ಆಕ್ಲೆಂಡ್: ಈಗಾಗಲೇ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದಿಂದ ಗೆದ್ದು ಬೀಗಿದ ಟೀಮ್ ಇಂಡಿಯಾ(IND VS NZ) ಇದೀಗ ಏಕದಿನ ಸರಣಿಯತ್ತ ಗಮನ ಹರಿಸಲಿದೆ. ನ್ಯೂಜಿಲ್ಯಾಂಡ್ ವಿರುದ್ಧ ಶುಕ್ರವಾರ (ನವೆಂಬರ್ 25) ಆಕ್ಲೆಂಡ್‌ನಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಗೆಲುವಿನ ಶುಭಾರಂಭ ಪಡೆಯಲು ಎದುರು ನೋಡುತ್ತಿದೆ. ಅತ್ತ ಅರ್ಶ್ದೀಪ್ ಸಿಂಗ್ ಈ ಪಂದ್ಯದಲ್ಲಿ ಆಡುವ ಮೂಲಕ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.
ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಹಲವು ಯುವ ಆಟಗಾರರು ಸಿಕ್ಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಭವಿಷ್ಯದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಹಂಬಲದಲ್ಲಿದ್ದಾರೆ. ಅದರಂತೆ ಟಿ20 ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಎಡಗೈ ವೇಗಿ ಅರ್ಶ್ದೀಪ್ ಸಿಂಗ್ ಕೂಡಾ ಇದೀಗ ಏಕದಿನ ಕ್ರಿಕೆಟ್ನಲ್ಲಿಯೂ ತಮ್ಮ ಬೌಲಿಂಗ್ ಕರಾಮತ್ತು ತೋರಿಸಲು ಎದುರು ನೋಡುತ್ತಿದ್ದಾರೆ .
ಸದ್ಯ 21 ಪಂದ್ಯಗಳಲ್ಲಿ 33 ವಿಕೆಟ್ ಕಿತ್ತಿರುವ ಅರ್ಶ್ದೀಪ್ ಸಿಂಗ್ 2022ರ ಋತುವಿನಲ್ಲಿ ಟಿ20 ಪಂದ್ಯಗಳಲ್ಲಿ ಭಾರತದ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಖ್ಯಾತಿ ಪಡೆದಿದ್ದಾರೆ.
ಇದನ್ನೂ ಓದಿ | Samson VS Pant | ಅವಕಾಶ ನೀಡಿದ್ದು ಸಾಕು ಪಂತ್ಗೆ ಗೇಟ್ ಪಾಸ್ ನೀಡಿ; ಸೋಧಿ ಆಗ್ರಹ