Site icon Vistara News

IND vs PAK: ಭಾರತ-ಪಾಕ್​ ಪಂದ್ಯಕ್ಕೆ ಸಚಿನ್ ಹಾಜರ್; ಮಾಜಿ ಅಧ್ಯಕ್ಷ ಒಬಾಮಗೂ ಇರದ ಭದ್ರತೆಯಲ್ಲಿ ನಡೆಯಲಿದೆ ಪಂದ್ಯ

IND vs PAK

IND vs PAK: Sachin Tendulkar’s baseball smashes leave fans awestruck in New York

ನ್ಯೂಯಾರ್ಕ್​: ಇಂದು ನಡೆಯುವ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಟಿ20 ವಿಶ್ವಕಪ್​ ಪಂದ್ಯಕ್ಕೆ ಮಾಸ್ಟರ್‌ ಬ್ಲಾಸ್ಟರ್‌ ಖ್ಯಾತಿಯ ಸಚಿನ್‌ ತೆಂಡೂಲ್ಕರ್‌(Sachin Tendulkar) ಕೂಡ ಹಾಜರ್​ ಆಗಲಿದ್ದಾರೆ. ಈಗಾಗಲೇ ನ್ಯೂಯಾರ್ಕ್​ ತಲುಪಿರುವ ಸಚಿನ್​ ಈ ಪಂದ್ಯವನ್ನು ಕಣ್ತುಂಬಿಸಿಕೊಳ್ಳುವುದರ ಜತೆಗೆ ಭಾರತ ತಂಡವನ್ನು ಹುರಿದುಂಬಿಸಲಿದ್ದಾರೆ.

ಸಚಿನ್​ ಅವರು ನ್ಯೂಯಾರ್ಕ್​ನಲ್ಲಿ ಬೇಸ್​ ಬಾಲ್​ ಆಡಿದ ಫೋಟೊಗಳು ಕೂಡ ವೈರಲ್​ ಆಗಿದೆ. ಸಚಿನ್​ ಅವರನ್ನು ಕಂಡು ನ್ಯೂಯಾರ್ಕ್​ ಜನತೆ ಅವರ ಜತೆ ಫೋಟೊ ಮತ್ತು ಆಟೋಗ್ರಾಫ್​ ಕೂಡ ಪಡೆದಿದ್ದಾರೆ. ಈ ಪಂದ್ಯಕ್ಕೆ ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ಅತ್ಯಂತ ಬಿಗಿ ಭದ್ರತೆಯಲ್ಲಿ ಏರ್ಪಡಿಸಲಾಗಿದೆ.

ಈಗಾಗಲೇ ಭದ್ರತೆಯ ಬಗ್ಗೆ ಮಾಹಿತಿ ನೀಡಿರುವ ನ್ಯೂಯಾರ್ಕ್​ನ ಪೊಲೀಸ್‌ ಮಹಾನಿರ್ದೇಶಕ ಪ್ಯಾಟ್ರಿಕ್‌ ರೈಡರ್‌, ನಮಗೆ ಕ್ರಿಕೆಟ್‌ ಹೊಸತೇ ಆಗಿರಬಹುದು. ಆದರೆ ಭದ್ರತೆಯ ಯೋಜನೆ ಹೊಸತಲ್ಲ. ಅಂದು ಅಧ್ಯಕ್ಷ ಬರಾಕ್‌ ಒಬಾಮ ಅವರಿಗೆ ಒದಗಿಸಿದ ಭದ್ರತೆಗಿಂತಲೂ ಹೆಚ್ಚಿನ ಭದ್ರತೆ ಈ ಪಂದ್ಯಕ್ಕೆ ಇರಲಿದೆ ಎಂದು ಹೇಳಿದ್ದಾರೆ.

ಪಂದ್ಯ ಜಿದ್ದಾಜಿದ್ದಿನಿಂದ ಕೂಡಿರುವ ನಿಟ್ಟಿನಲ್ಲಿ ಅಭಿಮಾನಿಗಳು ಕೂಡ ದೊಡ್ಡ ಸಂಖ್ಯೆಯಲ್ಲಿ ಸ್ಟೇಡಿಯಂಗೆ ಬರುವ ಸಾಧ್ಯತೆ ಇದೆ. ಇದೇ ಕಾರಣದಿಂದ ಸ್ಟೇಡಿಯಂಗೆ 4 ಹಂತದ ಭಾರೀ ಭದ್ರತೆ ಏರ್ಪಡಿಸಲಾಗಿದೆ.

ಇದನ್ನೂ ಓದಿ IND vs PAK: ಮೋದಿಯ ಪ್ರಮಾಣ ವಚನದ ಬದಲು ಭಾರತ-ಪಾಕ್ ಪಂದ್ಯ ವೀಕ್ಷಿಸುವೆ ಎಂದ ​ಶಶಿ ತರೂರ್

1. ಸ್ನೈಪರ್ ಗನ್​ ಕಣ್ಗಾವಲು

ನ್ಯೂಯಾರ್ಕ್​ನ(New York stadium) ವಿಶೇಷ ಮಿಲಿಟರಿ ಪಡೆ ಸ್ನೈಪರ್ ಗನ್ ಹಿಡಿದು ಸ್ಟೇಡಿಯಂನ ಮೇಲ್ಛಾವಣಿಯಲ್ಲಿ ಕಣ್ಗಾವಲಿಟ್ಟಿದೆ. ಇದರ ಫೋಟೊಗಳು ಈಗಾಗಲೇ ವೈರಲ್​ ಆಗಿದೆ.

2. ನೊ-ಫ್ಲೈ ಝೋನ್

ಪಂದ್ಯದ ವೇಳೆ ಡ್ರೋನ್ ದಾಳಿ ನಡೆಸುವ ಸಾಧ್ಯತೆ ಕೂಡ ಕಂಡುಬಂದಿರುವ ಕಾರಣ ಪಂದ್ಯ ನಡೆಯುವ ಕ್ರೀಡಾಂಗಣದ ಸುತ್ತ ‘ನೊ-ಫ್ಲೈ ಝೋನ್’ ಎಂದು ಘೋಷಿಸಲಾಗಿದೆ. ಆದರೆ, ವಿಶೇಷ ಸೇನಾ ಹೆಲಿಕಾಪ್ಟರ್‌ಗಳು ಸ್ಕೈಲೈನ್‌ನಲ್ಲಿ ಗಸ್ತು ತಿರುಗಲಿದೆ.

3. ಸಿಸಿಟಿವಿ ಕಣ್ಗಾವಲು

ಪಂದ್ಯ ನೋಡಲು ಬರುವ ಪ್ರೇಕ್ಷಕರ ಗುಂಪಿನ ಚಲನವಲನಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ಪತ್ತೆಹಚ್ಚಲು ಸ್ಟೇಡಿಯಂ ಒಳಗಡೆ ಮತ್ತು ಹೊರಗಡೆ ಹೈಟೆಕ್ ಸಿಸಿಟಿವಿ ಕ್ಯಾಮೆರಾಗಳನ್ನು ಬಳಸಲಾಗಿದೆ. ಇದು ಕ್ರೀಡಾಂಗಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಳವಡಿಸಲಾಗಿದೆ.

4. ವಿಶೇಷ ಪೊಲೀಸ್​ ಪಡೆ

ನ್ಯೂಯಾರ್ಕ್ ಪೊಲೀಸ್ ಇಲಾಖೆ (NYPD) ಮತ್ತು ಇತರ ಭದ್ರತಾ ಏಜೆನ್ಸಿಗಳು ಸಮಗ್ರ ಭದ್ರತಾ ಯೋಜನೆಯನ್ನು ಕಲ್ಪಿಸಿದೆ. ಪಂದ್ಯದ ವೇಳೆ ಯಾರು ಕೂಡ ಮೈದಾನಕ್ಕೆ ನುಗ್ಗದಂತೆ ಎಚ್ಚರ ವಹಿಸಲಾಗಿದೆ. ಅಲ್ಲದೆ ಭದ್ರತಾ ನಿಯಮಗಳನ್ನು ಕೂಡ ಪ್ರಕಟಿಸಲಾಗಿದೆ. ಯಾರಾದರು ಮೈದಾನಕ್ಕೆ ನುಗ್ಗಿ ಆಟಗಾರರನ್ನು ತಬ್ಬಿಕೊಂಡರೆ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.

ಹೈವೋಲ್ಟೇಜ್ ಕದನ ನ್ಯೂಯಾರ್ಕ್(NEW YORK) ಹೊರವಲಯದಲ್ಲಿ 34,000 ಆಸನ ಸಾಮರ್ಥ್ಯವುಳ್ಳ ತಾತ್ಕಾಲಿಕ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ಮತ್ತು ಪಾಕ್​ ನಡುವಣ ಪಂದ್ಯ ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕೂಡ ಕಾರಣ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಪಂದ್ಯ ಇಲ್ಲಿ ಏರ್ಪಡಿಸಲಾಗಿದೆ ಎನ್ನಲಾಗಿದೆ.

Exit mobile version