Site icon Vistara News

IND VS NZ | ಭಾರತ ಮತ್ತು ನ್ಯೂಜಿಲ್ಯಾಂಡ್​ ವಿರುದ್ಧದ ಅಂತಿಮ ಟಿ20 ಪಂದ್ಯಕ್ಕೆ ಮಳೆ ಅಡ್ಡಿ; ಟಾಸ್​ ವಿಳಂಬ

Toss delayed due to wet outfield

ನೇಪಿಯನರ್​: ಭಾರತ ಮತ್ತು ನ್ಯೂಜಿಲ್ಯಾಂಡ್​ ವಿರುದ್ಧದ ಅಂತಿಮ ಟಿ20 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು ಟಾಸ್ ವಿಳಂಬಗೊಂಡಿದೆ.​ ಒಂದೊಮ್ಮೆ ಪಂದ್ಯ ನಡೆಯದಿದ್ದರೆ ಸರಣಿ ಭಾರತದ ಕೈವಶವಾಗಲಿದೆ. ಈಗಾಗಲೇ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಕಾರಣ ಸರಣಿ ಭಾರತದ ಪಾಲಾಗಲಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು.

ಪಂದ್ಯ ನಡೆಯುವ ಮೆಕ್‌ಲೀನ್‌ ಪಿಚ್‌ ಬ್ಯಾಟಿಂಗ್‌ಗೆ ಪೂರಕವಾಗಿದ್ದು ಇತ್ತಂಡಗಳೂ ಭರ್ಜರಿ ಬ್ಯಾಟ್‌ ಬೀಸಲು ಸಜ್ಜಾಗಿದೆ. ಪ್ರಮುಖವಾಗಿ ಹೊಡೆಬಡಿಯ ದಾಂಡಿಗರಿಗೆ ಈ ಸ್ಟೇಡಿಯಮ್‌ ಸಾಕಷ್ಟು ನೆರವಾಗಲಿದೆ.

ಸಾಂಭವ್ಯ ತಂಡಗಳು

ಭಾರತ

ಇಶಾನ್​ ಕಿಶನ್​, ಶ್ರೇಯಸ್​ ಅಯ್ಯರ್​, ದೀಪಕ್​ ಹೂಡಾ, ಸೂರ್ಯಕುಮಾರ್​ ಯಾದವ್​, ರಿಷಭ್​ ಪಂತ್​, ಹಾರ್ದಿಕ್​ ಪಾಂಡ್ಯ, ವಾಷಿಂಗ್ಟನ್​ ಸುಂದರ್​, ಅರ್ಶ್​ದೀಪ್​ ಸಿಂಗ್​, ಮೊಹಮ್ಮದ್​ ಸಿರಾಜ್​​, ಭುವನೇಶ್ವರ್​ ಕುಮಾರ್​. ಯಜುವೇಂದ್ರ ಚಹಲ್​.

ನ್ಯೂಜಿಲೆಂಡ್​

ಫಿನ್​ ಅಲೆನ್​, ಡೆವೋನ್ ಕಾನ್ವೆ, ಮಾರ್ಕ್​ ಚಾಪ್​ಮನ್​​, ಗ್ಲೆನ್​ ಫಿಲಿಪ್ಸ್​, ಡ್ಯಾರಿಲ್​ ಮಿಚೆಲ್​, ಜೇಮ್ಸ್​ ನೀಶಮ್​, ಮಿಚೆಲ್​ ಸ್ಯಾಂಟ್ನರ್​, ಟಿಮ್​ ಸೌಥಿ(ನಾಯಕ) , ಲಾಕಿ ಫರ್ಗ್ಯುಸನ್​, ಆಡಂ ಮಿಲ್ನೆ. ಐಶ್​ ಸೋಧಿ.

ಇದನ್ನೂ ಓದಿ | INDvsNZ | ಭಾರತ- ನ್ಯೂಜಿಲೆಂಡ್ ಪಂದ್ಯದ ಪಿಚ್‌ ರಿಪೋರ್ಟ್‌, ಪಂದ್ಯದ ಸಮಯ ಇಲ್ಲಿದೆ

Exit mobile version