ವೆಲ್ಲಿಂಗ್ಟನ್: ಭಾರತ ವಿರುದ್ಧದ ತವರಿನ ಟಿ20 ಹಾಗೂ ಏಕ ದಿನ ಸರಣಿಗಳಿಗೆ 15 ಸದಸ್ಯರ ನ್ಯೂಜಿಲೆಂಡ್(IND VS NZ) ತಂಡವನ್ನು ಪ್ರಕಟಿಸಲಾಗಿದ್ದು ಟಿ20 ವಿಶ್ವ ಕಪ್ ತಂಡದಲ್ಲಿದ್ದ ಮಾರ್ಟಿನ್ ಗಪ್ಟಿಲ್ ಹಾಗೂ ಹಿರಿಯ ವೇಗಿ ಟ್ರೆಂಟ್ ಬೌಲ್ಟ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
“ಯುವ ಬ್ಯಾಟ್ಸ್‌ಮನ್ ಫಿನ್ ಅಲೆನ್ ಅವರು ಇತ್ತೀಚೆಗೆ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಸೀಮಿತ ಓವರ್‌ಗಳ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಹಾಗಾಗಿ ಮಾರ್ಟಿನ್ ಗಪ್ಟಿಲ್ ಅವರನ್ನು ತಂಡದಿಂದ ಕೈಬಿಡಲಾಗಿದೆ” ಎಂದು ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೀಡ್ ತಿಳಿಸಿದ್ದಾರೆ.
“ಮುಂದಿನ ಏಕ ದಿನ ವಿಶ್ವ ಕಪ್ ಕೂಟಕ್ಕೆ ಇನ್ನೂ ಒಂದು ವರ್ಷ ಮಾತ್ರ ಬಾಕಿ ಇದೆ. ಈ ಸಮಯದಲ್ಲಿ ಸೂಕ್ತ ತಂಡವನ್ನು ಕಟ್ಟುವ ಜವಾಬ್ದಾರಿಯೂ ನಮ್ಮ ಮೇಲಿದೆ. ಈ ಹಿನ್ನೆಲೆಯಲ್ಲಿ ಫಿನ್ ಅಲೆನ್ ಅವರಿಗೆ ಹೆಚ್ಚಿನ ಅವಕಾಶಗಳನ್ನ ನೀಡಬೇಕಾಗಿದೆ. ಆ ಮೂಲಕ ಅವರು ಏಕ ದಿನ ಕ್ರಿಕೆಟ್‌ನಲ್ಲಿ ಹೆಚ್ಚಿನ ಅನುಭವ ಪಡೆದುಕೊಳ್ಳುವಂತಾಗಬೇಕು. ಜತೆಗೆ ಭಾರತದಂತಹ ಬಲಿಷ್ಠ ತಂಡದ ಎದುರು ಅವರು ಹೆಚ್ಚಿನ ಅನುಭವ ಪಡೆದುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಅವರಿಗೆ ಆಧ್ಯತೆ ನೀಡಲಾಗಿದೆ” ಎಂದು ಹೇಳಿದ್ದಾರೆ.
ನ್ಯೂಜಿಲೆಂಡ್ ತಂಡ ಭಾರತ ವಿರುದ್ಧ ಮೂರು ಪಂದ್ಯಗಳ ಟಿ20 ಹಾಗೂ ಏಕ ದಿನ ಸರಣಿಗಳಿಗೆ ಆತಿಥ್ಯ ವಹಿಸುತ್ತಿದೆ. ನವೆಂಬರ್ 18 ರಂದು ವಲ್ಲಿಂಗ್ಟನ್‌ನಲ್ಲಿ ಮೊದಲನೇ ಟಿ20 ಪಂದ್ಯದ ಮೂಲಕ ಈ ಸರಣಿಗೆ ಚಾಲನೆ ದೊರೆಯಲಿದೆ.
ನ್ಯೂಜಿಲೆಂಡ್ ತಂಡ
ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೆವೋನ್ ಕಾನ್ವೆ, ಲಾಕಿ ಫರ್ಗ್ಯೂಸನ್, ಮ್ಯಾಟ್ ಹೆನ್ರಿ, ಟಾಮ್ ಲೇಥಮ್, ಡ್ಯಾರಿಲ್ ಮಿಚೆಲ್, ಆಡಮ್ ಮಿಲ್ನೆ, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಬ್ಲೈರ್ ಟಿಕ್ಕರ್. (ಏಕದಿನ ತಂಡಕ್ಕೆ ತಂಡಕ್ಕೆ ಜಿಮ್ಮಿ ನೀಶಮ್ ಸ್ಥಾನಕ್ಕೆ ಹೆನ್ರಿ ನಿಕೋಲ್ಸ್)
ಸರಣಿ ವೇಳಾಪಟ್ಟಿ
ನವೆಂಬರ್ 18 ಮೊದಲ ಟಿ20, ಸ್ಥಳ: ವೆಲ್ಲಿಂಗ್ಟನ್
ನವೆಂಬರ್ 20 2ನೇ ಟಿ20, ಮೌಂಟ್ ಮೌಂಗನಿ
ನವೆಂಬರ್ 22 3ನೇ ಟಿ20, ಸ್ಥಳ: ನೇಪಿಯರ್
ನವೆಂಬರ್ 25 ಮೊದಲ ಏಕದಿನ, ಸ್ಥಳ: ಆಕ್ಲೆಂಡ್
ನವೆಂಬರ್ 27 2ನೇ ಏಕದಿನ, ಸ್ಥಳ: ಹ್ಯಾಮಿಲ್ಟನ್
ನವೆಂಬರ್ 30 3ನೇ ಏಕದಿನ, ಸ್ಥಳ: ಕ್ರೈಸ್ಟ್‌ಚರ್ಚ್
ಇದನ್ನೂ ಓದಿ | IPL 2023 | ಪಂಜಾಬ್ ಕಿಂಗ್ಸ್ನಿಂದ ಕನ್ನಡಿಗ ಮಯಾಂಕ್ ಅಗರ್ವಾಲ್, ಶಾರುಖ್, ಸ್ಮಿತ್ಗೆ ಕೋಕ್!