Site icon Vistara News

IND vs SA: ಏಕದಿನ ಸರಣಿಗೂ ಮುನ್ನ ಕೋಚಿಂಗ್​ ಸಿಬ್ಬಂದಿ ಬದಲಿಸಿದ ಬಿಸಿಸಿಐ

team india cricket coaching staff

ಜೊಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನ ಟೀಮ್​ ಇಂಡಿಯಾದ ಕೋಚಿಂಗ್​ ಸಿಬ್ಬಂದಿ ಬದಲಾವಣೆ ಮಾಡಲಾಗಿದೆ. ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಅವರಿಗೆ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಆದರೆ ಟೆಸ್ಟ್​ ಸರಣಿಗೆ ಮತ್ತೆ ತಂಡ ಸೇರಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

“ಏಕದಿನ ವಿಶ್ವಕಪ್​ ಸರಣಿಯ ಬಳಿಕ ಸರಿಯಾಗಿ ವಿಶ್ರಾಂತಿ ಸಿಗದ ಕಾರಣ ತಂಡದ ಎಲ್ಲ ಖಾಯಂ ಕೋಚಿಂಗ್​ ಸಿಬ್ಬಂದಿಗಳಿಗೆ ದಕ್ಷಿಣ ಆಫ್ರಿಕಾ ಏಕದಿನ ಸರಣಿಗೆ ವಿಶ್ರಾಂತಿ ನೀಡಲಾಗಿದೆ” ಎಂದು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಪ್ರಕಟಿಸಿದೆ. ಕಾರ್ಯದರ್ಶಿ ಜೈಯ್​ ಶಾ ಅವರು ಈ ನಿರ್ಧಾರ ಕೈಗೊಂಡಿರುವುದಾಗಿ ತಳಿಸಿದೆ.

ಸೀನಿಯರ್​ ಕೋಚ್​ಗಳ ಅನುಪಸ್ಥಿತಿಯಲ್ಲಿ ಭಾರತ ‘ಎ’ ತಂಡದ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್, ಬೌಲಿಂಗ್ ಕೋಚ್ ರಾಜೀಬ್ ದತ್ತಾ ಮತ್ತು ಫೀಲ್ಡಿಂಗ್ ಕೋಚ್ ಅಜಯ್ ರಾತ್ರಾ ಅವರು ಏಕದಿನ ಸರಣಿಯಲ್ಲಿ ಭಾರತ ತಂಡಕ್ಕೆ ಕೋಚಿಂಗ್​ ಮಾರ್ಗದರ್ಶನ ಮಾಡಲಿದ್ದಾರೆ.​

ಇದನ್ನೂ ಓದಿ Team India: ಟೆಸ್ಟ್​​ ಸರಣಿಯಿಂದ ಶಮಿ ಔಟ್; ಏಕದಿನದಿಂದ ಹಿಂದೆ ಸರಿದ ದೀಪಕ್​ ಚಹರ್

ಈ ಹಿಂದೆ ನ್ಯಾಷನಲ್​ ಕ್ರಿಕೆಟ್ ಅಕಾಡೆಮಿಯಲ್ಲಿ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿದ್ದ ಸಿತಾಂಶು ಕೋಟಕ್ ಟೀಮ್ ಇಂಡಿಯಾದ ಕೋಚ್ ಆಗಿ ಕಾಣಿಸಿಕೊಳ್ಳುತ್ತಿರುವುದು ಇದು 2ನೇ ಬಾರಿ. ಇದಕ್ಕೂ ಮುನ್ನ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಅವರು ತರಬೇತುದಾರಾಗಿ ಕಾಣಿಸಿಕೊಂಡಿದ್ದರು. ಈ ಸರಣಿಯಲ್ಲಿ ಭಾರತ ತಂಡ ಗೆಲುವು ಕೂಡ ಕಂಡಿತ್ತು. ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯ ನಾಳೆ (ಡಿ.17) ಜೊಹಾನ್ಸ್​ಬರ್ಗ್​ನಲ್ಲಿ ನಡೆಯಲಿದೆ.

ಹಿಂದೆ ಸರಿದ ದೀಪಕ್​

ಕುಟುಂಬದ ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ಮಧ್ಯಮ ವೇಗಿ ದೀಪಕ್​ ಚಹರ್​ ಅವರು ಏಕದಿನ ಸರಣಿಯಿಂದ ಹಿಂದೆ ಸರಿದಿದ್ದಾರೆ. ಈ ವಿಚಾರವನ್ನು ಬಿಸಿಸಿಐ ಪ್ರಕಡಿಸಿದೆ. ಜತೆಗೆ ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಆಕಾಶ್ ದೀಪ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ದೀಪಕ್ ಚಹರ್​ ಅವರನ್ನು ತಂಡಕ್ಕೆ ಆಯ್ಕೆ ಮಾಡುವಾಗಲೇ ಅವರು ಸರಣಿಯಲ್ಲಿ ಆಡುವುದು ಅನುಮಾನ ಎನ್ನಲಾಗಿತ್ತು. ಇದೀಗ ನಿರೀಕ್ಷೆಯಂತೆ ಅವರು ಸರಣಿಯಿಂದ ಹೊರಬಿದ್ದಿದ್ದಾರೆ. 

ಪರಿಷ್ಕೃತ ಏಕದಿನ ತಂಡ

ಋತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಾಟಿದಾರ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್(ಮೊದಲ ಪಂದ್ಯಕ್ಕೆ ಮಾತ್ರ), ಕೆಎಲ್ ರಾಹುಲ್ (ನಾಯಕ), ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಮುಖೇಶ್ ಕುಮಾರ್, ಅವೇಶ್ ಖಾನ್ , ಅರ್ಷದೀಪ್ ಸಿಂಗ್, ಆಕಾಶ್ ದೀಪ್

Exit mobile version