ವೆಲ್ಲಿಂಗ್ಟನ್: ಪ್ರವಾಸಿ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಎರಡನೇ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹವಾಮಾನ ಇಲಾಖೆಯ ಮಾಹಿತಿಯಂತೆಯೇ ಹ್ಯಾಮಿಲ್ಟನ್‌ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ.
ವೆಲಿಂಗ್ಟನ್ನ ಸೀಡನ್ ಪಾರ್ಕ್ನಲ್ಲಿ ಏರ್ಪಟ್ಟಿದ ಈ ಮುಖಾಮುಖಿಯಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ಮಾಡಲು ಆರಂಭಿಸಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಜೋಡಿ 4.5 ಓವರ್‌ಗಳಲ್ಲಿ 22 ರನ್ ಗಳಿಸಿತು. ಈ ವೇಳೆ ಮಳೆ ಸುರಿದ ಕಾರಣ ಆಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಮಳೆ ನಿಂತ ಬಳಿಕ ಮತ್ತೆ ಪಂದ್ಯ ಆರಂಭಿಸಿದರೂ 2 ಎಸೆತ ಕಾಣುವ ವೇಳೆ ಮತ್ತೆ ಮಳೆ ಕಾಡಿತು. ಇದರಿಂದ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಪಂದ್ಯವನ್ನು 29 ಓವರ್ಗಳಿಗೆ ಸೀಮಿತಗೊಳಿಸಲಾಯಿತು.
ಇದಾದ ಬಳಿಕ ಮತ್ತೆ ಪಂದ್ಯ ಆರಂಭಗೊಂಡು ಭಾರತ 12.5 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 89 ರನ್ ಗಳಿಸಿತ್ತು. ಆದರೆ ಮತ್ತೆ ಮಳೆಯಿಂದಾಗಿ ಪಂದ್ಯವನ್ನು ನಿಲ್ಲಿಸಲಾಯಿತು. ಹ್ಯಾಮಿಲ್ಟನ್‌ನಲ್ಲಿ ಭಾನುವಾರ ಧಾರಾಕಾರ ಮಳೆ ಸುರಿದಿದ್ದು, ಸುದೀರ್ಘ ಕಾಯುವಿಕೆಯ ಬಳಿಕ ಉಭಯ ತಂಡಗಳ ಜತೆ ಚರ್ಚಿಸಿ ಅಂತಿಮವಾಗಿ ಅಂಪೈರ್ಗಳು ಪಂದ್ಯವನ್ನು ಫಲಿತಾಂಶವಿಲ್ಲದೆ ರದ್ದುಗೊಳಿಸಲಾಯಿತು.
ಈಗಾಗಲೇ ಮೊದಲ ಪಂದ್ಯವನ್ನು ಸೋತ ಭಾರತ ತಂಡಕ್ಕೆ ಈ ಪಂದ್ಯ ರದ್ದಾದ ಕಾರಣ ಸರಣಿ ವಶಪಡಿಸುವ ಕನಸು ಮಳೆಯಿಂದ ಕೊಚ್ಚಿಹೋಯಿತು.
ಇದನ್ನೂ ಓದಿ | INDvsPAK | ರಮೀಜ್ ರಾಜಾಗೆ ಖಡಕ್ ಉತ್ತರ ಕೊಟ್ಟ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್