Site icon Vistara News

IND VS PAK: ಭಾರತ ಮತ್ತು ಪಾಕಿಸ್ತಾನ ನಡುವಣ ಟೆಸ್ಟ್‌ ಕದನಕ್ಕೆ ವೇದಿಕೆ ಒದಗಿಸಲು ಮುಂದಾದ ಎಂಸಿಸಿ!

IND VS PAK

ಮೊಲ್ಬೋರ್ನ್​: ಭಾರತ ಮತ್ತು ಪಾಕಿಸ್ತಾನ (IND VS PAK) ನಡುವಣ ದ್ವಿಪಕ್ಷೀಯ ಟೆಸ್ಟ್ ಸರಣಿಯನ್ನು ಆಯೋಜಿಸಲು ಮೊಲ್ಬೋರ್ನ್ ಕ್ರಿಕೆಟ್​ ಕ್ಲಬ್​ (ಎಂಸಿಸಿ) ಮತ್ತು ವಿಕ್ಟೋರಿಯಾ ಸರ್ಕಾರ ಔಪಚಾರಿಕ ಪ್ರಸ್ತಾಪ ಮಾಡಿದೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಬಿಸಿಸಿಐ ಯಾವುದೇ ಖಚಿತ ಮಾಹಿತಿ ನೀಡಿಲ್ಲ.

ಭಾರತ ಮತ್ತು ಪಾಕಿಸ್ತಾನ ಕೊನೆಯ ಬಾರಿ 2012ರಲ್ಲಿ ದ್ವಿಪಕ್ಷೀಯ ಸರಣಿಯನ್ನು ಆಡಿದ್ದವು. ಭಾರತದ ಆತಿಥ್ಯದಲ್ಲಿ ನಡೆದ ಸೀಮಿತ ಓವರ್‌ಗಳ ಸರಣಿ ಅದಾಗಿತ್ತು. ಇನ್ನು 2007ರಲ್ಲಿ ಭಾರತ-ಪಾಕ್‌ ನಡುವೆ ಕೊನೆಯ ಟೆಸ್ಟ್ ಸರಣಿ ನಡೆದಿತ್ತು. ಇದೀಗ ಇದ್ದಕ್ಕಿದ್ದಂತೆ ಭಾರತ-ಪಾಕಿಸ್ತಾನ ನಡುವಣ ಟೆಸ್ಟ್‌ ಕ್ರಿಕೆಟ್‌ ಸರಣಿಯನ್ನು ಆಯೋಜಿಸಲು ಎಂಸಿಸಿ ಮುಂದಾಗಿದೆ.

ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದ ಟಿ20 ವಿಶ್ವ ಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯದ ಆತಿಥ್ಯವನ್ನು ಎಂಸಿಸಿ ವಹಿಸಿತ್ತು. ಅದರಂತೆ ಈ ಪಂದ್ಯಕ್ಕೆ 90 ಸಾವಿರ ಪ್ರೇಕ್ಷಕರು ನರೆದಿದ್ದರು. ಇದೇ ಲಾಭದ ಲೆಕ್ಕಾಚಾರದಲ್ಲಿ ಭಾರತ-ಪಾಕಿಸ್ತಾನ ನಡುವೆ ಟೆಸ್ಟ್‌ ಕ್ರಿಕೆಟ್‌ ಸರಣಿಯನ್ನು ಆಯೋಜಿಸಲು ಎಂಸಿಸಿ ಮತ್ತು ವಿಕ್ಟೋರಿಯಾ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಬಿಸಿಸಿಐ ಆಗಲಿ ಪಿಸಿಬಿಯಾಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಇದನ್ನೂ ಓದಿ | IND VS PAK | ಏಷ್ಯಾ ಕಪ್​ ಆಡಲು ಪಾಕಿಸ್ತಾನಕ್ಕೆ ಬರುವಂತೆ ಕೊಹ್ಲಿಗೆ ಆಹ್ವಾನ ನೀಡಿದ ಪಾಕ್​ ಅಭಿಮಾನಿಗಳು

Exit mobile version