ವೆಲ್ಲಿಂಗ್ಟನ್: ನ್ಯೂಜಿಲೆಂಡ್(IND VS NZ ) ವಿರುದ್ಧದ ಟಿ20 ಸರಣಿಗೆ ಈಗಾಗಲೇ ವೆಲ್ಲಿಂಗ್ಟನ್ ತಲುಪಿರುವ ಭಾರತ ತಂಡ ಸಿದ್ಧತೆ ಆರಂಭಿಸಿದೆ. ನವೆಂಬರ್ 18 ರಿಂದ ಈ ಸರಣಿ ಆರಂಭವಾಗಲಿದೆ. ಬುಧವಾರ ಅಭ್ಯಾಸ ಆರಂಭಿಸುವುದಕ್ಕೆ ಮುನ್ನ ಉಭಯ ತಂಡದ ನಾಯಕಾರದ ಹಾರ್ದಿಕ್ ಪಾಂಡ್ಯ ಮತ್ತು ಕೇನ್ ವಿಲಿಯಮ್ಸನ್ ಸರಣಿಯ ಟ್ರೋಫಿಯನ್ನು ಬಿಡುಗಡೆ ಮಾಡಿದ್ದಾರೆ.
2024ರ ಟಿ20 ವಿಶ್ವ ಕಪ್ ಮತ್ತು ಮುಂದಿನ ವರ್ಷ ಭಾರತದಲ್ಲೇ ನಡೆಯಲಿರುವ ಏಕದಿನ ವಿಶ್ವ ಕಪ್ ಗಮನದಲ್ಲಿಟ್ಟುಕೊಂಡು ತಂಡವನ್ನು ಕಟ್ಟಲು ಬಿಸಿಸಿಐ ಯುವಪಡೆಯನ್ನು ನ್ಯೂಜಿಲೆಂಡ್ ಸರಣಿಗೆ ಆಯ್ಕೆ ಮಾಡಿದೆ. ಹಿರಿಯ ಆಟಗಾರರಾದ ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಸೇರಿದಂತೆ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್‌ಗೂ ಕೂಡ ವಿಶ್ರಾಂತಿ ನೀಡಲಾಗಿದ್ದು. ವಿವಿಎಎಸ್ ಲಕ್ಷ್ಮಣ್ ಟಿ20 ಮತ್ತು ಏಕದಿನ ಸರಣಿಯಲ್ಲಿ ತಂಡದ ತರಬೇತುದಾರನಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಕ್ರೊಕೊಡೈಲ್ ಬೈಕ್ ಏರಿದ ಪಾಂಡ್ಯ, ವಿಲಿಯಮ್ಸನ್
ಉಭಯ ತಂಡದ ನಾಯಕರಾದ ಹಾರ್ದಿಕ್ ಮತ್ತು ವಿಲಿಯಮ್ಸನ್ ಸರಣಿಗೂ ಮುನ್ನ ಕ್ರೊಕೊಡೈಲ್ ಬೈಕ್ ಏರಿ ಟ್ರೋಫಿ ಅನಾವರಣದ ಫೋಟೋಶೂಟ್ ಮಾಡಿದ್ದು ಎಲ್ಲರನ್ನು ಅಚ್ಚರಿಗೊಳಿಸಿತು. ವಾಸ್ತವವಾಗಿ, ಪಾಂಡ್ಯ ಮತ್ತು ವಿಲಿಯಮ್ಸನ್ ಕುಳಿತುಕೊಂಡಿದ್ದ ರಿಕ್ಷಾವನ್ನು ವೆಲ್ಲಿಂಗ್ಟನ್‌ನಲ್ಲಿ ಕ್ರೊಕೊಡೈಲ್ ಬೈಕ್ ಎಂದು ಕರೆಯಲಾಗುತ್ತದೆ. ಈ ಬೈಕ್ನಲ್ಲಿ ಪ್ರಯಾಣಿಸುವವರು ಪೆಡಲ್ ತುಳಿಯುವ ಮೂಲಕ ಪ್ರಯಾಣಿಸಬೇಕಾಗುತ್ತದೆ. ಓರಿಯಂಟಲ್ ಕೊಲ್ಲಿಯಿಂದ ಕುಮುಟುಟೊ ವಾಟರ್‌ಫ್ರಂಟ್‌ಗೆ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಪ್ರಯಾಣಿಸಲು ಈ ಬೈಕ್ ಅನ್ನು ಬಳಸಲಾಗುತ್ತದೆ. ಇದೀಗ ಪಾಂಡ್ಯ ಮತ್ತು ವಿಲಿಯಮ್ಸನ್ ಈ ಬೈಕ್ನಲ್ಲಿ ಸಾಗಿದ ವಿಡಿಯೊ ಎಲ್ಲಡೆ ವೈರಲ್ ಆಗಿದೆ.
ಇದನ್ನೂ ಓದಿ | Novak Djokovic | ಮುಂದಿನ ವರ್ಷ ಆಸ್ಟ್ರೇಲಿಯಾ ಓಪನ್ ಆಡಲಿದ್ದಾರಾ ನೊವಾಕ್ ಜೊಕೋವಿಕ್?