ಅಹಮದಾಬಾದ್: ನ್ಯೂಜಿಲ್ಯಾಂಡ್(IND VS NZ) ಮತ್ತು ಭಾರತ ವಿರುದ್ಧದ ಅಂತಿಮ ಟಿ20 ಪಂದ್ಯ ಬುಧವಾರ ಅಹಮದಾಬಾದ್‌ನಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಈ ಮೈದಾನದಲ್ಲಿ ದಾಖಲಾದ ಟಿ20 ಪಂದ್ಯಗಳ ದಾಖಲೆಯ ಮಾಹಿತಿ ಇಂತಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇದುವರೆಗೆ 6 ಟಿ20 ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ 6 ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದೆ. 2 ಪಂದ್ಯಗಳಲ್ಲಿ ಪ್ರವಾಸಿ ತಂಡ ಗೆಲುವು ಸಾಧಿಸಿದೆ. ಆರು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮತ್ತು ಚೇಸಿಂಗ್ ನಡೆಸಿದ ತಂಡಗಳು ತಲಾ ಮೂರು ಬಾರಿ ಗೆದ್ದಿವೆ.
ಮೊದಲು ಬ್ಯಾಟಿಂಗ್ ನಡೆಸಿದ ತಂಡದ ಎವರೇಜ್ ಸ್ಕೋರ್ 174, ಚೇಸಿಂಗ್ ಎವರೇಜ್ ಸ್ಕೋರ್ 166. ಒಂದು ಬಾರಿ ಮಾತ್ರ ಇಲ್ಲಿ 200ರ ಗಡಿ ದಾಖಲಾಗಿದೆ. 2021ರಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 2 ವಿಕೆಟ್ಗೆ 224 ರನ್ ಪೇರಿಸಿತ್ತು. ಇದು ಈ ಮೈದಾನದಲ್ಲಿ ದಾಖಲಾದ ಇದುವರೆಗಿನ ಅತ್ಯಧಿಕ ಟಿ20 ಮೊತ್ತವಾಗಿದೆ. ಅತಿ ಕಡಿಮೆ ಮೊತ್ತ ಬಾರಿಸಿದ ದಾಖಲೆ ಇಂಗ್ಲೆಂಡ್ ಹೆಸರಿನಲ್ಲಿದೆ. ಭಾರತ ವಿರುದ್ಧ 124 ರನ್ ಗಳಿಸಿತ್ತು.
ಈ ಮೈದಾನದಲ್ಲಿ ಅತಿ ಹೆಚ್ಚು ವೈಯಕ್ತಿಕ ಮೊತ್ತ ಪೇರಿಸಿದ ದಾಖಲೆ ಇಂಗ್ಲೆಂಡ್ ತಂಡದ ಜಾಸ್ ಬಟ್ಲರ್ ಹೆಸರಿನಲ್ಲಿದೆ. ಭಾರತ ವಿರುದ್ಧ 2021ರಲ್ಲಿ ಅಜೇಯ 80 ರನ್ ಬಾರಿಸಿದ್ದರು. ಬೌಲಿಂಗ್ನಲ್ಲಿ ಜೋಫ್ರಾ ಆರ್ಚರ್ 33ಕ್ಕೆ 4 ವಿಕೆಟ್ ಕಿತ್ತಿರುವುದು ಇದುವರೆಗಿನ ಬೆಸ್ಟ್ ಬೌಲಿಂಗ್ ರೆಕಾರ್ಡ್ ಆಗಿದೆ. ಅತಿ ಹೆಚ್ಚು ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಲ್ಲಿದೆ. ಕೊಹ್ಲಿ 6 ಇನಿಂಗ್ಸ್ನಲ್ಲಿ 258 ರನ್ ಗಳಿಸಿದ್ದಾರೆ.
ಇದನ್ನೂ ಓದಿ IND VS NZ: ಭಾರತ-ನ್ಯೂಜಿಲ್ಯಾಂಡ್ ಅಂತಿಮ ಟಿ20 ಪಂದ್ಯದ ಪಿಚ್ ರಿಪೋರ್ಟ್
ಶಾರ್ದೂಲ್ ಠಾಕೂರ್ ಇಲ್ಲಿ 5 ಪಂದ್ಯಗಳಿಂದ 8 ವಿಕೆಟ್ ಉರುಳಿಸಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಒಟ್ಟು 81 ಸಿಕ್ಸರ್, 179 ಬೌಂಡರಿ ಸಿಡಿದಿದೆ. ಜಾಸ್ ಬಟ್ಲರ್ 10 ಸಿಕ್ಸರ್ ಮತ್ತು ಕೊಹ್ಲಿ 23 ಬೌಂಡರಿ ಬಾರಿಸಿದ್ದಾರೆ.