ಕೊಲೊಂಬೊ: ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat kohli) ಪಾಕಿಸ್ತಾನ ತಂಡದ ವಿರುದ್ಧ ಅಬ್ಬರಿಸಿದ್ದಾರೆ. ಅವರು ಅಜೇಯ 122 ರನ್ಗಳನ್ನು ಸ್ಫೊಟಕವಾಗಿ ಬಾರಿಸುವ ಮೂಲಕ ಭಾರತ ತಂಡ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ಅವರ ಈ ಸಾಧನೆಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಅವರಿಗೆ ಲಭಿಸಿದೆ. ಈ ಮೂಲಕವೂ ಅವರು ಹೊಸ ದಾಖಲೆ ಸೃಷ್ಟಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿಗೆ ಕೊಲೊಂಬೊ ಮೈದಾನವೆಂದರೆ ಅಚ್ಚುಮೆಚ್ಚು. ಇಲ್ಲಿನ ಸ್ಟೇಡಿಯಮ್ನಲ್ಲಿ ಅವರು ಸತತಾಗಿ ನಾಲ್ಕು ಶತಕಗಳನ್ನು ಬಾರಿಸಿದ ದಾಖಲೆ ಮಾಡಿದ್ದಾರೆ. ಸೋಮವಾರದ ಪಂದ್ಯದಲ್ಲಿ 92 ಎಸೆತಗಳನ್ನು ಎದುರಿಸಿದ ಅವರು 122 ರನ್ ಬಾರಿಸುವ ಮೂಲಕ ಪಾಕ್ ತಂಡಕ್ಕೆ ದೊಡ್ಡ ಮೊತ್ತದ ಸವಾಲೊಡ್ಡಲು ಭಾರತ ತಂಡಕ್ಕೆ ನೆರವಾಗಿದ್ದಾರೆ. ಹೀಗಾಗಿ ಅವರನ್ನು ಪಂದ್ಯಶ್ರೇಷ್ಠ ಎಂದು ಗುರುತಿಸಿ ಗೌರವಿಸಲಾಗಿದೆ. ಈ ಮೂಲಕ ಪಾಕಿಸ್ತಾನ ತಂಡದ ವಿರುದ್ಧ ಮೂರು ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಪಡೆದಿರುವ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಭಾರತ ತಂಡದ ಪರವಾಗಿ ಇದು ಕೂಡ ಹೊಸ ದಾಖಲೆಯಾಗಿದೆ.
ವಿರಾಟ್ ಕೊಹ್ಲಿ (Virat Kohli) ತಾವು ಮಾಸ್ಟರ್ ಕ್ಲಾಸ್ ಆಟಗಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಪಾಕಿಸ್ತಾನ ತಂಡದ ವಿರುದ್ದ (Ind vs pak) ಯಾವಾಗಲೂ ಅಬ್ಬರಿಸುವ ರನ್ ಮೆಷಿನ್ ಕೊಹ್ಲಿ ಮತ್ತೆ ಸಾಂಪ್ರದಾಯಿಕ ಎದುರಾಳಿ ತಂಡ ವಿರುದ್ಧ ಶತಕ ಬಾರಿಸಿದ್ದಾರೆ. ಕೇವಲ 94 ಎಸೆತಗಳಲ್ಲಿ 122 ರನ್ ಬಾರಿಸಿದ ಅವರು ಹಲವಾರು ದಾಖಲೆಗಳನ್ನು ಬರೆದಿದ್ದಾರೆ.
ಹಿಂದಿನ ಪಂದ್ಯದಲ್ಲಿ ಶಾಹೀನ್ ಶಾ ಅಫ್ರಿದಿಯ ಬೌಲಿಂಗ್ಗೆ ಬೆದರಿದ್ದ ವಿರಾಟ್ ಕೊಹ್ಲಿ ಈ ಬಾರಿ ಕ್ಯಾರೇ ಎನ್ನಲಿಲ್ಲ. ಪಾಕ್ ಬೌಲರ್ಗಳನ್ನು ಬೆನ್ನಟ್ಟಿ ರನ್ ಬಾರಿಸಿದ ಅವರು ಹೊಸ ದಾಖಲೆಗಳನ್ನು ಸೃಷ್ಟಿಸಿದ್ದಾರೆ. 84 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿದ ಅವರು ಮೂರಂಕಿ ಮೊತ್ತ ದಾಟಿದ್ದಾರೆ. ಇದು ವಿರಾಟ್ ಕೊಹ್ಲಿಯ 47 ನೇ ಏಕದಿನ ಶತಕವಾಗಿದೆ. ಅಲ್ಲದೆ, ಕೊಹ್ಲಿ ತಮ್ಮ 77ನೇ ಅಂತರರಾಷ್ಟ್ರೀಯ ಶತಕವನ್ನೂ ಸಿಡಿಸಿದಂತಾಗಿದೆ.
ಕೊಲೊಂಬೊದಲ್ಲಿ ನಾಲ್ಕನೇ ಶತಕ
ವಿರಾಟ್ ಕೊಹ್ಲಿಗೆ ಕೊಲೊಂಬೊ ಸ್ಟೇಡಿಯಮ್ ಎಂದರೆ ಅಚ್ಚುಮೆಚ್ಚು. ಈ ಹಿಂದೆ ಈ ಕ್ರೀಡಾಂಗಣದಲ್ಲಿ ಸತತ 3 ಶತಕಗಳನ್ನು ಬಾರಿಸಿದ್ದ ಅವರು ಇದೀಗ ಮತ್ತೊಂದು ಶತಕ ಬಾರಿಸಿದರು. ಇದು ಅವರು ಸತತ ನಾಲ್ಕನೇ ಶಕತವಾಗಿದೆ. ಈ ಮೂಲಕ ಅವರು ಕೊಲೊಂಬೊ ಸ್ಟೇಡಿಯಮ್ನ ರಾಜ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ : Virat kohli : ಅತಿ ವೇಗದಲ್ಲಿ 13,000 ಏಕದಿನ ರನ್ಗಳನ್ನು ಬಾರಿಸಿ ದಾಖಲೆ ಬರೆದ ಕೊಹ್ಲಿ
ಕೊಲೊಂಬೊದ ಮಳೆ ಹಾಗೂ ಮೋಡ ಕವಿದ ವಾತಾರವಣದಲ್ಲಿ ವಿರಾಟ್ ಕೊಹ್ಲಿ ತಮ್ಮ ಮಾಸ್ಟರ್ ಕ್ಲಾಸ್ ಪ್ರದರ್ಶನ ನೀಡಿದ್ದಾರೆ. ಕೊಹ್ಲಿ ತಮ್ಮ ಅರ್ಧಶತಕವನ್ನು ತಲುಪಲು ಕೇವಲ 55 ಎಸೆತಗಳನ್ನು ತೆಗೆದುಕೊಂಡರು ಮತ್ತು ನಂತರ ಸಿಕ್ಸರ್ ಮತ್ತು ಬೌಂಡರಿ ಸಿಕ್ಸರ್ಗಳ ಮೂಲಕ ರನ್ ಗಳಿಕೆಗೆ ವೇಗ ಕೊಟ್ಟರು.
ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ 50+ ಸ್ಕೋರ್
145 – ಸಚಿನ್ ತೆಂಡೂಲ್ಕರ್
118 – ಕುಮಾರ ಸಂಗಕ್ಕಾರ
112 – ವಿರಾಟ್ ಕೊಹ್ಲಿ*
112 – ರಿಕಿ ಪಾಂಟಿಂಗ್
103 – ಜಾಕ್ ಕಾಲಿಸ್
ಅದೇ ರೀತಿ ಅಂತಾರಾಷ್ಟ್ರಿಯ ಕ್ರಿಕೆಟ್ನಲ್ಲಿ ಅತಿ ವೇಗದಲ್ಲಿ 8000, 9000, 10000, 11000, 12000 ಮತ್ತು 13,000 ರನ್ ಗಳಿಸಿದ ಬ್ಯಾಟರ್ ಎಂಬ ಖ್ಯಾತಿಗೆ ಪಾತ್ರರಾದರು.
ಏಕದಿನ ಕ್ರಿಕೆಟ್ನಲ್ಲಿ ಅತ್ಯಂತ ಕಡಿಮೆ ಇನ್ನಿಂಗ್ಸ್ಗಳಲ್ಲಿ 13,000 ರನ್ ಪೂರೈಸಿದ ಆಟಗಾರರು
267 – ವಿರಾಟ್ ಕೊಹ್ಲಿ*
321 – ಸಚಿನ್ ತೆಂಡೂಲ್ಕರ್
341 – ರಿಕಿ ಪಾಂಟಿಂಗ್
363 – ಕುಮಾರ ಸಂಗಕ್ಕಾರ
416 – ಸನತ್ ಜಯಸೂರ್ಯ
ಏಕದಿನ ಏಷ್ಯಾಕಪ್ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರರು
6- ಸನತ್ ಜಯಸೂರ್ಯ
4- ವಿರಾಟ್ ಕೊಹ್ಲಿ
4- ಕುಮಾರ ಸಂಗಕ್ಕಾರ
3- ಶೋಯೆಬ್ ಮಲಿಕ್
ವಿರಾಟ್ ಕೊಹ್ಲಿ 94 ಎಸೆತಗಳಲ್ಲಿ ಅಜೇಯ 122 ರನ್ ಸಿಡಿಸಿದ್ದಾರೆ. ಅವರು 9 ಬೌಂಡರಿ ಮತ್ತು 2 ಸಿಕ್ಸರ್ಗಳನ್ನು ಬಾರಿಸಿ ಭಾರತಕ್ಕೆ 356 ರನ್ಗಳ ಬೃಹತ್ ಮೊತ್ತವನ್ನು ದಾಖಲಿಸಲು ಸಹಾಯ ಮಾಡಿದರು. ಕೊನೆಯಲ್ಲಿ ಕೊಹ್ಲಿ 2 ಬೌಂಡರಿಗಳನ್ನು ಬಾರಿಸಿದರು. ನಂತರ ಭಾರತದ ಇನ್ನಿಂಗ್ಸ್ ಅನ್ನು ಬೃಹತ್ ಸಿಕ್ಸರ್ ನೊಂದಿಗೆ ಕೊನೆಗೊಳಿಸಿದರು.
ಕೊಲೊಂಬೊದಲ್ಲಿ ಭಾರತದ ನಾಲ್ಕು ಇನಿಂಗ್ಸ್ಗಳು
128(119)
131(96)
110(116)
122*(94)