ಹೈದರಾಬಾದ್: ಪ್ರವಾಸಿ ನ್ಯೂಜಿಲ್ಯಾಂಡ್(IND VS NZ) ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 12 ರನ್ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಆದರೆ ಅಂತಿಮ ಕ್ಷಣದಲ್ಲಿ ಬ್ರೇಸ್ ವೆಲ್ ವಿಕೆಟ್ ಪಡೆಯಲು ಸಲಹೆ ನೀಡಿದ ಆಟಗಾರ ಯಾರೆಂದು ಶಾರ್ದೂಲ್ ಠಾಕೂರ್ ಬಹಿರಂಗಪಡಿಸಿದ್ದಾರೆ.
ಬುಧವಾರ ಹೈದರಾಬಾದ್ನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮುಖಾಮುಖಿಯ ಕೊನೆಯ ಐದು ಎಸೆತಗಳಲ್ಲಿ ಕಿವೀಸ್ ಗೆಲುವಿಗೆ 13 ರನ್ ಅಗತ್ಯವಿತ್ತು. ಈ ವೇಳೆ ಶಾರ್ದೂಲ್ ಠಾಕೂರ್ ಎಸೆತಕ್ಕೆ ಬ್ರೇಸ್ ವೆಲ್ ಔಟಾದರು. ಇದರೊಂದಿಗೆ ಭಾರತ ಗೆಲುವು ಸಾಧಿಸಿತು. ಈ ವಿಕೆಟ್ ಪಡೆಯಲು ಮಾಜಿ ನಾಯಕ ವಿರಾಟ್ ಕೊಹ್ಲಿ ಸಲಹೆ ನೀಡಿದ್ದಾಗಿ ಶಾರ್ದೂಲ್ ಠಾಕೂರ್ ಪಂದ್ಯದ ಬಳಿಕ ಬಹಿರಂಗಪಡಿಸಿದರು.
ಮೊದಲ ಎಸೆತ ಸಿಕ್ಸರ್ ಬಾರಿಸಿದಾಗ ನಾನು ಆತಂಕಗೊಂಡೆ ಇದೇ ಕಾರಣದಿಂದ ಮುಂದಿನ ಎಸೆತ ವೈಡ್ ಆಗಿತ್ತು. ಈ ವೇಳೆ ವಿರಾಟ್ ಭಾಯ್ ನನ್ನ ಬಳಿ ಬಂದು ಆತಂಕ ಪಡಬೇಡ ಬ್ಯಾಟ್ಸ್‌ಮನ್ ಔಟ್ ಮಾಡಲು ಯಾರ್ಕರ್ ಲೆಂತ್ ಬೌಲ್ ಮಾಡುವಂತೆ ಹೇಳಿದರು. ಅದರಂತೆ ಮುಂದಿನ ಎಸೆತವನ್ನು ಯಾರ್ಕರ್ ಲೆಂತ್ ಎಸೆದೆ ಇದು ಯಶಸ್ವಿಯಾಯಿತು ಎಂದು ಹೇಳಿದರು. ಬ್ರೇಸ್ ವೆಲ್ ಅವರು ಎಲ್ ಬಿಡಬ್ಲ್ಯೂ ರೀತಿಯಲ್ಲಿ ಔಟಾದರು. ಕೊಹ್ಲಿ ಈ ಸಲಹೆ ನೀಡದಿದ್ದರೆ ಪಂದ್ಯದ ಗತಿಯೇ ಬದಲಾಗುವ ಸಾಧ್ಯತೆ ಇತ್ತು ಎಂದು ಕೊಹ್ಲಿಯ ಅತ್ಯಮೂಲ್ಯ ಸಲಹೆಯನ್ನು ಶಾರ್ದೂಲ್ ಸ್ಮರಿಸಿಕೊಂಡರು.
ಇದನ್ನೂ ಓದಿ | IND VS NZ | ಇದು ಕ್ರಿಕೆಟ್ ಅಲ್ಲ, ಇಶಾನ್ ಕಿಶನ್ಗೆ ಸುನೀಲ್ ಗವಾಸ್ಕರ್ ಎಚ್ಚರಿಕೆ ನೀಡಿದ್ದು ಏಕೆ?