ಹೈದರಾಬಾದ್: ಪ್ರವಾಸಿ ನ್ಯೂಜಿಲ್ಯಾಂಡ್(IND VS NZ) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 12 ರನ್ಗಳ ಗೆಲುವು ದಾಖಲಿಸಿದೆ. ಆದರೆ ಈ ಪಂದ್ಯದಲ್ಲಿ ಇಶಾನ್ ಕಿಶನ್ ಮಾಡಿದ ಒಂದು ತಪ್ಪಿಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ನ್ಯೂಜಿಲ್ಯಾಂಡ್ ತಂಡದ ನಾಯಕ ಟಾಮ್ ಲ್ಯಾಥಮ್ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಇಶಾನ್ ಮೋಜಿಗಾಗಿ ಬೇಲ್ಸ್ ಹಾರಿಸಿದ್ದಾರೆ. ಬಳಿಕ ಲ್ಯಾಥಮ್ ಹಿಡ್ ವಿಕೆಟ್ ಆಗಿದ್ದಾರೆ ಎಂದು ಅಂಪೈರ್ಗೆ ಮನವಿ ಮಾಡಿದ್ದಾರೆ. ಇದೇ ವೇಳೆ ಸ್ಕ್ವೇರ್ ಲೆಗ್ ಅಂಪೈರ್ ನಿತಿನ್ ಮೆನನ್ ಅವರು ಮೂರನೇ ಅಂಪೈರ್ ನಿರ್ಣಯವನ್ನು ತೆಗೆದುಕೊಳ್ಳಲು ಮುಂದಾದರು. ಆದರೆ ರೀಪ್ಲೆಯಲ್ಲಿ ಲ್ಯಾಥಮ್ ಬ್ಯಾಟ್ ವಿಕೆಟ್ಗೆ ಬಡಿಯದಿರುವುದು ಸ್ಪಷ್ಟವಾಗಿ ಗೋಚರಿಸಿತು. ಇದು ಇಶಾನ್ ಕಿಶನ್ ಗ್ಲೌಸ್ ತಾಗಿ ಬೇಲ್ಸ್ ಬಿದ್ದಿರುವುದು ಕಂಡುಬಂದು. ಬಳಿಕ ಪೀಲ್ಡ್ ಅಂಪೈರ್ ನಾಟ್ ಔಟ್ ಎಂದು ಹೇಳಿದರು.
ಇದೇ ವೇಳೆ ವೀಕ್ಷಕ ವಿವರಣೆ ಮಾಡುತ್ತಿದ್ದ ಸುನೀಲ್ ಗವಾಸ್ಕರ್ ಇಶನ್ ಕಿಶನ್ ಅವರ ಈ ನಡೆಯನ್ನು ಖಂಡಿಸಿದ್ದಾರೆ. “ಇದು ನಿಜವಾದ ಕ್ರಿಕೆಟ್ ಅಲ್ಲ” ಎಂದು ಬೈದಿದ್ದಾರೆ. ಒಬ್ಬ ಪ್ರಬುದ್ಧ ಆಟಗಾರ ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಬುದ್ದಿವಾದ ಹೇಳಿದ್ದಾರೆ. ಜತೆಗೆ ಹಲವು ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಕೂಡ ಇಶಾನ್ ಕಿಶನ್ ಅವರ ಈ ನಡೆಯನ್ನು ಖಂಡಿಸಿದ್ದಾರೆ. ಇಶಾನ್ ಅವರು ಬೇಲ್ಸ್ ಹಾರಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ | INDvsNZ ODI | ಭಾರತಕ್ಕೆ ಗಿಲ್ ಮಾಂಗೆ ಮೋರ್; ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕ ದಿನ ಪಂದ್ಯದಲ್ಲಿ 12 ರನ್ ಜಯ