Site icon Vistara News

IND VS NZ | ನ್ಯೂಜಿಲ್ಯಾಂಡ್​ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದ ಶ್ರೇಯಸ್​ ಅಯ್ಯರ್!

shreyas iyer

ಹೈದರಾಬಾದ್​: ನ್ಯೂಜಿಲ್ಯಾಂಡ್(IND VS NZ)​ ವಿರುದ್ಧದ ಏಕದಿನ ಸರಣಿಗೂ ಮುನ್ನ ಟೀಮ್​ ಇಂಡಿಯಾಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಟಾರ್​ ಆಟಗಾರ ಶ್ರೇಯಸ್​ ಅಯ್ಯರ್ ಗಾಯದಿಂದ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಈ ವಿಚಾರವನ್ನು ಬಿಸಿಸಿಐ ಖಚಿತಪಡಿಸಿದೆ.

ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್​ ಅಯ್ಯರ್​ ಬೆನ್ನು ನೋವಿನ ಸಮಸ್ಯೆಯಿಂದ ನ್ಯೂಜಿಲ್ಯಾಂಡ್​ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ ಎಂದು ಬಿಸಿಸಿಐ ಮಂಗಳವಾರ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ. ಶ್ರೇಯಸ್​ ಅಯ್ಯರ್​ ಬದಲು ರಜತ್​ ಪಾಟೀದಾರ್​ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಭಾರತ ಮತ್ತು ನ್ಯೂಜಿಲ್ಯಾಂಡ್​ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ಬುಧವಾರ ಹೈದರಾಬಾದ್​ನ ರಾಜೀವ್​ ಗಾಂಧಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಗಾಯಗೊಂಡು ಕಿವೀಸ್​ ಏಕದಿನ ಸರಣಿಯಿಂದ ಹೊರಬಿದ್ದಿರುವ ಶ್ರೇಯಸ್​ ಅಯ್ಯರ್​ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿ ವೇಳೆಗೆ ತಂಡ ಸೇರುವ ವಿಶ್ವಾಸವಿದೆ.

ಇದನ್ನೂ ಓದಿ | India In T20I Series At Home | 2021ರ ಬಳಿಕ ಭಾರತ ಕ್ರಿಕೆಟ್​ ತಂಡ ತವರಿನಲ್ಲಿ ಆಡಿದ ಟಿ20 ಕ್ರಿಕೆಟ್​ ಸರಣಿಯ ಫಲಿತಾಂಶಗಳು

Exit mobile version