Site icon Vistara News

IND VS NZ | ವಾಷಿಂಗ್ಟನ್‌ ಸುಂದರ್‌ ಹೊಡೆತಕ್ಕೆ ಮನಸೋತ ಪ್ರೈಮ್‌ ವಿಡಿಯೊ

washington sundar

ಆಕ್ಲೆಂಡ್‌: ನ್ಯೂಜಿಲ್ಯಾಂಡ್‌ ವಿರುದ್ಧ ಈಡನ್‌ ಪಾರ್ಕ್‌ನಲ್ಲಿ ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದ ವೇಳೆ ಟೀಮ್‌ ಇಂಡಿಯಾ ಆಟಗಾರ ವಾಷಿಂಗ್ಟನ್‌ ಸುಂದರ್‌ ನಡೆಸಿದ ಬ್ಯಾಟಿಂಗ್‌ ಶೈಲಿಗೆ ಭಾರತದಲ್ಲಿ ನೇರ ಪ್ರಸಾರದ ಹಕ್ಕು ಹೊಂದಿರುವ “ಪ್ರೈಮ್‌ ವಿಡಿಯೊ” ಫಿದಾ ಆಗಿದೆ.

ಭಾರತದ ಬ್ಯಾಟಿಂಗ್‌ ವೇಳೆ ಮ್ಯಾಟ್ ಹೆನ್ರಿ ಎಸೆದ ಬಾಲ್‌ಗೆ ಬೌಂಡರಿ ಬಾರಿಸಲು ವಾಷಿಂಗ್ಟನ್‌ ಸುಂದರ್ ವೈಡ್ ಗೆರೆಯ ಮೇಲೆ ಬಿದ್ದು, ಬ್ಯಾಟ್ ಬೀಸಿ ಫೋರ್‌ ಹೊಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ವಿಡಿಯೋವನ್ನು “ಪ್ರೈಮ್‌ ವಿಡಿಯೊ ಇನ್‌” (PRIME Video IN) ಟ್ವಿಟರ್ ಅಧಿಕೃತ ಖಾತೆಯಲ್ಲಿ ಶೇರ್ ಮಾಡಿಕೊಂಡು “ಅತಿ ಸುಂದರ್‌” ಹೊಡೆತ ಎಂದು ತಿಳಿಸಿದೆ.

ರವೀಂದ್ರ ಜಡೇಜಾ ಅನುಪಸ್ಥಿತಿಯಲ್ಲಿ ಮಿಂಚುತ್ತಿರುವ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಈ ಪಂದ್ಯದಲ್ಲಿ 16 ಎಸೆತ ಎದುರಿಸಿ ತಲಾ ಮೂರು ಸಿಕ್ಸರ್‌ ಮತ್ತು ಫೋರ್‌ ಬಾರಿಸುವ ಮೂಲಕ ಅಜೇಯ 37 ರನ್‌ ಗಳಿಸಿದರು. ಇನ್ನು ಈ ಪಂದ್ಯದಲ್ಲಿ ಭಾರತ ತಂಡ ಕಿವೀಸ್‌ ವಿರುದ್ಧ 7 ವಿಕೆಟ್‌ ಸೋಲು ಕಂಡಿತು.

ಇದನ್ನೂ ಓದಿ | IND VS NZ | ಲ್ಯಾಥಮ್‌, ವಿಲಿಯಮ್ಸನ್‌ ಬ್ಯಾಟಿಂಗ್‌ ಆರ್ಭಟಕ್ಕೆ ಮಂಕಾದ ಟೀಮ್‌ ಇಂಡಿಯಾ; 7 ವಿಕೆಟ್‌ ಸೋಲು

Exit mobile version