Site icon Vistara News

IND vs NZ: ವಿಶ್ವಕಪ್​ನಲ್ಲಿ ಅನಿಲ್‌ ಕುಂಬ್ಳೆ ದಾಖಲೆ ಮುರಿದ ಮೊಹಮ್ಮದ್​ ಶಮಿ

mohammed shami

ಧರ್ಮಶಾಲಾ: ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಆಡುವ ಅವಕಾಶ ಸಿಗದೆ ಇದ್ದ ಮೊಹಮ್ಮದ್​ ಶಮಿ(Mohammed Shami) ಅವರು ನ್ಯೂಜಿಲ್ಯಾಂಡ್(IND vs NZ)​ ವಿರುದ್ಧದ ಪಂದ್ಯದಲ್ಲಿ ಅವಕಾಶ ಪಡೆದಿದ್ದಾರೆ. ಕಣಕ್ಕಿಳಿದ ಈ ಪಂದ್ಯದಲ್ಲಿ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ವಿಶ್ವಕಪ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಭಾರತದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.

ಶಾರ್ದೂಲ್ ಠಾಕೂರ್​ ಅವರ ಸ್ಥಾನದಲ್ಲಿ ಆಡಲಿಳಿದ ಮೊಹಮ್ಮದ್​ ಶಮಿ ಅವರು ತಮ್ಮ ದ್ವಿತೀಯ ಓವರ್​ನ ಮೊದಲ ಎಸೆತದಲ್ಲೇ ಡೇಂಜರಸ್​ ಬ್ಯಾಟರ್​ ವಿಲ್​ ಯಂಗ್​ ಅವರ ವಿಕೆಟ್​ ಕಿತ್ತು. ಈ ಸಾಧನೆ ಮಾಡಿದರು. ಈ ಹಿಂದೆ 31 ವಿಕೆಟ್​ ಪಡೆದು ಮೂರನೇ ಸ್ಥಾನದಲ್ಲಿದ್ದ ಅನೀಲ್​ ಕುಂಬ್ಳೆ ದಾಖಲೆ ಪತನಗೊಂಡಿದೆ. ಸದ್ಯ ಶಮ್ಮಿ 32* ವಿಕೆಟ್​ ಪಡೆದಿದ್ದಾರೆ.

ಭಾರತ ಪರ ವಿಶ್ವಕಪ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ದಾಖಲೆ ಜಹೀರ್​ ಖಾನ್​ ಹೆಸರಿನಲ್ಲಿದೆ. ಅವರು 2003-2011 ವರೆಗೆ ವಿಶ್ವಕಪ್​ ಆಡಿ 44 ವಿಕೆಟ್​ಗಳನ್ನು ಕಿತ್ತಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಜಾವಗಲ್ ಶ್ರೀನಾಥ್​ ಕಾಣಿಸಿಕೊಂಡಿದ್ದಾರೆ. ಅವರು 1992-2003 ಆಡಿ 44 ವಿಕೆಟ್​ ಪಡೆದಿದ್ದಾರೆ. ಶಮಿ ಅವರು ಇನ್ನು 13 ವಿಕೆಟ್​ ಪಡೆದರೆ ಜಹೀರ್​ ಮತ್ತು ಶ್ರೀನಾಥ್​ ದಾಖಲೆಯನ್ನು ಮುರಿಯಲಿದ್ದಾರೆ.

ವಿಶ್ವ ದಾಖಲೆ ಗ್ಲೆನ್ ಮೆಕ್​ಗ್ರಾತ್ ಹೆಸರಿನಲ್ಲಿದೆ

ವಿಶ್ವಕಪ್​ನಲ್ಲಿ ಅತಿ ಹೆಚ್ಚು ವಿಕೆಟ್​ ಕಿತ್ತ ದಾಖಲೆ ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್​ಗ್ರಾತ್(Glenn McGrath) ಅವರ ಹೆಸರಿನಲ್ಲಿದೆ. 1996-2007ರ ತನಕ ವಿಶ್ವಕಪ್​ ಆಡಿದ ಸಾಧನೆ ಇವರದ್ದು. ಅಲ್ಲದೆ ಮೂರು ಬಾರಿಯ ವಿಶ್ವಕಪ್​ ವಿಜೇತ ತಂಡದ ಸದಸ್ಯ ಎಂಬ ಹಿರಿಮೆಯೂ ಇವರ ಪಾಲಿಗಿದೆ. 39 ವಿಶ್ವಕಪ್​ ಪಂದ್ಯ ಆಡಿರುವ ಅವರು 1955 ಬಾಲ್​ ಎಸೆದು 71 ವಿಕೆಟ್​ ಕೆಡವಿದ್ದಾರೆ. 42 ಮೇಡನ್​ ಒಳಗೊಂಡಿದೆ. 15 ರನ್​ಗೆ 7 ವಿಕೆಟ್​ ಕಿತ್ತದ್ದು ವೈಯಕ್ತಿಕ ಗರಿಷ್ಠ ಸಾಧನೆಯಾಗಿದೆ.

ಇದನ್ನೂ ಓದಿ Heinrich Klaasen: ಕ್ಲಾಸಿ ಶತಕ ಬಾರಿಸಿ ವಿಶ್ವಕಪ್​ನಲ್ಲಿ ದಾಖಲೆ ಬರೆದ ಕ್ಲಾಸೆನ್‌

ದಿಗ್ಗಜ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರು ವಿಶ್ವಕಪ್​ನಲ್ಲಿ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮುರಳೀಧರನ್ 1996-2011ರ ವರೆಗೆ ವಿಶ್ವಕಪ್​ ಆಡಿ 68 ವಿಕೆಟ್​ ಪಡೆದಿದ್ದಾರೆ. ಒಟ್ಟು 40 ಪಂದ್ಯ ಆಡಿದ್ದಾರೆ. 15 ಮೇಡನ್​, 19 ರನ್​ಗೆ 4 ವಿಕೆಟ್​ ಕಿತ್ತಿರುವುದು ವೈಯಕ್ತಿಕ ಸಾಧನೆಯಾಗಿದೆ.

ಯಾರ್ಕರ್​ ಕಿಂಗ್​ ಲಂಕಾದ ಲಸಿತ ಮಾಲಿಂಗ ಅವರು 2007-2019ರ ತನಕ ವಿಶ್ವಕಪ್​ ಆಡಿ 56 ವಿಕೆಟ್​ ಕಿತ್ತಿದ್ದಾರೆ. ಈ ಮೂಲಕ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಇದಲ್ಲದೆ ವಿಶ್ವಕಪ್​ ಟೂರ್ನಿಯಲ್ಲಿ ಎರಡು ಬಾರಿ ಹ್ಯಾಟ್ರಿಕ್​ ವಿಕೆಟ್​ ಪಡೆದ ಮೊದಲ ಬೌಲರ್​ ಎನಿಸಿಕೊಂಡಿದ್ದಾರೆ. 29 ಪಂದ್ಯಗಳನ್ನು ಆಡಿದ್ದಾರೆ. 38ಕ್ಕೆ 6 ವಿಕೆಟ್​ ಉತ್ತಮ ಬೌಲಿಂಗ್​ ಸಾಧನೆಯಾಗಿದೆ.

Exit mobile version