Site icon Vistara News

IND vs PAK: ಕೊಹ್ಲಿ ಜತೆಗಿನ ಹೋಲಿಕೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ; ಬಾಬರ್​ ಅಜಂ

babar azam and virat kohli

ಮುಲ್ತಾನ್​: ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಏಷ್ಯಾಕಪ್​(Asia Cup 2023) ಪಂದ್ಯ ಆರಂಭಕ್ಕೂ ಮುನ್ನವೇ ಬಾಬರ್​ ಅಜಂ(Babar Azam) ಮತ್ತು ವಿರಾಟ್​ ಕೊಹ್ಲಿಯ(Virat Kohli) ಮಧ್ಯೆ ಯಾರು ಶ್ರೇಷ್ಠರು ಎಂಬ ವಿಷಯಕ್ಕೆ ಸಂಬಂಧಿಸಿ ಚರ್ಚೆಗಳು ನಡೆಯುತ್ತಿದೆ. ಇದೇ ವಿಚಾರವಾಗಿ ಪಾಕ್​ ನಾಯಕ ಬಾಬರ್​ ಮುಕ್ತವಾಗಿ ಮಾತನಾಡಿದ್ದಾರೆ.

ನೇಪಾಳ ವಿರುದ್ಧದ ಪಂದ್ಯದಲ್ಲಿ ವಿಸ್ಫೋಟ ಬ್ಯಾಟಿಂಗ್​ ನಡೆಸಿ ಶತಕ ಬಾರಿಸಿದ್ದ ಬಾಬರ್​ ಅವರು ಪಂದ್ಯದ ಬಳಿಕ ಸ್ಟಾರ್​ ಸ್ಪೋರ್ಟ್ಸ್ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರಿಗೆ ನಿಮ್ಮ ಮತ್ತು ಕೊಹ್ಲಿ ಮಧ್ಯೆಯ ಹೋಲಿಕೆ ಬಗ್ಗೆ ಅಭಿಪ್ರಾಯವೇನು? ನಿಮ್ಮಿಬ್ಬರಲ್ಲಿ ರಾರು ಶ್ರೇಷ್ಠರು? ಎಂದ ಪ್ರಶ್ನೆಯೊಂದನ್ನು ಕೇಳಲಾಯಿತು. ​

ಆತ್ಮವಿಶ್ವಾಸ ಹೆಚ್ಚುತ್ತದೆ

ಸ್ಟಾರ್ ಸ್ಪೋರ್ಟ್ಸ್‌ ಸಂದರ್ಶಕರ ಪ್ರಶ್ನೆಗೆ ಉತ್ತರಿಸಿದ ಬಾಬರ್​, “ನಿಮ್ಮ ಬಗ್ಗೆ ಯಾರಾದರೂ ಈ ರೀತಿಯ ಕಾಮೆಂಟ್‌ಗಳನ್ನು ರವಾನಿಸಿದಾಗ ಅದು ತುಂಬಾ ಒಳ್ಳೆಯದು. ನನ್ನ ಮತ್ತು ವಿರಾಟ್ ಕೊಹ್ಲಿ ಮಧ್ಯೆಯ ಕಮೆಂಟ್​ಗಳು ತುಂಬಾ ಆಹ್ಲಾದಕರವಾಗಿವೆ. ಅದು ನನಗೆ ತುಂಬಾ ಹೆಮ್ಮೆಯ ಕ್ಷಣವಾಗಿದೆ. ಮತ್ತು ಇದು ತುಂಬಾ ಒಳ್ಳೆಯದಾಗಿದೆ. ಏಕೆಂದರೆ ಕೆಲವು ವಿಷಯಗಳು ಮತ್ತು ಕೆಲವು ಪ್ರಶಂಸೆಗಳು ನಮ್ಮ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅವರೊಬ್ಬರ ಸ್ಟಾರ್​ ಆಟಗಾರ” ಎಂದು ಬಾಬರ್ ತಿಳಿಸಿದರು.

ನಾನು ಕಲಿಯಲು ಸಾಕಷ್ಟಿದೆ

“2019 ರ ವಿಶ್ವಕಪ್‌ನಲ್ಲಿ ನಾನು ವಿರಾಟ್​ ಕೊಹ್ಲಿಯನ್ನು ಮೊದಲ ಬಾರಿ ಭೇಟಿಯಾದೆ. ಆಗ ಅವರು ಉತ್ತುಂಗದ ಫಾರ್ಮ್​ನಲ್ಲಿದ್ದರು. ಈಗ ಕೂಡ ಇದ್ದಾರೆ. ನಾನು ಅವರಿಂದ ಕ್ರಿಕೆಟ್​ನಲ್ಲಿ ಕಲಿಯಬೇಕಿರುವುದು ತಂಬಾ ಇದೆ. ಅವರನ್ನು ಭೇಟಿಯಾದ ಪ್ರತಿ ಸಲವು ಹಲವು ಸಲಹೆಯನ್ನು ಪಡೆದಿದ್ದೇನೆ. ವಿಶ್ವಕಪ್ ಕ್ರಿಕೆಟ್​ ಕೂಡ ಹತ್ತಿರ ಇರುವ ಕ್ಷಣದಲ್ಲಿ ದಿಗ್ಗಜ ಆಟಗಾರನಿಂದ ಸಲಹೆ ಪಡೆದರೆ ಉತ್ತಮ. ಅವರ ಮೇಲೆ ಅಪಾರ ಗೌರವವಿದೆ ಎಂದು ಹೇಳಿದರು.

ಇದನ್ನೂ ಓದಿ Asia Cup 2023: ಭಾರತ-ಪಾಕ್​ ಏಷ್ಯಾಕಪ್ ಇತಿಹಾಸವೇ ಬಲು ರೋಚಕ

ಭಾರತ, ನೇಪಾಳ ಮತ್ತು ಪಾಕಿಸ್ತಾನ ʼಎʼ ಗುಂಪಿನಲ್ಲಿ ಸ್ಥಾನ ಪಡೆದಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ʼಬಿʼ ಗುಂಪಿನಲ್ಲಿ ಕಾಣಿಸಿಕೊಂಡಿದೆ. ಭಾರತ ಮತ್ತು ಪಾಕ್​ ನಡುವಿನ ಪಂದ್ಯ ಸೆಪ್ಟೆಂಬರ್​ 2ರಂದು ಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ.

ಬಹುನಿರೀಕ್ಷಿತ ಪಂದ್ಯಕ್ಕೆ ಮಳೆಯ ಚಿಂತೆ

ಭಾರತಕ್ಕೆ ಈ ಕೂಟದ ಮೊದಲ ಪಂದ್ಯವಾದರೆ, ಪಾಕ್​ಗೆ ಎರಡನೇ ಪಂದ್ಯ. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಉಭಯ ದೇಶಗಳ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ. ಆದರೆ ಅಭಿಮಾನಿಗಳ ಈ ಆಸೆಗೆ ಮಳೆ ತಣ್ಣೀರೆರಚುವ ಸಾಧ್ಯತೆ ಇದೆ. ಹೌದು ಪಂದ್ಯ ನಡೆಯುವ ದಿನ ಕ್ಯಾಂಡಿಯಲ್ಲಿ ಶೇ. 90ರಷ್ಟು ಗುಡುಗು ಸಹಿತ ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಭಾರತ ತಂಡ

ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್‌ ಬುಮ್ರಾ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಶಮಿ, ಇಶಾನ್‌ ಕಿಶನ್‌, ಶಾರ್ದೂಲ್‌ ಠಾಕೂರ್‌, ಅಕ್ಸರ್‌ ಪಟೇಲ್‌, ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ, ಪ್ರಸಿದ್ಧ್‌ ಕೃಷ್ಣ, ಸಂಜು ಸ್ಯಾಮ್ಸನ್‌ (ಮೀಸಲು ಆಟಗಾರ).

Exit mobile version