Site icon Vistara News

IND VS NZ | ಕರಾಚಿಯಿಂದ ಭಾರತಕ್ಕೆ ಬಂದಿಳಿದ ನ್ಯೂಜಿಲ್ಯಾಂಡ್​ ಕ್ರಿಕೆಟ್​ ತಂಡ!

IND VS NZ

ಹೈದರಾಬಾದ್‌: ಪಾಕಿಸ್ತಾನ ವಿರುದ್ಧದ ಏಕದಿನ ಸರಣಿ ಮುಕ್ತಾಯದ ಕೆಲವೇ ಗಂಟೆಗಳಲ್ಲಿ ನ್ಯೂಜಿಲ್ಯಾಂಡ್​(IND VS NZ ) ತಂಡ ಭಾರತ ವಿರುದ್ಧದ ಸರಣಿಗಾಗಿ ಹೈದರಾಬಾದ್‌ ತಲುಪಿದೆ. ಈ ವಿಡಿಯೊವನ್ನು ಕಿವೀಸ್​ ಟ್ವಿಟರ್​ನಲ್ಲಿ ಹಂಚಿಕೊಂಡಿದೆ.

ನ್ಯೂಜಿಲ್ಯಾಂಡ್​ ತಂಡ ಕರಾಚಿಯಿಂದ ಭಾರತಕ್ಕೆ ಪ್ರಯಾಣಿಸಿದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಸರಣಿ ಗೆಲುವಿನ ಬಳಿಕದಿಂದ ಹಿಡಿದು ಭಾರತ ತಲುಪುವವರೆಗಿನ ಎಲ್ಲ ಕ್ಷಣವನ್ನು ವಿಡಿಯೊ ಮೂಲಕ ಹಂಚಿಕೊಂಡಿದೆ.

ತಂಡ ವಿಜಯೋತ್ಸವ ಆಚರಿಸಿದ ಬಳಿಕ ರಾತ್ರಿ 12.10ಕ್ಕೆ ರಾಷ್ಟ್ರೀಯ ಕ್ರೀಡಾಂಗಣದಿಂದ ಹೊರಟು ನೇರವಾಗಿ ಕರಾಚಿ ವಿಮಾನ ನಿಲ್ದಾಣ ತಲುಪಿದೆ. ಅಲ್ಲಿಂದ ತಂಡ ಹೈದರಾಬಾದ್‌ಗೆ ಪ್ರಯಾಣ ಬೆಳೆಸಿ ಬೆಳಗ್ಗೆ 5.45ಕ್ಕೆ ತಲುಪಿದೆ. ಸದ್ಯ ಆಟಗಾರರು ವಿಶ್ರಾಂತಿ ಪಡೆಯುತ್ತಿದ್ದು ಒಂದು ದಿನಗಳ ಬಳಿಕ ಅಭ್ಯಾಸ ಆರಂಭಿಸಲಿದ್ದಾರೆ. ಮುಂದಿನ ವಾರ ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವೆ ಏಕ ದಿನ ಸರಣಿ ನಡೆಯಲಿದೆ. ಇದರ ಬಳಿಕ ಟಿ20 ಸರಣಿಯನ್ನಾಡಲಿದೆ.

ಇದನ್ನೂ ಓದಿ | IND VS AUS | ಭಾರತ ವಿರುದ್ಧದ ಟೆಸ್ಟ್​ ಸರಣಿ ಆಸ್ಟ್ರೇಲಿಯಾಕ್ಕೆ ಸವಾಲಿನಿಂದ ಕೂಡಿರಲಿದೆ; ಜಸ್ಟಿನ್ ಲ್ಯಾಂಗರ್!

Exit mobile version