Site icon Vistara News

IND vs PAK: ಸೂಪರ್​-4 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ, ಪಿಚ್​ ರಿಪೋರ್ಟ್​

R.Premadasa Stadium in Colombo

ಕೊಲಂಬೋ: ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಏಷ್ಯಾಕಪ್​ನ(Asia Cup 2023) ಸೂಪರ್​-4( Super Fours Match) ಕದನ ಭಾನುವಾರ ಕೊಲಂಬೋದಲ್ಲಿ ನಡೆಯಲಿದೆ. ಪಲ್ಲೆಕೆಲೆಯಲ್ಲಿ ನಡೆದಿದ್ದ ಇತ್ತಂಡಗಳ ಮೊದಲ ಮುಖಾಮುಖಿ ಮಳೆಯಿಂದ ರದ್ದುಗೊಂಡಿತ್ತು. ಈ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆ ಅಧಿಕವಾಗಿ. ಆದರೆ ಮೀಸಲು ದಿನ ಇರುವುದರಿಂದ ಪಂದ್ಯ ನಡೆಯಬಹುದು.

ಪಿಚ್​ ರಿಪೋರ್ಟ್​

ಕೊಲಂಬೋದ ಆರ್. ಪ್ರೇಮದಾಸ ಕ್ರೀಡಾಂಗಣದ(R.Premadasa Stadium) ಪಿಚ್​ ಸ್ಪಿನ್ನರ್‌ಗಳಿಗೆ ಹೇಳಿ ಮಾಡಿಸಿದಂತಿದೆ. ಇಲ್ಲಿ ಸ್ಪಿನ್ನರ್​ಗಳೇ ಹೆಚ್ಚು ದಾಖಲೆಯನ್ನು ಹೊಂದಿದ್ದಾರೆ. ಹೀಗಾಗಿ ಪವರ್​ ಪ್ಲೇಯಲ್ಲಿ ಬ್ಯಾಟರ್​ಗಳು ಹೆಚ್ಚಿನ ಮೊತ್ತ ಕಲೆ ಹಾಕಬೇಕಿದೆ. ಸ್ಲೋ ಬಾಲ್​ ಎಸೆಯುವ ಬೌರ್​ಗಳಿಗೂ ಇಲ್ಲಿನ ಪಿಚ್​ ಹೆಚ್ಚು ನೆರವು ನೀಡಲಿದೆ. ಇಲ್ಲಿನ ಬೌಂಡರಿಗಳು ವಿಶೇಷವಾಗಿ ವಿಸ್ತಾರವಾಗಿಲ್ಲ, ಮತ್ತು ಔಟ್‌ಫೀಲ್ಡ್ ಸಾಕಷ್ಟು ವೇಗವಾಗಿದ್ದು ಬ್ಯಾಟಿಂಗ್ ಪರಿಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸಲಿದೆ. ಹವಾಮಾನ ವೈಪರೀತ್ಯವಿರುವ ಕಾರಣ ಟಾಸ್​ ಗೆದ್ದ ತಂಡ ಮೊದಲು ಬ್ಯಾಟಿಂಗ್​ ನಡೆಸಿದರೆ ಉತ್ತಮ. ಇಲ್ಲಿನ ಸರಾಸರಿ ಮೊದಲ ಇನಿಂಗ್ಸ್​ ಮೊತ್ತ 250.

ಸ್ಪಿನ್ನ್​ ಪಿಚ್​ ಆಗಿರುವ ಕಾರಣ ಜಡೇಜಾ ಮತ್ತು ಕುಲ್​ದೀಪ್​ ಅವರ ಮೇಲೆ ಭಾರತ ತಂಡ ಹೆಚ್ಚಿನ ವಿಶ್ವಾಸ ಇರಿಸಿದೆ. ನೇಪಾಳ ವಿರುದ್ಧದ ಪಂದ್ಯದಲ್ಲಿ ಜಡೇಜಾ ಉತ್ತಮ ಬೌಲಿಂಗ್​ ಪ್ರದರ್ಶನ ತೋರಿದ್ದರು. ಆದರೆ ಕುಲ್​ದೀಪ್​ ವಿಕೆಟ್​ ಲೆಸ್​ ಆಗಿದ್ದರು. ಹೀಗಾಗಿ ಈ ಪಂದ್ಯದಲ್ಲಿ ಅವರು ಕಮಾಲ್​ ಮಾಡಲೇ ಬೇಕಿದೆ.

ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ-ಪಾಕ್​ ಸಾಧನೆ

ಕೊಲಂಬೋದ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ ಇದುವರೆಗೆ 46 ಏಕದಿನ ಪಂದ್ಯಗಳನ್ನು ಆಡಿದೆ. ಇದರಲ್ಲಿ 23 ಪಂದ್ಯಗಳಲ್ಲಿ ಗೆಲುವು ಸಾಧಿದರೆ, 19 ಪಂದ್ಯಗಳಲ್ಲಿ ಸೋಲು ಕಂಡಿದೆ. ಎದುರಾಳಿ ಪಾಕಿಸ್ತಾನ 24 ಪಂದ್ಯಗಳನ್ನು ಆಡಿ 14 ಪಂದ್ಯಗಳಲ್ಲಿ ಜಯ ಸಾಧಿಸಿದೆ. 8 ಪಂದ್ಯಗಳಲ್ಲಿ ಸೋಲು ಕಂಡಿದೆ.

ಇದನ್ನೂ ಓದಿ IND vs PAK: ಪಾಕ್​ ವಿರುದ್ಧದ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಮಹತ್ವದ ಬದಲಾವಣೆ

ಹವಾಮಾನ ವರದಿ

ಕೊಲಂಬೊದಲ್ಲಿ ನಡೆಯುವ ಪಂದ್ಯಗಳಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅದರಲ್ಲೂ ಭಾರತ ಮತ್ತು ಪಾಕ್​ ಪಂದ್ಯ ನಡೆಯುವ ಸೆಪ್ಟೆಂಬರ್​ 10ರಂದು ಬೆಳಗ್ಗಿನಿಂದಲೇ ಇಲ್ಲಿ ಶೇ.90ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಒಂದೊಮ್ಮೆ ಪಂದ್ಯ ನಡೆಯದೇ ಇದ್ದರೆ ಮೀಸಲು ದಿನವಾದ ಸೋಮವಾರ ಪಂದ್ಯ ನಡೆಯಲಿದೆ.

ಉಭಯ ಸಂಭಾವ್ಯ ತಂಡ

ಭಾರತ: ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಹಾರ್ದಿಕ್‌ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಕುಲದೀಪ್‌ ಯಾದವ್‌, ಜಸ್‌ಪ್ರಿತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಶಮಿ, ಕೆ.ಎಲ್​ ರಾಹುಲ್​(ವಿಕೆಟ್​ ಕೀಪರ್​).

ಪಾಕಿಸ್ತಾನ: ಫಖಾರ್​ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಂ(ನಾಯಕ) , ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹರಿಸ್ ರೌಫ್.

Exit mobile version