Site icon Vistara News

IND vs PAK: ಲೈವ್​ ಕಾಮೆಂಟ್ರಿಯಲ್ಲೇ ಕೊಹ್ಲಿಯನ್ನು ಟೀಕಿಸಿದ ಗೌತಮ್​ ಗಂಭೀರ್​​

Virat Kohli lost his stumps to Shaheen Afridi

ಪಲ್ಲೆಕೆಲೆ: ಪಾಕಿಸ್ತಾನ(IND vs PAK) ವಿರುದ್ಧದ ಶನಿವಾರದ ಏಷ್ಯಾಕಪ್​(Asia cup 2023) ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅವರು ಶಾಹೀನ್​ ಅಫ್ರಿದಿ(Shaheen Afridi) ಅವರ ಎಸೆತದಲ್ಲಿ ಇನ್​ಸೈಡ್​ ಎಡ್ಜ್​ ಮೂಲಕ ಬೌಲ್ಡ್​ ಆದರು. ಕೊಹ್ಲಿ ಔಟಾಗುತ್ತಿದ್ದಂತೆ ಅವರ ಬದ್ಧ ಎದುರಾಳಿ ಗೌತಮ್​ ಗಂಭೀರ್​(Gautam Gambhir) ಅವರು ಲೈವ್​ ಕಾಮೆಂಟ್ರಿಯಲ್ಲೇ ಕೊಹ್ಲಿಯನ್ನು(virat kohli and gautam gambhir) ಟೀಕಿಸಿದ್ದಾರೆ.

ಸ್ಟಾರ್​ ಸ್ಪೋರ್ಟ್ಸ್​ ಕಾಮೆಂಟ್ರಿಯಲ್ಲಿದ್ದ ಗೌತಮ್​ ಗಂಭೀರ್​ ಅವರು ವಿರಾಟ್​ ಕೊಹ್ಲಿ ಔಟಾಗುತ್ತಿದ್ದಂತೆ “ಈ ಎಸೆತಕ್ಕೆ ಬ್ಯಾಟ್​ ಬೀಸುವ ಅಗತ್ಯವೇ ಇರಲಿಲ್ಲ. ವಿಕೆಟ್​ನ ಮುಂದೆ ಕೂಡ ಈ ಚೆಂಡು ಇರಲಿಲ್ಲ. ಸಂಪೂರ್ಣವಾಗಿ ವಿಕೆಟ್​ ನಿಂದ ಚೆಂಡು ಹೊರ ಭಾಗದಲ್ಲಿತ್ತು. ವಿಶ್ವದ ಶ್ರೇಷ್ಠ ಬೌಲರ್​ಗಳಲ್ಲಿ ಒಬ್ಬರಾಗಿರುವ ಶಾಹೀನ್ ಅಫ್ರಿದಿ ಅವರಂತ ಬೌಲರ್​ಗಳ ಮುಂದೆ ಶ್ರೇಷ್ಠ ಬ್ಯಾಟರ್​ ಈ ಎಸೆತಕ್ಕೆ ಮುಂದೆ ಹೋಗಬೇಕೋ ಅಥವಾ ಹಿಂದೆ ಹೋಗಬೇಕೋ ಎಂಬುದನ್ನು ತಿಳಿದಿರಬೇಕು” ಎಂದು ಹೇಳುವ ಮೂಲಕ ಗಂಭೀರ್​ ಅವರು ಕೊಹ್ಲಿಯನ್ನು ಟೀಕಿಸುವ ಜತೆಗೆ ವ್ಯಂಗ್ಯವಾಡಿದ್ದಾರೆ.

ಐಪಿಎಲ್​ನಲ್ಲಿಯೂ ಗಲಾಟೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ 43ನೇ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮೆಂಟರ್​ ಗೌತಮ್ ಗಂಭೀರ್ ನಡುವೆ ವಾಕ್ಸಮರ ನಡೆದಿತ್ತು. ಇದಾದ ಬಳಿಕ ಇಬರಿಬ್ಬರ ಮಧ್ಯೆ ಒಂದಲ್ಲ ಒಂದು ವಿಚಾರದಲ್ಲಿ ಟ್ವೀಟ್​ ಮೂಲಕ ಪರೋಕ್ಷ ಗಲಾಟೆಗಳು ನಡೆಯುತ್ತಲೇ ಇತ್ತು. ಇದೀಗ ಕೊಹ್ಲಿ ಪಾಕ್​ ವಿರುದ್ಧ ಔಟಾದ ಸಂದರ್ಭವನ್ನು ಗಂಭೀರ್​ ಸರಿಯಾಗಿಯೇ ಬಳಸಿಕೊಂಡು ಅವರ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಆದರೆ ಈ ಜಗಳ ಇಲ್ಲಿಗೆ ಮುಗಿಯುದಿಲ್ಲ. ಮುಂದಿನ ಪಂದ್ಯದಲ್ಲಿ ಮತ್ತೆ ಅಣಬೆಯಂತೆ ಹುಟ್ಟಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ Virat Kohli: ಕ್ಲೀನ್​ ಬೌಲ್ಡ್ ಆದ ಕೊಹ್ಲಿ; ಹಳೆ ಚಾಳಿ ಬಿಡದ ಪಾಕ್​ ಮಾಜಿ ಆಟಗಾರ

ಬೆಂಗಳೂರಿನಲ್ಲಿ ನಡೆದ್ಧ ಐಪಿಎಲ್​ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಲಕ್ನೋ ಗೆಲುವು ದಾಖಲಿಸಿತ್ತು. ಗೆಲುವಿನ ಬಳಿಕ ಗಂಭೀರ್​ ಆರ್​ಸಿಬಿ ಅಭಿಮಾನಿಗಳಿಗೆ ಸುಮ್ಮನಿರುವಂತೆ ಕೈ ಸನ್ನೆ ಮಾಡಿದ್ದರು. ಆದರೆ ಲಕ್ನೋದಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಆರ್​ಸಿಬಿ ಗೆದ್ದು ಬೀಗಿತ್ತು. ಪಂದ್ಯದುದ್ದಕ್ಕೂ ಕೊಹ್ಲಿ ಈ ಹಿಂದೆ ಲಕ್ನೋ ಆಟಗಾರರು ಲೇವಡಿ ಮಾಡಿದ ಎಲ್ಲ ಸನ್ನೆಗಳನ್ನು ಬಡ್ಡಿ ಸಮೇತ ತೀರಿಸಿಕೊಂಡರು. ಇದು ಗಂಭೀರ್​ಗೆ ಪಿತ್ತ ನೆತ್ತಿಗೇರುವಂತೆ ಮಾಡಿತ್ತು.

ಕೈ ಕೈ ಮಿಲಾಯಿಸುವ ಹಂತದವರೆಗೂ ಹೋಗಿತ್ತು ಉಭಯ ಆಟಗಾರರ ಜಗಳ

ಪಂದ್ಯ ಮುಕ್ತಾಯದ ಬಳಿಕ ಉಭಯ ತಂಡಗಳ ಆಟಗಾರರು ಹಸ್ತಲಾಘವ ಮಾಡುವ ವೇಳೆ ಕೊಹ್ಲಿ ಮತ್ತು ನವೀನ್ ಉಲ್​ ಹಕ್​ ಜತೆಯಾಗಿ ಏನೋ ಸಂಭಾಷಣೆ ಮಾಡುತ್ತಿದ್ದರು. ಇದೇ ವೇಳೆ ಮಧ್ಯ ಪ್ರವೇಶಿಸಿದ ಗಂಭೀರ್​ ಅವರು ನವೀನ್​ ಉಲ್​ ಅವರನ್ನು ಕೊಹ್ಲಿ ಜತೆ ಮಾತನಾಡಬೇಡ ಎಂಬ ಅರ್ಥದಲ್ಲಿ ಅವರನ್ನು ಅಲ್ಲಿಂದ ಕರೆದುಕೊಂಡು ಹೋದರು. ಇದು ಕೊಹ್ಲಿಯನ್ನು ಕೆರಳಿಸಿತ್ತು. ಮೈದಾನದಲ್ಲೇ ಇವರಿಬ್ಬರ ಮಧ್ಯೆ ವಾಕ್ಸಮರ ನಡೆದು ಕೈ ಕೈ ಮಿಲಾಯಿಸುವ ಹಂತದವರೆಗೂ ಹೋಗಿತ್ತು. ದುರ್ವರ್ತನೆ ತೋರಿದ ಕಾರಣ ಇವರಿಬ್ಬರಿಗೆ ಪಂದ್ಯದ ಸಂಭಾವನೆಯ ಶೇ. 100ರಷ್ಟು ದಂಡ ವಿಧಿಸಲಾಗಿತ್ತು.

Exit mobile version