ಮುಂಬಯಿ: ಪ್ರಸಿದ್ದ ಗಾಯಕ ಸೋನು ನಿಗಮ್(Sonu Nigam) ಅವರು ಪಾಕಿಸ್ತಾನ(IND vs PAK) ವಿರುದ್ಧದ ಟೀಮ್ ಇಂಡಿಯಾದ ಅಭೂತ ಪೂರ್ವ ಗೆಲುವನ್ನು ಇಸ್ರೇಲ್‌ಗೆ(israel) ಅರ್ಪಿಸಿದ್ದಾರೆ. ಈ ಮೂಲಕ ಪಾಕ್ ಆಟಗಾರ ಮೊಹಮ್ಮದ್ ರಿಜ್ವಾನ್ಗೆ(mohammad rizwan) ತಿರುಗೇಟು ನೀಡಿದ್ದಾರೆ. ರಿಜ್ವಾನ್ ಅವರು ಲಂಕಾ ವಿರುದ್ಧದ ಗೆಲುವನ್ನು ಮತ್ತು ತಮ್ಮ ಶತಕವನ್ನು ಗಾಜಾದ ಜನರಿಗೆ ಅರ್ಪಿಸಿದ್ದರು.
ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಡೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ಬಿಗಿ ಬೌಲಿಂಗ್ ದಾಳಿ ಸಂಘಟಿಸಿತು. ನಾಟಕೀಯ ಕುಸಿತ ಕಂಡ ಪಾಕಿಸ್ತಾನ 42.5 ಓವರ್ ಗಳಲ್ಲಿ 191 ರನ್ ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿದ ಭಾರತ 30.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.
ಭಾರತ ತಂಡ ಈ ಗೆಲುವಿನಿಂದಿಗೆ 1992ರಿಂದ ಮೊದಲ್ಗೊಂಡು 2023ರ ವರೆಗಿನ ಎಲ್ಲ 8 ಪಂದ್ಯಗಳಲ್ಲೂ ಗೆಲುವು ದಾಖಲಿಸಿ ತನ್ನ ಅಜೇಯ ಓಟವನ್ನು ಮುಂದುವರಿಸಿದೆ. ಭಾರತ ತಂಡದ ಈ ಗೆಲುವನ್ನು ಸೋನು ನಿಗಮ್ ಅವರು ತನ್ನ ಟ್ವಿಟರ್ ಎಕ್ಸ್ ಖಾತೆಯಲ್ಲಿ ಇದು ಇಸ್ರೇಲ್‌ಗೆ ಅರ್ಪಣೆ ಎಂದು ಬರೆದಿದ್ದಾರೆ. “ಈ ಗೆಲುವು ನನ್ನ ಇಸ್ರೇಲ್ ಸಹೋದರ-ಸಹೋದರಿಯರಿಗೆ ಅರ್ಪಣೆ” ಹೆಸರಿಗೆ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ IND vs PAK: ಗೆಳೆಯ ಔಟಾಗಬಾರದೆಂದು ತಾನೇ ರನೌಟ್ ಆಗಲು ಮುಂದಾದ ಕೊಹ್ಲಿ
यह जीत इसराइली भाइयों और बहनों के नाम! https://t.co/8xVJFzQk9p
— Sonu Nigam (@SonuNigamSingh) October 14, 2023
ಕೆಲ ದಿನಗಳ ಹಿಂದೆ ಪಾಕ್ ಆಟಗಾರ ರಿಜ್ವಾನ್ ಅವರು ಲಂಕಾ ವಿರುದ್ಧದ ಗೆಲುವನ್ನು ಗಾಜಾದ ಜನರಿಗೆ ಅರ್ಪಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಅವರು, ‘ಈ ಶತಕ ಗಾಜಾದ ನನ್ನ ಸಹೋದರ, ಸಹೋದರಿಯರಿಗೆ ಅರ್ಪಣೆ’ ಎಂದಿದ್ದರು. ಇದಕ್ಕೆ ಈಗ ಸೋನು ನಿಗಮ್ ತಮ್ಮದೇ ಆದ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ.
ಅಭಿಮಾನಿಯಿಂದ ಬೆಂಬಲ
ಭಾರತ ಮತ್ತು ಪಾಕ್ ಪಂದ್ಯದ ವೇಳೆ ಅಭಿಮಾನಿಯೊಬ್ಬರು ಇಸ್ರೇಲ್ ಪರವಾಗಿ ಪೋಸ್ಟರ್ ಪ್ರದರ್ಶಿಸಿದ್ದರು. “ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಇಸ್ರೇಲ್ ಜತೆ ಭಾರತ ನಿಲ್ಲುತ್ತದೆ. ಭಾರತ ಎಂದಿಗೂ ನಿಮ್ಮ ಬೆಂಬಲಕ್ಕೆ ಇದೆ” ಎಂದು ಬರೆದ ಪೋಸ್ಟರ್ ಒಂದನ್ನು ಪ್ರದರ್ಶಿಸಿದ್ದರು. ಇದಕ್ಕೆ ಇಸ್ರೇಲ್, “ಥ್ಯಾಂಕ್ ಯು ಇಂಡಿಯಾ” ಎಂದು ಪ್ರತಿಕ್ರಿಯೆ ನೀಡಿದೆ.
ಪಾಕಿಸ್ತಾನ ವಿರುದ್ಧ ಭಾರತ ಗೆಲುವು ಸಾಧಿಸಿರುವುದಕ್ಕೆ ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ನಾವೋರ್ ಗಿಲೋನ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. “ಪಾಕ್ ವಿರುದ್ಧ ಭಾರತ ಗೆದ್ದಿದ್ದು ಖುಷಿ ತಂದಿದೆ. ಹಾಗೊಂದು ವೇಳೆ ಪಾಕಿಸ್ತಾನ ಗೆದ್ದಿದ್ದರೆ ಗೆಲುವನ್ನು ಹಮಾಸ್ ಉಗ್ರರಿಗೆ ಅರ್ಪಣೆ ಮಾಡಲಾಗುತ್ತಿತ್ತು” ಎಂದು ಪಾಕಿಸ್ತಾನದ ಕಾಲೆಳೆದಿದ್ದಾರೆ.
हमें खुशी है कि #CWC23 में #INDvPAK मैच में #भारत 🇮🇳 विजयी हुआ और पाकिस्तान अपनी जीत हमास के आतंकवादियों को समर्पित नहीं कर पाया।
— Naor Gilon (@NaorGilon) October 14, 2023
हम हमारे भारतीय मित्रों द्वारा मैच के दौरान पोस्टर दिखाकर कर इज़राइल 🇮🇱 के साथ अपनी एकजुटता दिखाने से हम बेहद भाव विभोर हैं। 🙏
We are happy that… pic.twitter.com/fIDY4Ap7aJ
ಅಕ್ಟೋಬರ್ 7ರಿಂದ ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡ ಗಾಜಾಪಟ್ಟಿ ಮೇಲೆ ದಾಳಿ ನಡೆಸುತ್ತಿದೆ. ರಾಕೆಟ್, ಗುಂಡಿನ ದಾಳಿಗೆ ಎರಡೂ ದೇಶಗಳಲ್ಲಿ ಸುಮಾರು 4 ಸಾವಿರ ಜನ ಮೃತಪಟ್ಟಿದ್ದಾರೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಮತ್ತೊಂದೆಡೆ, ಗಾಜಾ ನಗರವನ್ನು ಅಳಿಸಿಹಾಕಿ, ಹಮಾಸ್ ಉಗ್ರರನ್ನು ನಿರ್ನಾಮ ಮಾಡಬೇಕು ಎಂದು ಪಣತೊಟ್ಟಿರುವ ಇಸ್ರೇಲ್ ಪಡೆಗಳು, ಗಾಜಾ ನಗರದ ಗಡಿಯಲ್ಲಿ ಲಕ್ಷಾಂತರ ಸೈನಿಕರನ್ನು ನಿಯೋಜಿಸಿವೆ. ನೂರಾರು ಯುದ್ಧ ಟ್ಯಾಂಕರ್‌ಗಳಿಂದ ಗಾಜಾ ಮೇಲೆ ದಾಳಿ ನಡೆಸಲಾಗುತ್ತಿದೆ. ಒಂದೇ ದಿನದಲ್ಲಿ ಹಮಾಸ್‌ನ ಇಬ್ಬರು ಹಿರಿಯ ಕಮಾಂಡರ್‌ಗಳನ್ನು ಹೊಡೆದುರುಳಿಸಿವೆ.