Site icon Vistara News

IND vs PAK: ನಂ.1 ಬ್ಯಾಟರ್​ ಆಗಿದ್ದರೆ ಪಾಕ್​ ವಿರುದ್ಧ ಆಡಿ ತೋರಿಸು; ಸೂರ್ಯಕುಮಾರ್​ಗೆ ಸವಾಲೆಸೆದ ಪಾಕ್​ ಆಟಗಾರ

IND vs PAK

IND vs PAK: "Come And Score Against Pakistan": India Star Asked To Prove He's No. 1

ಕರಾಚಿ: ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಹೈವೋಲ್ಟೇಜ್​ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ ಪಾಕಿಸ್ತಾನ(India vs Pakistan) ತಂಡದ ಮಾಜಿ ಆಟಗಾರ ಕಮ್ರಾನ್ ಅಕ್ಮಲ್(Kamran Akmal)​ ಅವರು ಟೀಮ್​ ಇಂಡಿಯಾದ ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್​ ಯಾದವ್​ಗೆ(Suryakumar Yadav) ಸವಾಲೊಂದನ್ನು ಹಾಕಿದ್ದಾರೆ. ನೀನು ಟಿ20 ಮಾದರಿಯಲ್ಲಿ ನಂಬರ್​ 01 ಎಂದು ಸಾಬೀತುಪಡಿಸಬೇಕೆಂದರೆ ಮೊದಲು ಪಾಕಿಸ್ತಾನದ ವಿರುದ್ಧ ಚೆನ್ನಾಗಿ ಆಡಿ ತೋರಿಸು ಎಂದು ಸವಾಲೆಸೆದಿದ್ದಾರೆ. ಅವರ ಈ ಹೇಳಿಕೆ ಭಾರೀ ವೈರಲ್​ ಆಗಿದೆ.

‘ಸೂರ್ಯಕುಮಾರ್​ ಯಾದವ್​ ಅವರು ದ್ವಿಪಕ್ಷೀಯ ಸರಣಿಯಲ್ಲಿ ಉತ್ತಮವಾಗಿ ಬ್ಯಾಟಿಂಗ್​ ನಡೆಸುತ್ತಾರೆ. ಈ ಬಗ್ಗೆ ಯಾವುದೇ ಸಂಶಯವಿಲ್ಲ. ಆದರೆ ನಾನು ನೋಡಿದಂತೆ ಸೂರ್ಯಕುಮಾರ್​ ಯಾದವ್​ ಟಿ-20 ಮಾದರಿಯಲ್ಲಿ ಪಾಕಿಸ್ತಾನದ ವಿರುದ್ಧ ಹೆಚ್ಚು ರನ್​ ಗಳಿಸಿದ್ದನ್ನು ನಾನು ನೋಡಿಲ್ಲ. ಆದ್ದರಿಂದ ಅವರು ನಂ. 1 ಆಟಗಾರನಾಗಿದ್ದರೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಹೆಚ್ಚು ರನ್​ ಗಳಿಸಿ ತೋರಿಸಲಿ’ ಎಂದು ಕಮ್ರಾನ್ ಅಕ್ಮಲ್ ಸವಾಲು ಹಾಕಿದ್ದಾರೆ.

ಕಮ್ರಾನ್ ಅಕ್ಮಲ್ ಅವರ ಈ ಹೇಳಿಕೆಗೆ ಭಾರತೀಯ ಕ್ರಿಕೆಟ್​ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ಕ್ರಿಕೆಟ್​ ಶಿಶು ಅಮೆರಿಕ ವಿರುದ್ಧವೇ ನಿಮ್ಮಿಂದ ಗೆಲ್ಲಲು ಸಾಧ್ಯವಾಗಿಲ್ಲ. ಇನ್ನು ಭಾರತ ವಿರುದ್ಧ ಗೆಲ್ಲುವುದು ಕನಸಿನ ಮಾತು. ನಿಮ್ಮ ತಂಡದ ಆಟಗಾರರಿಗೆ ಮೊದಲು ಸರಿಯಾಗಿ ಬ್ಯಾಟಿಂಗ್​ ನಡೆಸಿ ರನ್​ ಗಳಿಸಲು ಹೇಳಿ ಎಂದಿದ್ದಾರೆ.

ಇದನ್ನೂ ಓದಿ IND vs PAK: ಭಾರತ-ಪಾಕ್​ ಪಂದ್ಯಕ್ಕೆ ಸಚಿನ್ ಹಾಜರ್; ಮಾಜಿ ಅಧ್ಯಕ್ಷ ಒಬಾಮಗೂ ಇರದ ಭದ್ರತೆಯಲ್ಲಿ ನಡೆಯಲಿದೆ ಪಂದ್ಯ

ಭಾರತವೇ ಫೇವರಿಟ್​


ಕೆಳ ದಿನಗಳ ಹಿಂದೆ ಅಕ್ಮಲ್ ಅವರು ಸಂದರ್ಶನವೊಂದರಲ್ಲಿ ಪಾಕಿಸ್ತಾನ ವಿರುದ್ಧ ಭಾರತವೇ ಗೆಲ್ಲುವ ಫೇವರಿಟ್​ ತಂಡ ಎಂದು ಭವಿಷ್ಯ ನುಡಿದಿದ್ದರು. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನ​ ತಂಡದ ಪ್ರದರ್ಶನವನ್ನು ನೋಡುವಾಗ ಅದು ಕೂಡ ಭಾರತದಂತಹ ಬಲಿಷ್ಠ ತಂಡದ ವಿರುದ್ಧ ಗೆಲ್ಲುವುದು ಕನಸಿನ ಮಾತು. ಐರ್ಲೆಂಡ್‌ನಂತಹ ಸಣ್ಣ ತಂಡಗಳ ವಿರುದ್ಧವೇ ಪಾಕಿಸ್ತಾನ ಸೋಲು ಕಂಡಿದೆ. ಹೀಗಿರುವಾಗ ಭಾರತದ ವಿರುದ್ಧ ಗೆಲ್ಲಲು ಸಾಧ್ಯವೇ? ಗುಣಮಟ್ಟದ ಕ್ರಿಕೆಟ್ ಆಡುವ ಮತ್ತು ಎಲ್ಲಾ ತಯಾರಿಗಳೊಂದಿಗೆ ಬಂದಿರುವ ಭಾರತ ತಂಡವು ಪಾಕಿಸ್ತಾನವನ್ನು ಸೋಲಿಸುವುದರಲ್ಲಿ ಅನುಮಾನವೇ ಬೇಡ” ಎಂದು ಹೇಳಿದ್ದರು.

ಬಲಾಬಲ

ಒಟ್ಟು 7 ಬಾರಿ ಇತ್ತಂಡಗಳು ಟಿ20 ವಿಶ್ವಕಪ್​ನಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 6 ಪಂದ್ಯ ಗೆದ್ದರೆ, ಪಾಕಿಸ್ತಾನ ಒಂದು ಪಂದ್ಯ ಗೆದ್ದಿದೆ. ಭಾರತಕ್ಕೆ ಸೋಲು ಎದುರಾದದ್ದು 2021ರಲ್ಲಿ ದುಬೈನಲ್ಲಿ ನಡೆದಿದ್ದ ಟೂರ್ನಿಯಲ್ಲಿ. ವಿರಾಟ್​ ಕೊಹ್ಲಿ ಸಾರಥ್ಯದ ಟೀಮ್​ ಇಂಡಿಯಾ 10 ವಿಕೆಟ್​ಗಳ ಹೀನಾಯ ಸೋಲು ಕಂಡಿತ್ತು. ಒಟ್ಟಾರೆಯಾಗಿ ಉಭಯ ತಂಡಗಳು ಇದುವರೆಗೆ ಟಿ20 ಮಾದರಿಯಲ್ಲಿ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗರಿಷ್ಠ 9 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿದ್ದರೂ ಕೂಡ ಪಾಕ್​ ಸವಾಲನ್ನು ಅಷ್ಟು ಹಗುರವಾಗಿ ಕಡೆಗಣಿಸುವಂತಿಲ್ಲ.

Exit mobile version