ಬಾರ್ಬಡೋಸ್: ಭಾರತ(South Africa vs India) ಮತ್ತು ದಕ್ಷಿಣ ಆಫ್ರಿಕಾ ನಡುವಣ ಟಿ20 ವಿಶ್ವಕಪ್(IND vs SA Final) ಫೈನಲ್ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಪಂದ್ಯ ಆರಂಭಕ್ಕೂ ಮುನ್ನವೇ ಮಾಜಿ ನಾಯಕ ಸೌರವ್ ಗಂಗೂಲಿ(Sourav Ganguly) ಅವರು ರೋಹಿತ್ ಶರ್ಮ(Rohit Sharma) ಬಗ್ಗೆ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಫೈನಲ್‌ನಲ್ಲಿ ಭಾರತ ಸೋತರೆ ರೋಹಿತ್ ಬಾರ್ಬಡೋಸ್ ಸಾಗರಕ್ಕೆ ಜಿಗಿಯಬಹುದು ಎಂದು ಹೇಳಿದ್ದಾರೆ.
ಪಿಟಿಐ ಜತೆ ಮಾತನಾಡುವ ವೇಳೆ ಗಂಗೂಲಿ ಈ ಮಾತನ್ನು ಹೇಳಿದ್ದಾರೆ. “ರೋಹಿತ್ ಶರ್ಮ ನಾಯಕನಾಗಿ ಆಡುತ್ತಿರುವ ಎರಡನೇ ವಿಶ್ವಕಪ್ ಫೈನಲ್ ಇದಾಗಿದೆ. ಕಳೆದ ಏಕದಿನ ಮತ್ತು ಪ್ರಸ್ತುತ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಜೇಯವಾಗಿ ತಂಡವನ್ನು ಫೈನಲ್ಗೆ ಕೊಂಡೊಯ್ದಿದ್ದಾರೆ. ಇದೀಗ ಈ ಬಾರಿಯೂ ಫೈನಲ್‌ನಲ್ಲಿ ಸೋತರೆ ಅವರು ಬಾರ್ಬಡೋಸ್ ಸಾಗರಕ್ಕೆ ಜಿಗಿಯಬಹುದು” ಎಂದು ಹಾಸ್ಯಾಸ್ಪದವಾಗಿ ಹೇಳಿದರು. ಜತೆಗೆ ಭಾರತ ತಂಡ ವಿಶ್ವಕಪ್ ಗೆಲ್ಲುವಂತಾಗಲಿ ಎಂದು ಹಾರೈಸಿದ್ದಾರೆ.
36 ವರ್ಷದ ರೋಹಿತ್ ಶರ್ಮ ಪಾಲಿಗೆ ಬಹುತೇಕ ಇದೇ ಕೊನೆಯ ಟಿ20 ವಿಶ್ವಕಪ್ ಆಗುವ ಸಾಧ್ಯತೆಯಿದೆ. ಹೀಗಾಗಿ ಅವರು ತನ್ನ ಕೊನೆಯ ಪ್ರಯತ್ನದಲ್ಲಿ ಕಪ್ ಗೆಲ್ಲುವಂತಾಗಿ ಎಂದು ಕೊಟ್ಯಂತರ ಅಭಿಮಾನಿಗಳ ಹಾರೈಸಿದ್ದಾರೆ. 10 ವರ್ಷಗಳ ಬಳಿಕ ಟಿ20 ವಿಶ್ವಕಪ್(T20 World Cup 2024) ಟೂರ್ನಿಯಲ್ಲಿ ಫೈನಲ್(IND vs SA Final) ಪ್ರವೇಶಿಸಿರುವ ಭಾರತ ತಂಡ ಗೆಲ್ಲುವಂತೆ ಅಭಿಮಾನಿಗಳು ದೇಶಾದ್ಯಂತ ವಿಶೇಷವಾಗಿ ಪೂಜೆ ಸಲ್ಲಿಸಿದ್ದಾರೆ.
ಭಾರತ ಬಲಿಷ್ಠ ಆದರೆ ಎಚ್ಚರ ಅಗತ್ಯ
ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಇರುವ ಭಾರತ ತಂಡವನ್ನು ಬಲಿಷ್ಠ ಎನ್ನಲೇಬೇಕು. ಆದರೆ, ಭಾರತ ಪೂರ್ಣ ಎಚ್ಚರದಿಂದಲೇ ಫೈನಲ್ ಆಡಬೇಕು. ಎದುರಾಳಿಯನ್ನು ಒಮ್ಮೆಯೂ ಕಡೆಗಣಿಸುವುದು ಸಾಧ್ಯವೇ ಇಲ್ಲ. ಯಾರು ಯಾರನ್ನು ಕೆಡವಿ ಬೀಳಿಸುತ್ತಾರೆ ಎಂಬುದು ಟಿ20 ಮಾದರಿಯಲ್ಲಿ ಅಂದಾಜಿಸುವುದಕ್ಕೆ ಕಷ್ಟ ಸಾಧ್ಯ. ಕೆಲವೇ ಓವರ್‌ಗಳಲ್ಲಿ ಪಂದ್ಯದ ಚಿತ್ರಣವೇ ಬದಲಾಗುವುದು ಟಿ20 ಪಂದ್ಯಗಳ ಶಕ್ತಿ.
ಇದನ್ನೂ ಓದಿ IND vs SA Final: ವಿಶ್ವಕಪ್ ಗೆಲ್ಲಲು ಕೊಹ್ಲಿ, ರೋಹಿತ್, ದ್ರಾವಿಡ್ಗೆ ಇದು ಕೊನೆಯ ಅವಕಾಶ!
ಭಾರತ ತಂಡದ ದೊಡ್ಡ ಸಮಸ್ಯೆ ಎಂದರೆ ಲೀಗ್, ಸೆಮಿಫೈನಲ್ನಲ್ಲಿ ಎಷ್ಟೇ ಉತ್ತಮ ಪ್ರದರ್ಶನ ತೋರಿದರೂ ಕೂಡ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸಂಪೂರ್ಣ ನರ್ವಸ್ ಆಗಿ ಆಡುವುದು. ಒಂದು ವಿಕೆಟ್ ಬಿದ್ದರೆ ಸಾಕು ಬಳಿಕ ಕ್ರೀಸ್ಗಿಳಿವ ಬ್ಯಾಟರ್ಗಳು ಭಯದಿಂದಲೇ ಆಡಲು ಮುಂದಾಗಿ ಸತತವಾಗಿ ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುತ್ತಾರೆ. ಕಳೆದ ಏಕದಿನ ವಿಶ್ವಕಪ್ ಫೈನಲ್, ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಇದಕ್ಕೆ ಉತ್ತಮ ನಿದರ್ಶನ. ಹೀಗಾಗಿ ನಾಳೆ ನಡೆಯುವ ಫೈನಲ್ ಪಂದ್ಯದಲ್ಲಿ ಬ್ಯಾಟರ್ಗಳು ಮತ್ತು ಬೌಲರ್ಗಳು ವಿಚಲಿತರಾಗದೆ ಆಡಬೇಕು.