Site icon Vistara News

IND VS NZ | ಟಾಸ್​ ಗೆದ್ದ ನ್ಯೂಜಿಲ್ಯಾಂಡ್​; ಭಾರತಕ್ಕೆ ಬ್ಯಾಟಿಂಗ್​ ಆಹ್ವಾನ

New Zealand vs India, 2nd T20

ಮೌಂಟ್​ ಮೌಂಗನಿ: ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿ ನಿರಾಸೆಯಲ್ಲಿದ್ದ ಭಾರತ ಮತ್ತು ನ್ಯೂಜಿಲ್ಯಾಂಡ್​ ತಂಡ, ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದ್ದು ಟಾಸ್​ ಗೆದ್ದ ಕೇನ್​ ವಿಲಿಯಮ್ಸನ್​ ಬೌಲಿಂಗ್​​ ಆಯ್ಕೆ ಮಾಡಿದ್ದಾರೆ. ಅದರಂತೆ ಹಾರ್ದಿಕ್​ ಪಾಂಡ್ಯ ಪಡೆ ಮೊದಲು ಬ್ಯಾಟ್​​ ಮಾಡಲಿದೆ.

ಮೌಂಟ್​ ಮೌಂಗನಿಯ ಬೇ ಓವಲ್ ಸ್ಟೇಡಿಯಂನಲ್ಲಿ ನಡೆಯುವ ಈ ಪಂದ್ಯ ಬ್ಯಾಟರ್​ಗಳಿಗೆ ಹೆಚ್ಚು ನೆರವು ನೀಡಲಿದೆ. ಕಾರಣ ಇಲ್ಲಿನ ಪಿಚ್ ಬ್ಯಾಟಿಂಗ್​ ಸ್ನೇಹಿಯಾಗಿದ್ದು, ಹೊಡಿ ಬಡಿ ಆಟಗಾರರಿಗೆ ಹೇಳಿ ಮಾಡಿಸಿದಂತಿದೆ. ಇನ್ನು ಈ ಗ್ರೌಂಡ್‌ನಲ್ಲಿ ಚಿಕ್ಕದಾದ ಬೌಂಡರಿ ಇರುವುದರಿಂದ ಬೌಲರ್​ಗಳಿಗೆ ದೊಡ್ಡ ಸವಾಲಾಗಿದೆ. ಒಂದು ಸಣ್ಣ ತಪ್ಪು ಮಾಡಿದರು ಚೆಂಡು ಕ್ಷಣಾರ್ದದಲ್ಲಿ ಬೌಂಡರಿ ಗೆರೆ ದಾಟಲಿದೆ. ಅದರಲ್ಲೂ ಪ್ರಮುಖವಾಗಿ ಸ್ಪಿನ್ನರ್‌ಗಳಿಗೆ ಈ ಪಿಚ್​ ದೊಡ್ಡ ಸವಾಲಾನಿಂದ ಕೂಡಿದೆ.

ತಂಡಗಳು

ಭಾರತ

ಇಶಾನ್​ ಕಿಶನ್​, ಶ್ರೇಯಸ್​ ಅಯ್ಯರ್​, ದೀಪಕ್​ ಹೂಡಾ, ಸೂರ್ಯಕುಮಾರ್​ ಯಾದವ್​, ರಿಷಭ್​ ಪಂತ್​, ಹಾರ್ದಿಕ್​ ಪಾಂಡ್ಯ, ವಾಷಿಂಗ್ಟನ್​ ಸುಂದರ್​, ಅರ್ಶ್​ದೀಪ್​ ಸಿಂಗ್​, ಮೊಹಮ್ಮದ್​ ಸಿರಾಜ್​​, ಭುವನೇಶ್ವರ್​ ಕುಮಾರ್​. ಯಜುವೇಂದ್ರ ಚಹಲ್​.

ನ್ಯೂಜಿಲೆಂಡ್​

ಫಿನ್​ ಅಲೆನ್​, ಡೆವೋನ್ ಕಾನ್ವೆ, ಕೇನ್​ ವಿಲಿಯಮ್ಸನ್​, ಗ್ಲೆನ್​ ಫಿಲಿಪ್ಸ್​, ಡ್ಯಾರಿಲ್​ ಮಿಚೆಲ್​, ಜೇಮ್ಸ್​ ನೀಶಮ್​, ಮಿಚೆಲ್​ ಸ್ಯಾಂಟ್ನರ್​, ಟಿಮ್​ ಸೌಥಿ, ಲಾಕಿ ಫರ್ಗ್ಯುಸನ್​, ಆಡಂ ಮಿಲ್ನೆ. ಐಶ್​ ಸೋಧಿ.

ಇದನ್ನೂ ಓದಿ | Team India | ಮಾಜಿ ಕೋಚ್ ರವಿ ಶಾಸ್ತ್ರಿಗೆ ಪ್ರತ್ಯುತ್ತರ ಕೊಟ್ಟ ಸ್ಪಿನ್ನರ್‌ ಆರ್ ಅಶ್ವಿನ್‌

Exit mobile version