ಸಿಡ್ನಿ: ಟಿ20 ವಿಶ್ವ ಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ(IND VS PAK) ತಂಡಗಳ ನಡುವಿನ ರವಿವಾರದ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಮಾಡಿತ್ತು. ಅಂತಿಮ ಎಸೆತದ ವರೆಗೂ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಈ ಪಂದ್ಯಕ್ಕೆ ಮನಸೋತ ಆಸ್ಟ್ರೇಲಿಯಾ ತಂಡದ ಆಟಗಾರ ಮಿಚೆಲ್ ಮಾರ್ಷ್ ಟಿ20 ವಿಶ್ವ ಕಪ್ ಕೂಟವನ್ನು ಅರ್ಥಕ್ಕೆ ನಿಲ್ಲಿಸುವಂತೆ ಸೂಚಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾನುವಾರ ಮೆಲ್ಬೋರ್ನ್‌ನಲ್ಲಿ ನಡೆದ ಪಂದ್ಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯುತ್ತಮ ಪಂದ್ಯ ಎಂದು ಮಾರ್ಷ್ ಹೇಳಿದ್ದಾರೆ. “ಭಾರತ-ಪಾಕಿಸ್ತಾನ ಪಂದ್ಯದಲ್ಲೇ ವಿಶ್ವ ಕಪ್ ಟೂರ್ನಿಯನ್ನು ನಿಲ್ಲಿಸಬೇಕು ಎಂದು ನಾನು ಭಾವಿಸುತ್ತೇನೆ. ಅದಕ್ಕಿಂತ ಉತ್ತಮ ಪಂದ್ಯವನ್ನು ನಾವು ನೋಡುವುದು ಕಷ್ಟ. ಅದ್ಭುತವಾದ ಮೂರು ವಾರಗಳು ಇನ್ನೂ ಟಿ20 ವಿಶ್ವ ಕಪ್ ಪಂದ್ಯಗಳು ನಡೆಯಲಿವೆ. ಆದರೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯ ಯಾವಾಗಲೂ ರೋಚಕವಾಗಿ ಇರುತ್ತದೆ” ಎಂದು ಮಾರ್ಷ್ ಹೇಳಿದ್ದಾರೆ.
ಕೊಹ್ಲಿ ಆಟಕ್ಕೆ ಮನಸೋತ ಮಾರ್ಷ್
ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಮಾರ್ಷ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. “ವಿರಾಟ್ ಕೊಹ್ಲಿ ಆಟ ಅದ್ಭುತ, ಅಸಾಧ್ಯವಾದುದನ್ನು ಸಾಧ್ಯ ಎಂದು ಅವರು ಬ್ಯಾಟಿಂಗ್ ಮೂಲಕ ತೋರಿಸಿಕೊಟ್ಟ ಪರಿಯೇ ಅತ್ಯದ್ಭುತ. ಈ ವಿಶ್ವ ಕಪ್‌ನಲ್ಲಿ ಅವರು ಮರೆಯಲಾಗದ ಇನಿಂಗ್ಸ್ ಆಡಿದ್ದಾರೆ. ಇದು ನಂಬಲಾಗದ ಇನಿಂಗ್ಸ್, ನಂಬಲಾಗದ ಪಂದ್ಯ, ಮುಂದಿನ ಪಂದ್ಯಗಳಲ್ಲಿಯೂ ಅವರು ಇದೇ ರೀತಿ ಆಟವನ್ನು ಮುಂದುವರೆಸುವ ವಿಶ್ವಾಸವಿದೆ” ಎಂದು ಮಾರ್ಷ್ ಹೇಳಿದ್ದಾರೆ.
ಇದನ್ನೂ ಓದಿ | IND VS PAK | ಧ್ವಜ ಸರಿಯಾಗಿ ಹಿಡಿಯಲು ಬಾರದ ಪಾಕಿಸ್ತಾನಿಗೆ ಕಾಶ್ಮೀರ ಬೇಕಂತೆ! ಫುಲ್ ಟ್ರೋಲ್