Site icon Vistara News

IND VS SA | ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಪಿಚ್​ ರಿಪೋರ್ಟ್​ ಹೇಗಿದೆ?

t20

ಪರ್ತ್: ಟಿ20 ವಿಶ್ವ ಕಪ್​ನಲ್ಲಿ (T20 World Cup) ಭಾನುವಾರ ನಡೆಯಲಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಪಂದ್ಯ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಸೆಮಿ ಹಾದಿಯನ್ನು ಮತ್ತಷ್ಟು ಸುಗಮಗೊಳಿಸುವ ನಿಟ್ಟಿನಲ್ಲಿ ಉಭಯ ತಂಡಗಳು ಇಲ್ಲಿ ಗೆಲುವಿಗಾಗಿ ಶಕ್ತಿ ಮೀರಿ ಹೋರಾಟ ನಡೆಸಲಿದೆ. ಸದ್ಯ ಬಿ ಗ್ರೂಪ್​ನ ಅಂಕಪಟ್ಟಿಯಲ್ಲಿ ಇತ್ತಂಡಗಳು ಮೊದಲ ಎರಡು ಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಪಂದ್ಯಕ್ಕೆ ಮಳೆ ಕಾಟ ಇದೆಯೇ?

ಶುಕ್ರವಾರ ಮೆಲ್ಬೋರ್ನ್​ನಲ್ಲಿ ನಡೆಯಬೇಕಿದ್ದ ಅಫಘಾನಿಸ್ತಾನ vs ಐರ್ಲೆಂಡ್ ಹಾಗೂ ಇಂಗ್ಲೆಂಡ್ vs ಆಸ್ಟ್ರೇಲಿಯಾ ನಡುವಣ ಪಂದ್ಯ ಒಂದೂ ಎಸೆತ ಕಾಣದೆ ಮಳೆಯಿಂದ ಸಂಪೂರ್ಣ ರದ್ದಾಯಿತು. ಇದೀಗ ಭಾರತ- ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ಮಳೆಯ ಕಾಟ ಕಾಡಲಿದೆಯೇ ಎಂದು ನೋಡುವುದಾದರೆ ಇಲ್ಲ ಎನ್ನುತ್ತಿದೆ ಹವಾಮಾನ ಇಲಾಖೆ.

“ಪರ್ತ್​ನಲ್ಲಿ ನಡೆಯಲಿರುವ ಭಾರತ- ದಕ್ಷಿಣ ಆಫ್ರಿಕಾ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇಲ್ಲ. ಆದರೆ ಬೆಳಗ್ಗಿನ ಜಾವ ಕೊಂಚ ಮಳೆ ಬೀಳುವ ಸಾಧ್ಯತೆ ಇದೆ. ಭಾರತ-ದಕ್ಷಿಣ ಆಫ್ರಿಕಾ ಮುಖಾಮುಖಿ ಹಗಲು-ರಾತ್ರಿಯ ಪಂದ್ಯವಾದ ಕಾರಣ ಈ ರೋಚಕ ಕದನಕ್ಕೆ ಯಾವುದೇ ಅಡೆತಡೆಗಳಿಲ್ಲ” ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪಿಚ್‌ ರಿಪೋರ್ಟ್‌

ಪರ್ತ್‌ ಸ್ಟೇಡಿಯಮ್​ನ ಪಿಚ್‌ ವೇಗಿಗಳಿಗೆ ಹೆಚ್ಚು ಸ್ನೇಹಿಯಾಗಿದೆ. ಆಸ್ಟ್ರೇಲಿಯಾದ ಇತರೆ ಪಿಚ್‌ಗಳಿಗೆ ಹೋಲಿಕೆ ಮಾಡಿದರೆ, ಈ ಪಿಚ್​ನಲ್ಲಿ ಚೆಂಡು ಹೆಚ್ಚಿನ ಬೌನ್ಸ್‌ ಹಾಗೂ ಚಲನೆಯನ್ನು ಹೊಂದಿದೆ. ಈ ಪಂದ್ಯ ಹಗಲು-ರಾತ್ರಿ ನಡೆಯುವುದರಿಂದ ಟಾಸ್‌ ಗೆದ್ದ ತಂಡ ಚೇಸಿಂಗ್‌ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಿದೆ. ಇದಕ್ಕೆ ಕಾರಣ ಇಲ್ಲಿ ಸಾಕಷ್ಟು ಇಬ್ಬನಿ ಬೀಳುತ್ತದೆ. ಈ ನಿಟ್ಟಿನಲ್ಲಿ ಟಾಸ್​ ಕೂಡ ನಿರ್ಣಾಯಕವಾಗಿದೆ.

ಸಂಭಾವ್ಯ ತಂಡ:

ಭಾರತ: ರೋಹಿತ್​ ಶರ್ಮಾ(ನಾಯಕ), ಕೆ.ಎಲ್​. ರಾಹುಲ್​, ವಿರಾಟ್​ ಕೊಹ್ಲಿ, ಸೂರ್ಯಕುಮಾರ್​ ಯಾದವ್​, ಹಾರ್ದಿಕ್​ ಪಾಂಡ್ಯ, ದಿನೇಶ್​ ಕಾರ್ತಿಕ್​, ಅಕ್ಷರ್​ ಪಟೇಲ್​, ಆರ್​. ಅಶ್ವಿನ್​, ಭುವನೇಶ್ವರ್​ ಕುಮಾರ್​, ಮೊಹಮ್ಮದ್​ ಶಮಿ, ಅರ್ಶ್​ದೀಪ್​ ಸಿಂಗ್​.

ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರಿಲಿ ರೊಸೊ, ಏಡೆನ್ ಮಾರ್ಕ್ರಮ್‌, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಆನ್ರಿಚ್‌ ನೋರ್ಜೆ, ತಬ್ರೇಜ್‌ ಶಮ್ಸಿ.

ಪಂದ್ಯ ಆರಂಭ
ಸಂಜೆ ೪.೩೦ಕ್ಕೆ

ಇದನ್ನೂ ಓದಿ | T20 World Cup | ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ರಾಹುಲ್​ ಬದಲು ಪಂತ್​ಗೆ ಅವಕಾಶ?

Exit mobile version