ಹ್ಯಾಮಿಲ್ಟನ್: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ ಸೋಲನುಭವಿಸಿದ ಟೀಮ್ ಇಂಡಿಯಾ(IND VS NZ ) ಎರಡನೇ ಏಕ ದಿನ ಪಂದ್ಯವನ್ನಾಡಲು ಹ್ಯಾಮಿಲ್ಟನ್ ತಲುಪಿದೆ. ಭಾನುವಾರ ಈ ಮುಖಾಮುಖಿ ನಡೆಯಲಿದೆ. ಇನ್ನು ಈ ಪಂದ್ಯದ ಪಿಚ್ ರಿಪೋರ್ಟ್ ಮತ್ತು ಹವಾಮಾನ ವರದಿ ಈ ಕೆಳಗಿನಂತಿದೆ.
ಪಿಚ್ ರಿಪೋರ್ಟ್
ಹ್ಯಾಮಿಲ್ಟನ್‌ನ ಸೆಡೆನ್ ಪಾರ್ಕ್ ಪಿಚ್ ಬ್ಯಾಟಿಂಗ್‌ಗೆ ಅನುಕೂಲಕರವಾಗಿದೆ. ಇತ್ತೀಚೆಗೆ ನಡೆದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ 333 ರನ್ ಗಳಿಸಿತ್ತು. ಆದ್ದರಿಂದ ಈ ಪಂದ್ಯ ಕೂಡ ಹೈ ಸ್ಕೋರಿಂಗ್ ಗೇಮ್ ಆಗುವ ಸಾಧ್ಯತೆ ಇದೆ.
ಮಳೆ ಸಾಧ್ಯತೆ ಅಧಿಕ
ಆಕ್ಲೆಂಡ್‌ನಲ್ಲಿ ನಡೆದ ಮೊದಲ ಏಕ ದಿನ ಪಂದ್ಯಕ್ಕೂ ಮಳೆ ಅಡ್ಡಿಪಡಿಸಲಿದೆ ಎಂದು ಹೇಳಲಾಗಿತ್ತು. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿರಲಿಲ್ಲ. ಇದೀಗ ಹ್ಯಾಮಿಲ್ಟನ್‌ನಲ್ಲಿ ನಡೆಯುವ ಎರಡನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಂದೊಮ್ಮೆ ಮಳೆಯಿಂದ ಪಂದ್ಯ ನಡೆಯದೇ ಇದ್ದರೆ ಈಗಾಗಲೇ ಒಂದು ಸೋಲು ಕಂಡಿರುವ ಭಾರತಕ್ಕೆ ಹಿನ್ನಡೆಯಾಗಲಿದೆ.
ಇದನ್ನೂ ಓದಿ | INDvsNZ | ಗತಕಾಲದ ಯೋಜನೆಯಿಂದ ಸರಣಿ ಗೆಲುವು ಅಸಾಧ್ಯ; ಭಾರತ ತಂಡವನ್ನು ತೆಗಳಿದ ಇಂಗ್ಲೆಂಡ್ ಕ್ರಿಕೆಟಿಗ