ ಚಾಪ್ಮನ್ ಅವರ ಕ್ಯಾಚ್​ ಹಿಡಿಯುವ ಮೂಲಕ ಕೊಹ್ಲಿ ಈ ಸಾಧನೆ ಮಾಡಿದರು. ಈ ಹಿಂದೆ ಮೂರನೇ ಸ್ಥಾನದಲ್ಲಿದ್ದ ಶ್ರೀಲಂಕಾದ ಮಾಜಿ ದಿಗ್ಗಜ ಸನತ್​ ಜಯಸೂರ್ಯ ಅವರು ನಾಲ್ಕನೇ ಸ್ಥಾನಕ್ಕೆಎ ಕುಸಿದಿದ್ದಾರೆ. ಜಯಸೂರ್ಯ 18 ಕ್ಯಾಚ್​ಗಳನ್ನು ಹಿಡಿದಿದ್ದರು. ಸದ್ಯ ಕೊಹ್ಲಿ 19* ಕ್ಯಾಚ್​ಗಳನ್ನು ಪಡೆದಿದ್ದಾರೆ.

ಬ್ಯಾಟಿಂಗ್​ನಲ್ಲಿಯೂ ಮಿಂಚಿದ ಕೊಹ್ಲಿ 104 ಎಸೆತ ಎದುರಿಸಿ 8 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ 95 ರನ್​ ಗಳಿಸಿ ಮ್ಯಾಟ್​ ಹೆನ್ರಿಗೆ ವಿಕೆಟ್​ ಒಪ್ಪಿಸಿದರು. ಕೇವಲ 5 ರನ್​ ಅಂತರದಲ್ಲಿ ಶತಕ ವಂಚಿತರಾದರು. ಒಂದೊಮ್ಮೆ ಕೊಹ್ಲಿ ಅವರು ಶತಕ ಬಾರಿಸುತ್ತಿದ್ದರೆ, ಸಚಿನ್​ ತೆಂಡೂಲ್ಕರ್​ ಅವರ ಏಕದಿನ ಕ್ರಿಕೆಟ್​ನ ಸಾರ್ವಕಾಲಿಕ 49 ಶತಕದ ದಾಖಲೆಯನ್ನು ಸರಿಗಟ್ಟುತ್ತಿದ್ದರು.

ಪಾಟಿಂಗ್​ಗೆ ಮೊದಲ ಸ್ಥಾನ

ವಿಶ್ವಕಪ್​ ಇತಿಹಾಸದಲ್ಲಿ ಅತ್ಯಧಿಕ ಕ್ಯಾಚ್​ ಪಡೆದ ಆಟಗಾರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ನಾಯಕ ರಿಕಿ ಪಾಂಟಿಂಗ್(ricky ponting) ಅವರು ಮೊದಲ ಸ್ಥಾನ ಪಡೆದಿದ್ದಾರೆ. ಪಾಂಟಿಂಗ್​ 2 ಬಾರಿ ನಾಯಕನಾಗಿ ಮತ್ತು ಒಂದು ಬಾರಿ ಆಟಗಾರನಾಗಿ ವಿಶ್ವಕಪ್​ ಗೆದ್ದ ಸಾಧನೆ ಮಾಡಿದ್ದಾರೆ. 1996-2011ರ ತನಕದ ವಿಶ್ವಕಪ್ ಪಯಣದಲ್ಲಿ 46 ಪಂದ್ಯಗಳನ್ನು ಆಡಿ 28 ಕ್ಯಾಚ್​ ಪಡೆದಿದ್ದಾರೆ.

ಇದನ್ನೂ ಓದಿ Ind vs NZ : ನ್ಯೂಜಿಲ್ಯಾಂಡ್ ವಿರುದ್ಧ ಭಾರತ ತಂಡಕ್ಕೆ 4 ವಿಕೆಟ್​ ವಿಜಯ, ವಿಶ್ವ ಕಪ್​ನಲ್ಲಿ ಸತತ ಐದನೇ ಜಯ

ರೂಟ್​ ಮಧ್ಯೆ ಪೈಪೋಟಿ

ಪ್ರಸ್ತುತ ಇಂಗ್ಲೆಂಡ್​ ತಂಡದ ಪರ ಆಡುತ್ತಿರುವ ಜೋ ರೂಟ್​ ಅವರು ಅತ್ಯಧಿಕ ಕ್ಯಾಚ್​ ಪಡೆದ ಆಟಗಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 21 ಪಂದ್ಯಗಳನ್ನು ಆಡಿ 24 ಕ್ಯಾಚ್​ ಪಡೆದಿದ್ದಾರೆ. ಈ ಬಾರಿಯ ಟೂರ್ನಿ ಆರಂಭಕ್ಕೂ ಮುನ್ನ ಅವರ ಕ್ಯಾಚ್​ಗಳ ಸಂಖ್ಯೆ 20ರಲ್ಲಿತ್ತು. ಆದರೆ ಈಗಾಗಲೇ 4 ಕ್ಯಾಚ್​ ಪಡೆದು ಮುನ್ನುಗ್ಗುತ್ತಿದ್ದಾರೆ. ಇನ್ನು 5 ಕ್ಯಾಚ್​ ಪಡೆದರೆ ರಿಕಿ ಪಾಂಟಿಂಗ್ ಸರ್ವಕಾಲಿಕ ದಾಖಲೆ ಪತನಗೊಳ್ಳಲಿದೆ. ಸದ್ಯ ಕೊಹ್ಲಿ ಮತ್ತು ರೂಟ್​ ಅವರಲ್ಲಿ ಕ್ಯಾಚ್​ ದಾಖಲೆಯ ಪೈಪೋಟಿ ಏರ್ಪಟ್ಟಿದೆ.

20 ವರ್ಷಗಳ ಬಳಿಕ ಗೆಲುವು

ಭಾರತ ತಂಡದ ದೊಡ್ಡ ಕೊರತೆಯೊಂದು ನೀಗಿದೆ. ಕಳೆದ 20 ವರ್ಷಗಳಿಂದ ಐಸಿಸಿಯ ಮಹತ್ವದ ಟೂರ್ನಿಯಲ್ಲಿ (ICC World Cup 2023) ನ್ಯೂಜಿಲ್ಯಾಂಡ್ ತಂಡವನ್ನು ಮಣಿಸಲಾಗದ ನೋವು ಕೊನೆಯಾಗಿದೆ. ಮೊಹಮ್ಮದ್ ಶಮಿಯ ಮಾರಕ ಬೌಲಿಂಗ್​ ಮತ್ತು ವಿರಾಟ್ ಕೊಹ್ಲಿ ಅವರ 95 ರನ್​ಗಳ ನೆರವಿನಿಂದ ವಿಶ್ವ ಕಪ್​ ಟೂರ್ನಿಯ 21ನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ದ 4 ವಿಕೆಟ್​ಗಳಿಂದ ಗೆದ್ದಿದೆ. ಈ ಮೂಲಕ 20 ವರ್ಷಗಳ ಬಳಿಕ ನ್ಯೂಜಿಲೆಂಡ್ ತಂಡವನ್ನು ಐಸಿಸಿ ಟೂರ್ನಿಯಲ್ಲಿ ಮಣಿಸಿದ ದಾಖಲೆ ಮಾಡಿದೆ. ಕಳೆದ 2 ದಶಕಗಳಿಂದ ಕಿವೀಸ್ ಬಳಗ ಭಾರತಕ್ಕೆ ದೊಡ್ಡ ಬೆದರಿಕೆಯನ್ನು ಒಡ್ಡುತ್ತಿತ್ತು.

Exit mobile version