Site icon Vistara News

IND vs PAK: ಭಾರತಕ್ಕೆ ಸೆಮಿಯಲ್ಲಿ ಪಾಕ್​ ಎದುರಾದರೆ ತಾಣ ಬದಲಾವಣೆ!; ಕಾರಣ ಏನು?

Wankhede Stadium, Mumbai

ಮುಂಬಯಿ: ಭಾರತ(IND vs PAK) ತಂಡದ ಸೆಮಿಫೈನಲ್(world cup semi final 2023)​ ತಾಣ ಈಗಾಗಲೇ ನಿಗದಿಯಾಗಿದೆ. ಆದರೆ ಎದುರಾಳಿ ಮಾತ್ರ ಇನ್ನಷ್ಟೆ ನಿಗದಿಯಾಗಬೇಕಿದೆ. ಮೂಲ ವೇಳಾಪಟ್ಟಿಯ ಪ್ರಕಾರ ಭಾರತ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ನವೆಂಬರ್​ 15ರಂದು ಪಂದ್ಯ ಆಡಬೇಕಿದೆ. ಆದರೆ ಇದೀಗ ಪಾಕಿಸ್ತಾನ ತಂಡ ಎದುರಾದರೆ ಈ ಪಂದ್ಯದ ಸ್ಥಳ ಬದಲಾಗುವ ಸಾಧ್ಯತೆ ಅಧಿಕ ಎಂದು ವರದಿಯಾಗಿದೆ.

ಒಂದು ಸ್ಥಾನಕ್ಕಾಗಿ ಮೂರು ತಂಡಗಳ ಪೈಪೋಟಿ

ಈಗಾಗಲೇ ಮೂರು ತಂಡಗಳಾದ ಭಾರತ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್​ ಪ್ರವೇಶಿಸಿದೆ. ಇನ್ನುಳಿದ ಒಂದು ಸ್ಥಾನಕ್ಕಾಗಿ ಮೂರು ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಡ್ಡಿದೆ. ಈ ತಂಡಗಳೆಂದರೆ ನ್ಯೂಜಿಲ್ಯಾಂಡ್​, ಪಾಕಿಸ್ತಾನ ಮತ್ತು ಅಫಘಾನಿಸ್ತಾ. ಮೂರು ತಂಡಗಳಿಗೂ ತಲಾ ಒಂದು ಪಂದ್ಯ ಮಾತ್ರ ಬಾಕಿ ಉಳಿದಿವೆ. ಗೆದ್ದರೆ ಸೆಮಿ ಟಿಕೆಟ್​ ಸಿಗಬಹುದು ಸೋತರೆ ಟೂರ್ನಿಯಿಂದ ಹೊರಬೀಳಲಿದೆ.

ಒಂದೊಮ್ಮೆ ಭಾರತಕ್ಕೆ ಸೆಮಿಫೈನಲ್​ನಲ್ಲಿ ಅಫ್ಘಾನಿಸ್ತಾನ ಅಥವಾ ನ್ಯೂಜಿಲ್ಯಾಂಡ್​ ಎದುರಾಳಿಯಾದರೆ, ಆಗ ಭಾರತ ವಾಂಖೆಡೆ ಸ್ಟೇಡಿಯಂನಲ್ಲೇ ಪಂದ್ಯ ಆಡಲಿದೆ. ಪಾಕಿಸ್ತಾನ ಎದುರಾದರೆ ತಾಣವನ್ನು ಬದಲಿಸಿ ಭಾರತ ಈ ಪಂದ್ಯವನ್ನು ನವೆಂಬರ್ 16 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆಡಲಿದೆ. 16ರಂದು ಈಡನ್ ಗಾರ್ಡನ್ಸ್​ನಲ್ಲಿ ನಡೆಯಲಿದ್ದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದ ಪಂದ್ಯ ನ.15ರಂದು ವಾಂಖೆಡೆಯಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಪಂದ್ಯದ ತಾಣ ಬದಲಾವಣೆಗೆ ಕಾರಣ ಏನು?

ಸೆಮಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಎದುರಾದರೆ ಈ ಪಂದ್ಯದ ತಾಣವನ್ನು ಬದಲಿಸಲು ಪ್ರಮುಖ ಕಾರಣ ಭದ್ರತೆ. ಈ ಪಂದ್ಯ ಮುಂಬೈಯಲ್ಲಿ ನಡೆದರೆ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಗುಪ್ತಾಚಾರ ಇಲಾಖೆ ಮಾಹಿತಿ ನೀಡಿದೆ ಎಂದು ಮೂಲಗಳು ತಿಳಿಸಿವೆ. ಇದೇ ಕಾರಣಕ್ಕೆ ಪಂದ್ಯದ ತಾಣ ಬದಲಿಸಲು ನಿರ್ಧರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. 2008ರಲ್ಲಿ ಮುಂಬೈ ದಾಳಿಯಾಗಿತ್ತು. ಹೀಗಾಗಿ ಪಾಕ್​ ಮತ್ತು ಭಾರತ ಮುಂಬೈನಲ್ಲಿ ಪಂದ್ಯ ಆಡಿದರೆ ಏನಾದರು ಗಲಭೆಗಳು ಸಂಭವಿಸುವ ಮುನ್ನೆಚ್ಚರಿಕೆಯೂ ಇಲ್ಲಿನ ಪೊಲೀಸರಿಗೆ ಇರುವ ಸಾಧ್ಯತೆ ಇದೆ. ಪಂದ್ಯದ ತಾಣವನ್ನು ಬದಲಿಸುವ ವಿಚಾರವಾಗಿ ಬಿಸಿಸಿಐ ಅಥವಾ ಐಸಿಸಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಪಾಕಿಸ್ತಾನ ತಂಡ ಇಂಗ್ಲೆಂಡ್​ ವಿರುದ್ಧ ಸೋತರೆ ಈ ಸಮಸ್ಯೆ ಎದುರಾಗದು. ಸೋಲು ಕಂಡ ಪಾಕಿಸ್ತಾನ ಆಗ ಟೂರ್ನಿಯಿಂದ ಹೊರಬೀಳುತ್ತದೆ. ಇಂದು(ಗುರುವಾರ) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ನ್ಯೂಜಿಲ್ಯಾಂಡ್​ ಮತ್ತು ಲಂಕಾ ವಿರುದ್ಧದ ಪಂದ್ಯದ ಫಲಿತಾಂಶವೂ ಕೂಡ ಪಾಕ್​ ಸೆಮಿ ಲೆಕ್ಕಾಚಾರವನ್ನು ನಿರ್ಧರಿಸಲಿದೆ. ಒಂದೊಮ್ಮೆ ನ್ಯೂಜಿಲ್ಯಾಂಡ್​ ಸೋತರೆ ಇದರ ಲಾಭ ಪಾಕಿಸ್ತಾನಕ್ಕೆ ಲಭಿಸಲಿದೆ.

ಇದನ್ನೂ ಓದಿ Rohit Sharma : ನಾಯಕತ್ವದ ವಿಚಾರದಲ್ಲಿ ಭಾರತ ಪರ ವಿಶೇಷ ದಾಖಲೆ ಮಾಡಿದ ರೋಹಿತ್ ಶರ್ಮಾ

ಸನ್ನಿವೇಶ 1

ಸಂಭಾವ್ಯ ಸನ್ನಿವೇಶವೊಂದರಲ್ಲಿ ನ್ಯೂಜಿಲೆಂಡ್ ತಂಡ ಶ್ರೀಲಂಕಾ ವಿರುದ್ಧ ಸೋತರೆ ಮತ್ತು ಪಾಕಿಸ್ತಾನವು ಇಂಗ್ಲೆಂಡ್ ತಂಡವನ್ನು ಸೋಲಿಸಿದರೆ ಪಾಕಿಸ್ತಾನವು ಹತ್ತು ಅಂಕಗಳನ್ನು ಪಡೆಯುತ್ತಿದೆ. ಕಿವೀಸ್​ ಎಂಟು ಅಂಕದಲ್ಲೇ ಉಳಿಯುತ್ತದೆ.

ಸನ್ನಿವೇಶ 2

ಒಂದು ವೇಳೆ ನ್ಯೂಜಿಲೆಂಡ್ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿದರೆ, ಪಾಕಿಸ್ತಾನ ಇಂಗ್ಲೆಂಡ್ ವಿರುದ್ಧ ಗೆದ್ದರೆ, ಅಫ್ಘಾನಿಸ್ತಾನದ ಅಭಿಯಾನ ಎರಡು ಸೋಲಿನಲ್ಲಿ ಕೊನೆಗೊಂಡರೆ, ನಾಲ್ಕನೇ ಸ್ಥಾನವು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ನೆಟ್ ರನ್ ರೇಟ್​ಮೂಲಕ ನಿರ್ಧಾಗೊಳ್ಳುತ್ತದೆ. ನ್ಯೂಜಿಲೆಂಡ್​ ತಂಡದ ನೆಟ್ ರನ್ ರೇಟ್ ಅನ್ನು ಹಿಂದಿಕ್ಕಲು, ಪಾಕಿಸ್ತಾನವು ಇಂಗ್ಲೆಂಡ್ ವಿರುದ್ಧದ ಗೆಲುವಿನ ಅಂತರ ಹೆಚ್ಚಿಸಬೇಕು. ಆದಾಗ್ಯೂ, ಅಫ್ಘಾನಿಸ್ತಾನವು ತನ್ನ ಅಂತಿಮ ಪಂದ್ಯಗಳಲ್ಲಿ ಗೆದ್ದರೆ ಹತ್ತು ಅಂಕಗಳನ್ನು ಪಡೆಯುತ್ತದೆ. ಆಗ ರನ್​ರೇಟ್​ ಲೆಕ್ಕಾಚಾರ ಪರಿಗಣನೆಗೆ ಬರುತ್ತದೆ.

ಸನ್ನಿವೇಶ 3

ಶ್ರೀಲಂಕಾ ವಿರುದ್ಧದ ನ್ಯೂಜಿಲೆಂಡ್​​ನ ಅಂತಿಮ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಮತ್ತು ಪಾಕಿಸ್ತಾನದ ಇಂಗ್ಲೆಂಡ್ ವಿರುದ್ಧ ಗೆದ್ದರೆ ಪಾಕಿಸ್ತಾನ ತಂಡ ಸೆಮೀಸ್​ಗೆ ತಲುಪಬಹುದು. ಆದರೆ, ಆಫ್ಘನ್​ ತಂಡ ಅಂತಿಮ ಪಂದ್ಯದಲ್ಲಿ ಸೋಲು ಕಾಣಬೇಕು.

Exit mobile version