Site icon Vistara News

IND VS NZ: ಭಾರತ-ಕಿವೀಸ್​ 2ನೇ ಟಿ20 ಪಂದ್ಯದ ಕಳಪೆ ಪಿಚ್: ಲಕ್ನೋ ಪಿಚ್ ಕ್ಯುರೇಟರ್ ವಜಾ

IND VS NZ

#image_title

ಲಕ್ನೋ: ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯಕ್ಕೆ (IND VS NZ) ಕಳಪೆ ಪಿಚ್​ ನಿರ್ಮಿಸಿದ ಕ್ಯುರೇಟರ್​ ಅವರನ್ನು ಹುದ್ದೆಯಿಂದ ಜಾಗೊಳಿಸಲಾಗಿದೆ. ಈ ವಿಚಾರವನ್ನು ಲಕ್ನೋ ಕ್ರಿಕೆಟ್ ಸಂಸ್ಥೆ ಖಚಿತಪಡಿಸಿದೆ.

ಲಕ್ನೋದ ಏಕ್ನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ(ಜನವರಿ 29) ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ನ್ಯೂಜಿಲ್ಯಾಂಡ್​ 99 ರನ್​ಗಳನ್ನು ಬಾರಿಸಿತ್ತು. ಅದಕ್ಕೆ ಪ್ರತಿಯಾಗಿ ಆಡಿದ ಭಾರತ ತಂಡ 101 ರನ್​ ಬಾರಿಸಲು ಹೆಣಗಾಡಿತ್ತು. ಕೊನೇ ಒಂದು ಎಸೆತ ಬಾಕಿ ಇರುವಾಗ ಜಯ ಸಾಧಿಸಿತ್ತು. ಇಡೀ ಪಂದ್ಯದಲ್ಲಿ ಒಂದೇ ಒಂದು ಸಿಕ್ಸರ್​ ದಾಖಲಾಗಿರಲಿಲ್ಲ. ಈ ಬೆಳವಣಿಗೆಗೆ ನಾಯಕ ಹಾರ್ದಿಕ್​ ಪಾಂಡ್ಯ ಬೇಸರ ವ್ಯಕ್ತಪಡಿಸಿದ್ದರು.

ಇದೀಗ ಈ ಪಂದ್ಯಕ್ಕೆ ಕಳಪೆ ಪಿಚ್​ ಸಿದ್ಧಪಡಿಸಿದ ಕ್ಯುರೇಟರ್ ಅವರನ್ನು ವಜಾಗೊಳಿಸಲಾಗಿದೆ. ನೂತನ ಕ್ಯುರೇಟರ್ ಆಗಿ ಅನುಭವಿ ಸಂಜೀವ್ ಕುಮಾರ್ ಯಾದವ್ ಅವರನ್ನು ನೇಮಿಸಲಾಗಿದೆ ಎಂದು ಲಕ್ನೋ ಕ್ರಿಕೆಟ್ ಸಂಸ್ಥೆ ಹೇಳಿದೆ.

ಇದನ್ನೂ ಓದಿ INDvsNZ T20 : ಪಿಚ್ ತಯಾರಿಸಿದ ಕ್ಯುರೇಟರ್​ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಾಯಕ ಹಾರ್ದಿಕ್​ ಪಾಂಡ್ಯ

“ಒಂದು ತಿಂಗಳಲ್ಲಿ ಪಿಚ್ ಸಮಸ್ಯೆ ಬಗೆಹರಿಯಲಿದೆ. ಮುಂದಿನ ಐಪಿಎಲ್​ ವೇಳೆಗೆ ಈ ಪಿಚ್​ ಸಂಪೂರ್ಣ ಸ್ಪರ್ಧಾತ್ಮಕ ರೀತಿಯಲ್ಲಿ ಸಿದ್ಧವಾಗಲಿದೆ. ಮಧ್ಯದ ಪಿಚ್ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಸೀಮಿತವಾಗಿರಿಸಬೇಕಿತ್ತು. ಅಲ್ಲಿ ಇತರೆ ಪಂದ್ಯಗಳನ್ನು ನಡೆಸಿದ್ದೇ ಪಿಚ್ ಸಮಸ್ಯೆಗೆ ಕಾರಣ” ಎಂದು ಲಕ್ನೋ ಕ್ರಿಕೆಟ್ ಸಂಸ್ಥೆ ಹೇಳಿದೆ.

Exit mobile version