Site icon Vistara News

IND vs PAK: ಶತಕ ಬಾರಿಸಿದರೂ ಕೊಹ್ಲಿ ಸಾಧನೆಯನ್ನು ಕಡೆಗಣಿಸಿದ ಗೌತಮ್​ ಗಂಭೀರ್​

Take a bow, Virat Kohli! And he does

ಕೊಲಂಬೊ: ಟೀಮ್​ ಇಂಡಿಯಾದ ಮಾಜಿ ಆಟಗಾರ ಗೌತಮ್​ ಗಂಭೀರ್​(Gautam Gambhir) ಮತ್ತು ವಿರಾಟ್​ ಕೊಹ್ಲಿ(Virat Kohli) ಒಂದಲ್ಲ ಒಂದು ವಿಚಾರದಲ್ಲಿ ಹಾವು ಮುಂಗುಸಿಯಂತೆ ಕಚ್ಚಾಟ ನಡೆಸುತ್ತಲೇ ಇರುತ್ತಾರೆ. ಅದರಲ್ಲೂ ಗಂಭೀರ್​ ಅವರು ಕೊಹ್ಲಿ ಏನೇ ಮಾಡಿದರೂ ಅದನ್ನು ದೊಡ್ಡ ತಪ್ಪು ಎಂದು ಬಹಿರಂಗ ಹೇಳಿಕೆ ಮೂಲಕ ಟೀಕಿಸುತ್ತಿರುತ್ತಾರೆ. ಜತಗೆ ಕೊಹ್ಲಿ ಮಾಡಿದ ಸಾಧನೆಯನ್ನು ಕೀಳುಮಟ್ಟದಲ್ಲಿ ಬಿಂಬಿಸುತ್ತಾರೆ. ಇದೀಗ ಪಾಕಿಸ್ತಾನ(IND vs PAK) ವಿರುದ್ಧ ಶತಕ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ವಿಚಾರದಲ್ಲಿ ಕೊಹ್ಲಿಯನ್ನು(virat kohli and gautam gambhir) ಗಂಭೀರ್​ ಟೀಕಿಸಿದ್ದಾರೆ.

ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿದ್ದು ಸರಿಯಲ್ಲ

ವಿರಾಟ್​ ಕೊಹ್ಲಿ ಅವರು ಪಾಕ್​ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಹಕವು ದಾಖಲೆ ಜತೆಗೆ ಶತಕ ಬಾರಿಸಿ ಸಂಭ್ರಮಿಸಿದ್ದರು. ಕೇವಲ 94 ಎಸೆತದಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ ಅಜೇಯ 122 ರನ್​ ಗಳಿಸಿದ್ದರು. ಅಲ್ಲದೆ ಅತಿ ವೇಗವಾಗಿ 13 ಸಾವಿರ ರನ್​ ಪೂರ್ತಿಗೊಳಿಸಿದ ದಾಖಲೆಯನ್ನು ನಿರ್ಮಿಸಿಸಿದ್ದರು. ಈ ಎಲ್ಲ ಕಾರಣದಿಂದ ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಆದರೆ ಇದನ್ನು ಗಂಭೀರ್​ ಟೀಕಿಸಿದ್ದಾರೆ.

ಕುಲ್​ದೀಪ್​ ಈ ಪ್ರಶಸ್ತಿಗೆ ಅರ್ಹ

ಲೈವ್​ ಕಾರ್ಯಕ್ರಮದಲ್ಲೇ ಮಾತನಾಡಿದ ಗಂಭೀರ್​, “ನನ್ನ ಪ್ರಕಾರ ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡುವ ಅಗತ್ಯವಿರಲಿಲ್ಲ. 5 ವಿಕೆಟ್​ ಪಡೆದ ಕುಲ್​ದೀಪ್​​ ಯಾದವ್​ ಅವರಿಗೆ ನ್ಯಾಯಯುತವಾಗಿ ಈ ಪ್ರಶಸ್ತಿ ಸಿಗಬೇಕಿತ್ತು. ಶತಕವನ್ನು ಕೊಹ್ಲಿ ಮಾತ್ರವಲ್ಲ ಕೆ.ಎಲ್​. ರಾಹುಲ್​ ಕೂಡ ಬಾರಿಸಿದ್ದಾರೆ. ಅಲ್ಲದೆ ರೋಹಿತ್​ ಮತ್ತು ಗಿಲ್​ ಕೂಡ ಉತ್ತಮ ಆಟವಾಡಿದ್ದಾರೆ. ಆದರೆ ಇವರೆಲ್ಲರಿಗಿಂತ 8 ಓವರ್​ ಎಸೆದು ಕೇವಲ 25 ರನ್​ಗೆ 5 ವಿಕೆಟ್​ ಪಡೆದ ಕುಲ್​ದೀಪ್​ ಅವರದ್ದು ಉತ್ತಮ ಸಾಧನೆಯಾಗಿದೆ. ಹೀಗಾಗಿ ಅವರು ಈ ಪ್ರಶಸ್ತಿಗೆ ಅರ್ಹ” ಎಂದು ಹೇಳುವ ಮೂಲಕ ಕೊಹ್ಲಿಯನ್ನು ಕಡೆಗಣಿಸಿದ್ದಾರೆ.

ಇದನ್ನೂ ಓದಿ IND vs PAK: ಲೈವ್​ ಕಾಮೆಂಟ್ರಿಯಲ್ಲೇ ಕೊಹ್ಲಿಯನ್ನು ಟೀಕಿಸಿದ ಗೌತಮ್​ ಗಂಭೀರ್​​

“ನ್ಯೂಜಿಲ್ಯಾಂಡ್​ ಅಥವಾ ಆಸ್ಟ್ರೇಲಿಯಾ ಸೇರಿ ಇನ್ನಿತರ ತಂಡದ ವಿರುದ್ಧ ಕುಲ್​ದೀಪ್​ ಅವರು ಈ ಸಾಧನೆ ಮಾಡುತ್ತಿದ್ದರೆ ನಾನು ಅವರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹ ಎಂದು ಹೇಳುತ್ತಿರಲಿಲ್ಲ. ಏಕೆಂದರೆ ಈ ತಂಡಗಳು ಸ್ಪಿನ್​ಗೆ ಆಡುವುದಿಲ್ಲ. ಆದರೆ ಸ್ಪಿನ್​ ದಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲ ಪಾಕಿಸ್ತಾನ ವಿರುದ್ಧ ಅವರು ಈ ಸಾಧನೆ ಮಾಡಿದ್ದು ನಿಜಕ್ಕೂ ಗ್ರೇಟ್. ಆದರೆ ಅವರ ಸಾಧನೆಗೆ ಇಲ್ಲಿ ಸರಿಯಾದ ಪ್ರಶಂಸೆ ಸಿಗದಿರುವುದು ಬೇಸರದ ಸಂಗತಿ” ಎಂದು ಗಂಭೀರ್​ ಹೇಳಿದರು.

ಮೊದಲ ಮುಖಾಮುಖಿಯ ವೇಳೆಯೂ ಕೊಹ್ಲಿಯನ್ನು ಟೀಕಿಸಿದ್ದ ಗಂಭೀರ್​

ಮೊದಲ ಮುಖಾಮುಖಿಯಲ್ಲಿ ಕೊಹ್ಲಿ ಕ್ಲೀನ್​ ಬೌಲ್ಡ್​ ಆದ ವೇಳೆಯೂ ಗಂಭೀರ್​ ಅವರು ಲೈವ್​ ಕಾಮೆಂಟ್ರಿಯಲ್ಲೇ ಟೀಕಿಸಿದ್ದರು. ಶಾಹೀನ್​ ಅಫ್ರಿದಿ ಎಸೆತದಲ್ಲಿ ವಿರಾಟ್​ ಕೊಹ್ಲಿ ಔಟಾಗುತ್ತಿದ್ದಂತೆ “ಈ ಎಸೆತಕ್ಕೆ ಬ್ಯಾಟ್​ ಬೀಸುವ ಅಗತ್ಯವೇ ಇರಲಿಲ್ಲ. ವಿಕೆಟ್​ನ ಮುಂದೆ ಕೂಡ ಈ ಚೆಂಡು ಇರಲಿಲ್ಲ. ಸಂಪೂರ್ಣವಾಗಿ ವಿಕೆಟ್​ ನಿಂದ ಚೆಂಡು ಹೊರ ಭಾಗದಲ್ಲಿತ್ತು. ವಿಶ್ವದ ಶ್ರೇಷ್ಠ ಬೌಲರ್​ಗಳಲ್ಲಿ ಒಬ್ಬರಾಗಿರುವ ಶಾಹೀನ್ ಅಫ್ರಿದಿ ಅವರಂತ ಬೌಲರ್​ಗಳ ಮುಂದೆ ಶ್ರೇಷ್ಠ ಬ್ಯಾಟರ್​ ಈ ಎಸೆತಕ್ಕೆ ಮುಂದೆ ಹೋಗಬೇಕೋ ಅಥವಾ ಹಿಂದೆ ಹೋಗಬೇಕೋ ಎಂಬುದನ್ನು ತಿಳಿದಿರಬೇಕು” ಎಂದು ಹೇಳುವ ಮೂಲಕ ಗಂಭೀರ್​ ಅವರು ಕೊಹ್ಲಿಯನ್ನು ಟೀಕಿಸಿ ವ್ಯಂಗ್ಯವಾಡಿದ್ದರು.

Exit mobile version