ಮೆಲ್ಬೋರ್ನ್: ಐಸಿಸಿ ಟಿ20 ವಿಶ್ವ ಕಪ್‌ನ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ(IND VS ENG) ತಂಡ ಗುರುವಾರ(ನವೆಂಬರ್ ೧೦) ೧೦ ವಿಕೆಟ್‌ಗಳ ಹೀನಾಯ ಸೋಲು ಕಂಡಿತ್ತು. ಈ ಕುರಿತು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಟ್ವೀಟ್ ಮಾಡಿದ್ದರು. ಆದರೆ ಈ ಕುರಿತಾಗಿ ನನಗೇನು ತಿಳಿದಿಲ್ಲ ಎಂದು ಪಾಕ್ ತಂಡದ ನಾಯಕ ಬಾಬರ್ ಅಜಂ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಬಾಬರ್ ಅಜಂಗೆ ಪತ್ರಕರ್ತರೊಬ್ಬರು ಪಾಕ್ ಪ್ರಧಾನಿ ಟ್ವೀಟ್ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಈ ವೇಳೆ ಉತ್ತರಿಸಿದ ಬಾಬರ್ ಅಜಂ “ಈ ವಿಚಾರವೇ ನನಗೆ ತಿಳಿದಿಲ್ಲ. ಕ್ಷಮಿಸಿ ನಾನು ಆ ಟ್ವೀಟ್ ನೋಡಿಲ್ಲ ಹಾಗೂ ಆ ಕುರಿತಾಗಿ ಅರಿವಿಲ್ಲ. ತಿಳಿಯದ ವಿಚಾರದ ಬಗ್ಗೆ ಸುಮ್ಮ ಸುಮ್ಮನೆ ಹೇಳಿಕೆ ನೀಡುವುದರಿಂದ ಅದು ಮತ್ತಷ್ಟು ತಪ್ಪಿಗೆ ಕಾರಣವಾಗುತ್ತದೆ. ಸದ್ಯಕ್ಕೆ ನಮ್ಮ ಗುರಿ ಎದುರಾಳಿ ವಿರುದ್ಧ ಉತ್ತಮ ಪ್ರದರ್ಶನ ತೋರುವುದಾಗಿದೆ” ಎಂದು ಹೇಳುವ ಮೂಲಕ ಪಾಕ್ ಪ್ರಧಾನಿಯ ಟ್ವೀಟ್ ರಗಳೆಯನ್ನು ತಣ್ಣಗಾಗಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಭಾರತ ಸೋಲು ಕಾಣುತ್ತಿದ್ದಂತೆ ಪಾಕ್ ಪ್ರಧಾನಿ “ಈ ಭಾನುವಾರ 152/0 vs 170/0 ” ಎಂದು ಟ್ವೀಟ್ ಮಾಡಿದ್ದರು. ಇದರರ್ಥ ಭಾರತ ತಂಡ 2021ರ ಟಿ20 ವಿಶ್ವ ಕಪ್‌ನ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 10 ವಿಕೆಟ್‌ಗಳ ಸೋಲು ಕಂಡಿತು. ಇದೀಗ ಮತ್ತೆ ಇಂಗ್ಲೆಂಡ್ ವಿರುದ್ಧ ೧೦ ವಿಕೆಟ್‌ಗಳ ಸೋಲಿಗೆ ತುತ್ತಾಯಿತು ಎನ್ನುವ ಅರ್ಥದಲ್ಲಿ ಟ್ವೀಟ್ ಮಾಡಿ ಭಾರತದ ಸೋಲನ್ನು ಅಪಹಾಸ್ಯ ಮಾಡಿದ್ದರು.
ಇದನ್ನೂ ಓದಿ | PAK VS ENG | ಟಿ20 ವಿಶ್ವ ಕಪ್ ಫೈನಲ್ಗೆ ಮಳೆ ಭೀತಿ; ಪಂದ್ಯ ನಡೆಯದಿದ್ದರೆ ಏನು ಗತಿ?