ಅಹಮದಾಬಾದ್: ಪಾಕಿಸ್ತಾನ(IND vs PAK) ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ತಾನು ವಿಕೆಟ್ ಕಳೆದುಕೊಂಡರೂ ಅಡ್ಡಿಯಿಲ್ಲ ಆದರೆ ರೋಹಿತ್(rohit sharma) ಔಟಾಗಬಾರದು ಎಂದು ವಿಕೆಟ್ ತ್ಯಾಗ ಮಾಡಲು ಮುಂದಾದ ವಿಡಿಯೊ ಇದೀಗ ಎಲ್ಲಡೆ ವೈರಲ್ ಆಗಿದೆ. ವಿರಾಟ್(virat kohli) ಅವರ ಈ ಗುಣವನ್ನು ನೆಟ್ಟಿಗರು ಹಾಡಿ ಹೊಗಲಿದ್ದಾರೆ.
ಭಾರತ ಬ್ಯಾಟಿಂಗ್ ಇನ್ನಿಂಗ್ಸ್ನ ಒಂಬತ್ತನೇ ಓವರ್‌ನಲ್ಲಿ ರೋಹಿತ್ ಶರ್ಮಾ ಅವರಿಂದ ಸರಿಯಾದ ಕಾಲ್ ಸಿಗದ ಕಾರಣ ವಿರಾಟ್ ಕೊಹ್ಲಿ ರನ್ ಓಡಲು ಮುಂದಾಗಿಲ್ಲ. ನಾನ್ ಸ್ಟ್ರೈಕ್ನಲ್ಲೇ ನಿಂತಿದ್ದರು. ಆದರೆ ರೋಹಿತ್ ಅವರು ಸುಮಾರು ಅರ್ಧ ಪಿಚ್ ವರೆಗೆ ಬಂದು ವಾಪಸ್ ಹಿಂದಿರುಗಿ ಹೋಗಲು ಸಾಧ್ಯವಾಗದಿದ್ದಾಗ ಕೊಹ್ಲಿ ಕ್ರೀಸ್ ಬಿಟ್ಟು ಓಡಿದರು. ತಾನು ಔಟಾದರೂ ಚಿಂತೆಯಿಲ್ಲ. ಉತ್ತಮವಾಗಿ ಆಡುತ್ತಿದ್ದ ರೋಹಿತ್ ಔಟಾಗಬಾರದು ಎನ್ನುವುದು ಅವರ ಉದ್ದೇಶವಾಗಿತ್ತು.
ಒಂದೊಮ್ಮೆ ವಿರಾಟ್ ಅವರು ಕ್ರೀಸ್ ಬಿಟ್ಟು ಓಡುತಿರದಿದ್ದರೆ ಆಗ ವಿಕೆಟ್ ಕೀಪರ್ ರಿಜ್ವಾನ್ ಆರಾಮವಾಗಿ ರೋಹಿತ್ ಅವರನ್ನು ರನೌಟ್ ಮಾಡುತ್ತಿದ್ದರು. ಆದರೆ ಕೊಹ್ಲಿ ನಿಷ್ಕಲ್ಮಶ ಮನಸ್ಸಿನಿಂದ ರೋಹಿತ್ ಅವರು ಔಟಾಗಬಾರದೆಂದು ತನ್ನ ವಿಕೆಟ್ ಕೊಡಲು ಮುಂದಾದರು. ಈ ವಿಡಿಯೊವನ್ನು ಟೀಮ್ ಇಂಡಿಯಾ ಮತ್ತು ಕೊಹ್ಲಿ ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಇದನ್ನೂ ಓದಿ Ind vs Pak : ಶ್ರೇಯಸ್ ಕಡೆಗೆ ಚೆಂಡು ಎಸೆದು ಪ್ರೇಕ್ಷಕರಿಂದ ಲೇವಡಿಗೆ ಒಳಗಾದ ಪಾಕ್ ವೇಗಿ
ಕೊಹ್ಲಿಯಿಂದ ಜೀವದಾನ ಪಡೆದ ರೋಹಿತ್ ಶರ್ಮ ಅಬ್ಬರದ ಬ್ಯಾಟಿಂಗ್ ನಡೆಸಿ ಗಮನಸೆಳೆದರು. 63 ಎಸೆತಗಳಲ್ಲಿ 86 ರನ್ ಗಳಿಸಿ ನೆರೆದಿದ್ದ ಅಭಿಮಾನಿಗಳಿಗೆ ಬರಪೂರ ರಂಜನೆ ನೀಡಿದರು. ಅವರ ಸೊಗಸಾದ ಈ ಇನಿಂಗ್ಸ್ನಲ್ಲಿ ಬರೋಬ್ಬರಿ 6 ಸಿಕ್ಸರ್ ಮತ್ತು 6 ಬೌಂಡರಿ ಸಿಡಿಯಿತು.
Virat Kohli giving tribute to Gautam Gambhir's World Cup Dive. pic.twitter.com/4FsfUzd7yH
— Meet Shah (@MeetshahV) October 14, 2023
ದಾಖಲೆ ಬರೆದ ರೋಹಿತ್
ಅಫ್ಘಾನಿಸ್ತಾನ ಪಂದ್ಯದಲ್ಲಿ, ರೋಹಿತ್ 554 ಸಿಕ್ಸರ್ಗಳ ಮೂಲಕ ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡ ಮರು ಪಂದ್ಯದಲ್ಲೇ ಮತ್ತೊಂದು ದಾಖಲೆ ಬರೆದಿದ್ದಾರೆ. ಅದು ಕೂಡ ಸಿಕ್ಸರ್ ಮೂಲಕವೇ ಎನ್ನುವುದು ವಿಶೇಷ. ಏಕದಿನ ಕ್ರಿಕೆಟ್ನಲ್ಲಿ 300 ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಮತ್ತು ಭಾರತದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
“ನಾನು ಈ ಆಟವನ್ನು ಆಡಲು ಪ್ರಾರಂಭಿಸಿದಾಗ, ನಾನು ಇಷ್ಟು ಸಿಕ್ಸರ್‌ಗಳನ್ನು ಹೊಡೆಯಲು ಸಾಧ್ಯವಾಗುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ನಿಸ್ಸಂಶಯವಾಗಿ, ಮುಂದಿನ ವರ್ಷಗಳಲ್ಲಿ ಸಿಕ್ಸರ್ ಹೊಡೆಯಲು ಕಲಿತೆ. ಆದ್ದರಿಂದ, ನಾನು ಮಾಡಿದ ಕೆಲಸದಿಂದ ನನಗೆ ಸಾಕಷ್ಟು ಸಂತೋಷವಾಗಿದೆ ಎಂದು ರೋಹಿತ್ ಹೇಳಿದ್ದಾರೆ.
ಪಂದ್ಯ ಗೆದ್ದ ಭಾರತ
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ಬಿಗಿ ಬೌಲಿಂಗ್ ದಾಳಿ ಸಂಘಟಿಸಿತು. ನಾಟಕೀಯ ಕುಸಿತ ಕಂಡ ಪಾಕಿಸ್ತಾನ 42.5 ಓವರ್ ಗಳಲ್ಲಿ 191 ರನ್ ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿದ ಭಾರತ 30.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.