Site icon Vistara News

IND vs PAK: ಭಾರತ-ಪಾಕ್​ ಪಂದ್ಯ ಉಚಿತ ವೀಕ್ಷಣೆ ಸಾಧ್ಯ; ಈ ಆ್ಯಪ್​ನಲ್ಲಿ ಪ್ರಸಾರ

Pakistan vs India, Super Fours, 3rd Match

ಕೊಲಂಬೊ: ಇಂದು ನಡೆಯುವ ಏಷ್ಯಾಕಪ್​ನ ಸೂಪರ್​ 4(Asia Cup 2023) ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ(IND vs PAK) ಕಣಕ್ಕಿಳಿಯಲಿದೆ. ಈ ಹೈವೋಲ್ಟೇಜ್​ ಪಂದ್ಯವನ್ನು ಅಭಿಮಾನಿಗಳು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ವೀಕ್ಷಿಸಬಹುದಾಗಿದೆ.

ಇತ್ತಂಡಗಳ ನಡುವಿನ ಈ ಪಂದ್ಯ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ(R.Premadasa Stadium, Colombo) ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದೆ. ಟಾಸ್ 2:30ಕ್ಕೆ ನಡೆಯಲಿದೆ. ಆದರೆ ಪಂದ್ಯಕ್ಕೆ ಮಳೆಯ ಭೀತಿಯೂ ಎದುರಾಗಿದೆ. ಹೀಗಾಗಿ ಸೋಮವಾರ ಮೀಸಲು ದಿನವನ್ನು ನಿಗದಿಪಡಿಸಲಾಗಿದೆ.

ಪಂದ್ಯ ಎಲ್ಲಿ ವೀಕ್ಷಣೆ

ಏಷ್ಯಾ ಕಪ್​ನ ಎಲ್ಲ ಪಂದ್ಯಗಳು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ ಮೂಲಕ ವೀಕ್ಷಿಸಬಹುದು. ಪ್ರದೇಶಿಕ ಭಾಷೆಗಳಲ್ಲಿಯೂ ಪಂದ್ಯ ಪ್ರಸಾರಗೊಳ್ಳಲಿದೆ. ಇದಲ್ಲದೆ ಡಿಡಿ ಸ್ಪೋರ್ಟ್ಸ್ ಚಾನೆಲ್‌’ನಲ್ಲಿ ಫ್ರೀ ಡಿಶ್ ಮೂಲಕವೂ ನೇರ ಪ್ರಸಾರ ಮಾಡಲಾಗುತ್ತದೆ. ಆದರೆ ಮೊಬೈಲ್‌ನಲ್ಲಿ ಉಚಿತವಾಗಿ ಪಂದ್ಯವನ್ನು ವೀಕ್ಷಿಸಬಹುದು. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್‌ ಮೂಲಕ ಟೂರ್ನಿಯ ಎಲ್ಲ ಪಂದ್ಯಗಳನ್ನು ಉಚಿತವಾಗಿ ಆನಂದಿಸಬಹುದು. ಇದಕ್ಕೆ ಯಾವುದೇ ಶುಲ್ಕವನ್ನು ಪಾವತಿಸಬೇಕಿಲ್ಲ.

ಪಾಕ್​ ಸವಾಲು ಕಠಿಣ

ಮೊದಲ ಮುಖಾಮುಖಿ ಮಳೆಯಿಂದ ರದ್ದುಗೊಂಡರೂ ಪಾಕಿಸ್ತಾನ ಬೌಲಿಂಗ್​ ಪರಾಕ್ರಮ ಹೇಗಿತ್ತು ಎಂದು ಜಗಜ್ಜಾಹೀರವಾಗಿದೆ. ಶಾಹೀನ್​ ಅಫ್ರಿದಿಯ ಬೆಂಕಿಯುಗುಳುವ ಎಸೆತಗಳನ್ನು ಸಮರ್ಥವಾಗಿ ಎದುರಿಸದೇ ಹೋದರೆ ಭಾರತಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ. ಬ್ಯಾಟಿಂಗ್​ ಸರದಿಯಲ್ಲೂ ಪಾಕ್​ ಹೆಚ್ಚು ಬಲಿಷ್ಠವಾಗಿದೆ. ನಾಯಕ ಬಾಬರ್​ ಅಜಂ, ರಿಜ್ವಾನ್​, ಫಖಾರ್​ ಜಮಾನ್​, ಇಫ್ತಿಕರ್​ ಇವರೆಲ್ಲ ತಂಡಕ್ಕೆ ಆಸೆರೆಯಾಗಿ ಆಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಇವರನ್ನು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನೆಲೆಯೂರಲು ಬಿಡಬಾರದು.

ಇದನ್ನೂ ಓದಿ IND vs PAK: ಇಂಡೋ-ಪಾಕ್​ ಪಂದ್ಯ ನೋಡಲು ಪ್ರವಾಸ, ಸುತ್ತಾಟ ಬದಿಗಿಟ್ಟ ಅಭಿಮಾನಿಗಳಿಗೆ ನಿರಾಸೆ…

ರಾಹುಲ್​ ಕಣಕ್ಕೆ

ಸಂಪೂರ್ಣ ಫಿಟ್​ ಆಗದ ಕಾರಣ ಏಷ್ಯಾಕಪ್​ನ(Asia Cup 2023) ಆರಂಭಿಕ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಕನ್ನಡಿಗ ಕೆ.ಎಲ್​. ರಾಹುಲ್(KL Rahul)​ ಅವರು ಈಗ ಫುಲ್​ ಫಿಟ್​ ಆಗಿದ್ದು ಪಾಕ್​ ವಿರುದ್ಧದ ಈ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ನಾಯಕ ರೋಹಿತ್​ ಕೂಡ ರಾಹುಲ್​ ಲಭ್ಯತೆಯನ್ನು ಖಚಿತಪಡಿಸಿದ್ದಾರೆ.ಐಪಿಎಲ್ ಸಂದರ್ಭದಲ್ಲಿ ತೊಡೆಯ ಗಾಯದಿಂದ ಬಳಲಿದ್ದ ರಾಹುಲ್ ಶಸ್ತ್ರಚಿಕಿತ್ಸೆ ಪಡೆದಿದ್ದರು. ನಂತರ ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಚೇತರಿಸಿಕೊಂಡಿದ್ದರು. ಶುಭಮನ್​ ಗಿಲ್​ ಅವರು ಮೂರನೇ ಕ್ರಮಾಂಕದಲ್ಲಿ ಆಡಲು ನಿರ್ಧರಿಸಿರುವುದಾಗಿ ರೋಹಿತ್​ ತಿಳಿಸಿದ್ದಾರೆ.

ಇದನ್ನೂ ಓದಿ ICC ODI Ranking: ಭಾರತ ಪಂದ್ಯಕ್ಕೂ ಮುನ್ನವೇ ಅಗ್ರ ಸ್ಥಾನದಿಂದ ಕೆಳಗಿಳಿದ ಪಾಕ್​

ಶಾರ್ದೂಲ್​ ಅನುಮಾನ

ಮೂಲಗಳ ಪ್ರಕಾರ ಶಾರ್ದೂಲ್​ ಠಾಕೂರ್​ ಅವರನ್ನು ಈ ಪಂದ್ಯದಿಂದ ಹೊರಗಿಡಲಾಗುವುದು ಎಂದು ತಿಳಿದು ಬಂದಿದೆ. ಕಾರಣ ಅವರನ್ನು ಹೆಚ್ಚುವರಿ ಬ್ಯಾಟರ್​ ಆಗಿ ಕಳೆದ ಎರಡು ಪಂದ್ಯದಲ್ಲಿ ಆಡಿಸಲಾಗಿತ್ತು. ಆದರೆ ಅವರು ಬ್ಯಾಟಿಂಗ್​ ಜತೆಗೆ ಬೌಲಿಂಗ್​ನಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಹೀಗಾಗಿ ಅವರನ್ನು ಕೈಬಿಡುವುದು ಖಚಿತವಾಗಿದೆ. ಜಸ್​ಪ್ರೀತ್​ ಬುಮ್ರಾ ಅವರ ಆಗಮನದಿಂದ ಮೊಹಮ್ಮದ್​ ಶಮಿ ಜಾಗ ಬಿಡಬೇಕಾಗಿದೆ.

ಭಾರತ ಸಂಭಾವ್ಯ ತಂಡ

ಕೆ.ಎಲ್​ ರಾಹುಲ್, ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಹಾರ್ದಿಕ್‌ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಕುಲದೀಪ್‌ ಯಾದವ್‌, ಜಸ್‌ಪ್ರಿತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌, ​ಇಶಾನ್​ ಕಿಶನ್​ (ವಿಕೆಟ್​ ಕೀಪರ್​).

Exit mobile version