Site icon Vistara News

IND vs PAK: ಶಮಿಗೆ ಅವಕಾಶ ನೀಡದ ಕುರಿತು ರೋಹಿತ್​ಗೆ​ ಸಂಜಯ್‌ ಮಾಂಜ್ರೇಕರ್‌ ಚಾಟಿ

Mohammed Shami asia cup 2023

ಪಲ್ಲೆಕೆಲೆ: ಪಾಕಿಸ್ತಾನ(IND vs PAK) ವಿರುದ್ಧ ಟಾಸ್​ ಗೆದ್ದ ಭಾರತ ತಂಡ ಬ್ಯಾಟಿಂಗ್​ ಆಯ್ದುಕೊಂಡು ಬ್ಯಾಟಿಂಗ್​ ನಡೆಸುತ್ತಿದೆ. ಸದ್ಯ ಪಂದ್ಯ ಮಳೆಯಿಂದ ಸ್ಥಗಿತಗೊಂಡಿದೆ. ಆದರೆ ಈ ಪಂದ್ಯಕ್ಕೆ ಅನುಭವಿ ಬೌಲರ್​ ಮೊಹಮ್ಮದ್​ ಶಮಿ ಅವರನ್ನು ಕೈಬಿಟ್ಟ ಕಾರಣಕ್ಕೆ ನಾಯಕ ರೋಹಿತ್​ ಶರ್ಮ ಅವರನ್ನು ಸಂಜಯ್​ ಮಂಜ್ರೇಕರ್(Sanjay Manjrekar)​ ಅವರು ಟೀಕಿಸಿದ್ದಾರೆ.

“ಶಾರ್ದೂಲ್ ಠಾಕೂರ್ ಅವರಿಗಿಂತ ಮೊಹಮ್ಮದ್ ಶಮಿ ಪಾಕಿಸ್ತಾನಕ್ಕೆ ಹೆಚ್ಚು ಅಪಾಯಕಾರಿಯಾಗಿದ್ದರು. ಅಲ್ಲದೆ ಅವರ ಅನುಭವ ಸಾಕಷ್ಟಿತ್ತು. ಕೇವಲ ಬ್ಯಾಟಿಂಗ್​ಗೆ ಮಹತ್ವದ ನೀಡಿವ ಸಲುವಾಗಿ ಈ ನಿರ್ಧಾರ ಸರಿಯಲ್ಲ. ಪಂದ್ಯಕ್ಕೆ ಬೌಲಿಂಗ್ ಡೆಪ್ತ್ ಕೂಡ ಮುಖ್ಯವಾಗಿದೆ” ಎಂದು ಹೇಳಿ ರೋಹಿತ್​ ಅವರ ನಿರ್ಧಾರವನ್ನು ಟೀಕಿಸಿದ್ದಾರೆ. ಆದರೆ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ವಿಚಾರದಲ್ಲಿ ರೋಹಿತ್​ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಬೆನ್ನು ನೋವಿನ ಗಾಯದಿಂದ ಚೇತರಿಕೆ ಕಂಡ ಶ್ರೇಯಸ್​ ಅಯ್ಯರ್​ ಅವರು ಈ ಪಂದ್ಯದ ಮೂಲಕ ಟೀಮ್​ ಇಂಡಿಯಾಕ್ಕೆ ಕಮ್​ಬ್ಯಾಕ್​ ಮಾಡಿದರು. ಕನ್ನಡಿಗ ಕೆ.ಎಲ್​ ರಾಹುಲ್ ಅವರ ಅನುಪಸ್ಥಿತಿಯಲ್ಲಿ ಇಶಾನ್​ ಕಿಶನ್​ ಅವರು ಕೀಪಿಂಗ್​ ಹೊಣೆಹೊತ್ತಿದ್ದಾರೆ. ಕಳೆದ ವರ್ಷ ಬೆನ್ನು ನೋವಿನಿಂದ ಏಷ್ಯಾಕಪ್​ ಆಡದ ಜಸ್​ಪ್ರೀತ್​ ಬುಮ್ರಾ ಬರೋಬ್ಬರಿ ಒಂದು ವರ್ಷಗಳ ಬಳಿಕ ಏಷ್ಯಾಕಪ್​ ಆಡುತ್ತಿದ್ದಾರೆ. ಸ್ಪಿನ್ನರ್​ಗಳಾಗಿ ರವೀಂದ್ರ ಜಡೇಜಾ ಮತ್ತು ಕುಲ್​ದೀಪ್​ ಸ್ಥಾನ ಪಡೆದರು. ಅಯ್ಯರ್​ ಅವರು ತಂಡ ಸೇರಿದರಿಂದ ಸೂರ್ಯಕುಮಾರ್​ ಯಾದವ್​ ಬೆಂಚು ಕಾಯಬೇಕಾಯಿತು.

ಕಳೆದ ವರ್ಷ ಆಸ್ಟ್ರೇಲಿಯಾದ ಮೆಲ್ಬರ್ನ್ ಟಿ20 ವಿಶ್ವಕಪ್​ ಪಂದ್ಯದ ಬಳಿಕ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದೆ. ಇಶಾನ್​ ಕಿಶನ್​ ಮತ್ತು ಶುಭಮನ್​ ಗಿಲ್​ ಅವರಿಗೆ ಪಾಕಿಸ್ತಾನ ವಿರುದ್ಧ ಇದು ಚೊಚ್ಚಲ ಪಂದ್ಯವಾಗಿದೆ. ಉಭಯ ಆಟಗಾರರು ಇತರ ತಂಡದ ಪರ ಆಡಿದ್ದರೂ ಪಾಕಿಸ್ತಾನ ವಿರುದ್ಧ ಇದೇ ಮೊದಲ ಬಾರಿ ಕಣಕಿಳಿಯುತ್ತಿದ್ದಾರೆ.

ಪಾಕಿಸ್ತಾನ ತಂಡ ಈ ಪಂದ್ಯಕ್ಕೆ ಯಾವುದೇ ಬದಲಾವಣೆ ಮಾಡಿಲ್ಲ. ನೇಪಾಳ ವಿರುದ್ಧ ಮೊದಲ ಪಂದ್ಯದಲ್ಲಿ ಆಡಿದ ಆಟಗಾರರೇ ಈ ಪಂದ್ಯದಲ್ಲಿಯೂ ಆಡಲಿಳಿದರು.

ಇದನ್ನೂ ಓದಿ IND vs PAK: ಭಾರತಕ್ಕೆ ಒಲಿಯಲಿ ಗೆಲುವಿನ ‘ಕ್ಯಾಂಡಿ’

ಉಭಯ ತಂಡಗಳ ಆಡುವ ಬಳಗ

ಪಾಕಿಸ್ತಾನ: ಫಖಾರ್​ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಂ(ನಾಯಕ) , ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್​ ರೌಫ್.

ಭಾರತ: ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಹಾರ್ದಿಕ್‌ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಕುಲ್​ದೀಪ್‌ ಯಾದವ್‌, ಜಸ್‌ಪ್ರಿತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌, ಶಾರ್ದೂಲ್​ ಠಾಕೂರ್​, ಇಶಾನ್‌ ಕಿಶನ್‌(ವಿಕೆಟ್​ ಕೀಪರ್​).

Exit mobile version