ಧರ್ಮಶಾಲಾ: ಇಲ್ಲಿ ನಡೆದ ಭಾರತ ಮತ್ತು ನ್ಯೂಜಿಲ್ಯಾಂಡ್(India vs New Zealand) ನಡುವಣ ವಿಶ್ವಕಪ್ನ 21ನೇ ಪಂದ್ಯ ಡಿಜಿಟಲ್(Disney+ Hotstar IND vs NZ) ವೀಕ್ಷಣೆಯಲ್ಲಿ ದಾಖಲೆ ಬರೆದಿದೆ. ಈ ಪಂದ್ಯದಲ್ಲಿ ಭಾರತ 4 ವಿಕೆಟ್ಗಳ ಗೆಲುವು ಸಾಧಿಸಿ ಸತತ 5ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 10 ಅಂಕದೊಂದಿಗೆ ಅಗ್ರಸ್ಥಾನ ಪಡೆದಿದೆ. ಈ ಪಂದ್ಯವನ್ನು
ಇಂಡೋ-ಪಾಕ್ ದಾಖಲೆ ಪತನ
ಇತ್ತಂಡಗಳ ಈ ಪಂದ್ಯವನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ 4.3 ಕೋಟಿ ವೀಕ್ಷಣೆ ಮಾಡಿದ್ದಾರೆ. ಮೊಬೈಲ್ ಲೈವ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಇತಿಹಾಸದಲ್ಲೇ ಇದು ದಾಖಲೆಯ ವೀಕ್ಷಣೆ ಎನಿಸಿಕೊಂಡಿದೆ. ಇದಕ್ಕೂ ಮುನ್ನ ಅಕ್ಟೋಬರ್ 14ರಂದು ಅಹಮದಾಬಾದ್ನಲ್ಲಿ ನಡೆದ ಭಾರತ ಮತ್ತು ಪಾಕ್ ಪಂದ್ಯವನ್ನು 3.5 ಕೋಟಿ ಮಂದಿ ವೀಕ್ಷಣೆ ಮಾಡಿದ್ದರು. ಇದು ಈ ವರೆಗಿನ ದಾಖಲೆಯಾಗಿತ್ತು. ಆದರೆ ಈಗ ಈ ದಾಖಲೆ ಪತನಗೊಂಡಿದೆ.
ಇಂಡೋ-ಪಾಕ್ ಪಂದ್ಯಕ್ಕೂ ಮುನ್ನ ಡಿಜಿಟಲ್ ಮಾಧ್ಯಮದ ಮೂಲಕ ಕ್ರಿಕೆಟ್ ಪಂದ್ಯವೊಂದನ್ನು ಅತ್ಯಧಿಕ ಮಂದಿ ವೀಕ್ಷಣೆ ಮಾಡಿದ ದಾಖಲೆ ಈ ಬಾರಿಯ ಐಪಿಎಲ್ ಫೈನಲ್ ಪಂದ್ಯದ ಹೆಸರಿನಲ್ಲಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವೆ ಅಮಹದಾಬಾದ್ನಲ್ಲೇ ನಡೆದಿದ್ದ ಪ್ರಶಸ್ತಿ ಕಾಳಗವನ್ನು ಜಿಯೋ ಸಿನಿಮಾದಲ್ಲಿ 3.2 ಕೋಟಿ ಮಂದಿ ವೀಕ್ಷಿಸಿದ್ದರು. ಇದನ್ನು ಇಂಡೋ-ಪಾಕ್ ನಟುವಣ ಪಂದ್ಯ 3.5 ಕೋಟಿ ವೀಕ್ಷಣೆ ಕಾಣುವ ಮೂಲಕ ಮುರಿದಿತ್ತು. ಆದರೆ ಆಗ ಕಿವೀಸ್ ಮತ್ತು ಭಾರತ ನಡುವಣ ಪಂದ್ಯ ಈ ದಾಖಲೆಯನ್ನು ಓವರ್ ಟೇಕ್ ಮಾಡಿದೆ. ಸೆಮಿಫೈನಲ್ ಮತ್ತು ಫೈನಲ್ ಮುಖಾಮುಖಿ ಇದಕ್ಕಿಂತಲೂ ಅಧಿಕ ವೀಕ್ಷಣೆ ಕಾಣುವ ನಿರೀಕ್ಷೆ ಇದೆ.
20 ವರ್ಷಗಳ ಬಳಿಕ ಗೆಲುವು
ಭಾರತ ಕಳೆದ 20 ವರ್ಷದಿಂದ ಐಸಿಸಿ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಮಾತ್ರ ಕಂಡಿತ್ತು. ಭಾನುವಾರದ ಪಂದ್ಯದಲ್ಲಿ ನಾಲ್ಕು ವಿಕೆಟ್ಗಳ ಗೆಲುವು ಸಾಧಿಸಿ 20 ವರ್ಷಗಳ ಗೆಲುವಿನ ಬರವನ್ನು ನೀಗಿಸಿತು. ಭಾರತ ಕೊನೆಯ ಬಾರಿ ಕಿವೀಸ್ ವಿರುದ್ಧದ ಗೆಲುವು ಸಾಧಿಸಿದ್ದು 2003ರಲ್ಲಿ. ಅಂದು ಸೌರವ್ ಗಂಗೂಲಿ ಸಾರಥ್ಯಲ್ಲಿ ಭಾರತ 7 ವಿಕೆಟ್ಗಳ ಗೆಲುವು ಸಾಧಿಸಿತ್ತು. ಅಂತಿಮ ಹಂತದಲ್ಲಿ ವಿರಾಟ್ ಕೊಹ್ಲಿ 95 ರನ್ ಹಾಗೂ ರವೀಂದ್ರ ಜಡೇಜಾ ಸಿಡಿಸಿದ ಅಜೇಯ 39 ರನ್ ಬಾರಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ನಾಯಕ ರೋಹಿತ್ ಶರ್ಮ 46 ರನ್ ಬಾರಿಸಿದರು. ಘಾತಕ ದಾಳಿ ನಡೆಸಿ 54 ರನ್ಗೆ 5 ವಿಕೆಟ್ ಕಿತ್ತ ಮೊಹಮ್ಮದ್ ಶಮಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ ‘ಆಧುನಿಕ ಕ್ರಿಕೆಟ್ನ ಅತ್ಯುತ್ತಮ ಫಿನಿಶರ್’; ಕೊಹ್ಲಿಯನ್ನು ಹಾಡಿ ಹೊಗಳಿದ ಬದ್ಧ ವೈರಿ
India vs New Zealand#INDvNZ #ODIWorldCup2023 #ICCWorldCup2023 #INDvsNZ pic.twitter.com/2EVB9wqAC2
— RVCJ Media (@RVCJ_FB) October 21, 2023
ಹಾಲಿ ಚಾಂಪಿಯನ್ ಮುಂದಿನ ಎದುರಾಳಿ
ಭಾರತ ತಂಡದ ಆಟಗಾರರು ಇನ್ನು ಒಂದು ವಾರಗಳ ಬಳಿಕ ಪಂದ್ಯ ಆಡಲಿದ್ದಾರೆ. ಮುಂದಿನ ಎದುರಾಳಿ ಹಾಲಿ ಚಾಂಪಿಯನ್ ಇಂಗ್ಲೆಂಡ್. ಈ ಪಂದ್ಯ ಅಕ್ಟೋಬರ್ 29ರಂದು ನಡೆಯಲಿದೆ. ಇಲ್ಲಿ ಗೆದ್ದರೆ ಭಾರತದ ಸೆಮಿಫೈನಲ್ ಟಿಕೆಟ್ ಅಧಿಕೃತಗೊಳ್ಳಲಿದೆ. ಇತ್ತಂಡಗಳ ಈ ಮುಖಾಮುಖಿ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.