Site icon Vistara News

IND VS NZ: ಏಕದಿನ ಸರಣಿಯಲ್ಲಿ ನೂತನ ದಾಖಲೆ ಬರೆದ ಶುಭಮನ್​ ಗಿಲ್​

IND VS NZ

ಇಂದೋರ್​: ನ್ಯೂಜಿಲ್ಯಾಂಡ್​(IND VS NZ) ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್​ ನಡೆಸಿ ಶತಕ ಬಾರಿಸಿದ ಶುಭಮನ್​ ಗಿಲ್(shubman gill)​ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿ​ದ್ದಾರೆ.

ಇಂದೋರ್​ನ ಹೋಳ್ಕರ್​ ಸ್ಟೇಡಿಯಂನಲ್ಲಿ ನಡೆದ ಈ ಮುಖಾಮುಖಿಯಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ತಂಡಕ್ಕೆ ಗಿಲ್​ ಉತ್ತಮ ಆರಂಭದ ಜತೆಗೆ ಶತಕ ಬಾರಿಸಿ ಮಿಂಚಿದರು. ಇದೇ ವೇಳೆ ಅವರು ನೂತನ ದಾಖಲೆಯೊಂದನ್ನು ಬರೆದಿದ್ದಾರೆ. 3 ಪಂದ್ಯಗಳ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಪಾಕಿಸ್ತಾನ ಕ್ರಿಕೆಟ್​ ತಂಡದ ಬಾಬರ್ ಅಜಂ ಅವರ ದಾಖಲೆಯನ್ನು ಗಿಲ್ ಸರಿಗಟ್ಟಿದ್ದಾರೆ.

ಈ ಸರಣಿಯಲ್ಲಿ ಶುಭಮನ್ ಗಿಲ್ ಒಟ್ಟು 360 ರನ್ ಗಳಿಸಿದರು. 2016 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಬರ್ ಅಜಂ ಕೂಡ 360 ರನ್​ಗಳನ್ನು ಬಾರಿಸಿದ್ದರು. ಇದೀಗ ಈ ಸಾಧನೆಯನ್ನು ಗಿಲ್​ ಸರಿಗಟ್ಟಿದ್ದಾರೆ.

ಶುಭಮನ್ ಗಿಲ್​​ ಈ ಪಂದ್ಯದಲ್ಲಿ 78 ಎಸೆತಗಳಿಂದ 122 ರನ್​ ಪೇರಿಸಿ ಮಿಂಚಿದರು. ಅವರ ಈ ಶತಕದ ಇನಿಂಗ್ಸ್​ನಲ್ಲಿ ಬರೋಬ್ಬರಿ 13 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್​ ಸಿಡಿಯಿತು. ಇವರ ಈ ಬ್ಯಾಟಿಂಗ್​ ಸಾಹಸದಿಂದ ಭಾರತ 385 ರನ್​ ಪೇರಿಸಿದೆ.

ಇದನ್ನೂ ಓದಿ | IND VS NZ: ರೋಹಿತ್​-ಗಿಲ್​ ಶತಕ; ಕಿವೀಸ್​ ಗೆಲುವಿಗೆ 386 ರನ್​ ಗುರಿ

Exit mobile version