ಜೊಹಾನ್ಸ್ಬರ್ಗ್: ಭಾರತ ಮತ್ತು ದಕ್ಷಿಣ ಆಫ್ರಿಕಾ(IND vs SA) ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ನಾಳೆ(ಡಿ.17) ನಡೆಯಲಿದೆ. ಈ ಪಂದ್ಯಕ್ಕೆ ಜೊಹಾನ್ಸ್ಬರ್ಗ್ನ ವಾಂಡರರ್ಸ್ ಸ್ಟೇಡಿಯಂ ಅಣಿಯಾಗಿದೆ. ಪಂದ್ಯ ಪಿಚ್ ರಿಪೋರ್ಟ್, ಇತ್ತಂಡಗಳ ಏಕದಿನ ಮುಖಾಮುಖಿಯ ಇತಿಹಾಸ, ಹವಾಮಾನ ವರದಿಯ ಸಂಪೂರ್ಣ ಮಾಹಿತಿ ಇಂತಿದೆ.
ಪಿಚ್ ರಿಪೋರ್ಟ್
ದಕ್ಷಿಣ ಆಫ್ರಿಕಾದ ಜೊಹಾನ್ಸ್ರ್ಬಗ್ ಭಾರತದ ಪಾಲಿಗೆ ನೆಚ್ಚಿನ ತಾಣವೆನಿಸಿದೆ. ಇಲ್ಲಿ ಮೂರೂ ಮಾದರಿ ಕ್ರಿಕೆಟ್ನಲ್ಲಿಯೂ ಭಾರತ ಉತ್ತಮ ದಾಖಲೆ ಹೊಂದಿದೆ. ಹೀಗಾಗಿ ಇದನ್ನು ಭಾರತದ ಎರಡನೇ ತವರು ಮೈದಾನ ಎಂದು ಕರೆದರೂ ತಪ್ಪಾಗಲಾರದು. ಭಾರತ ಟಿ20 ಸರಣಿ ಸೋಲನ್ನು ತಪ್ಪಿಸಿಕೊಂಡಿದ್ದು ಕೂಡ ಇದೇ ಮೈದಾನಲ್ಲಿ. ಆದ್ದರಿಂದ ಭಾರತವೇ ಇಲ್ಲಿ ಫೇವರಿಟ್ ಎನ್ನಲಡ್ಡಿಯಿಲ್ಲ.
ವಾಂಡರರ್ಸ್ ಸ್ಟೇಡಿಯಂನಲ್ಲಿನ ಪಿಚ್ ಸ್ಥಿರವಾದ ಬೌನ್ಸ್ನಿಂದ ಕೂಡಿದ್ದು ಫ್ಲಾಟ್ ಟ್ರ್ಯಾಕ್ ಆಗಿದೆ. ಇಲ್ಲಿ 435 ರನ್ಗಳನ್ನು ಚೇಸಿಂಗ್ ಮಾಡಿ ಗದ್ದ ನಿದರ್ಶನವಿದೆ. ಒಟ್ಟಾರೆಯಾಗಿ ಇದು ಬ್ಯಾಟರ್ ಸ್ವರ್ಗ ಎನ್ನಬಹುದು. ಹೀಗಾಗಿ ಬೌಲರ್ಗಳು ಶಕ್ತಿ ಮೀರಿ ಪ್ರದರ್ಶನ ತೋರಬೇಕಿದೆ. ಪಂದ್ಯಕ್ಕೆ ಮಳೆಯ ಯಾವುದೇ ಭೀತಿ ಇಲ್ಲ. ಹೀಗಾಗಿ ಅಭಿಮಾನಿಗಳು ಪಂದ್ಯವನ್ನು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು.
ಇದನ್ನೂ ಓದಿ INDW vs ENGW: ದಾಖಲೆಯ ಗೆಲುವು ಸಾಧಿಸಿ ಸರಣಿ ಗೆದ್ದ ಭಾರತ ಮಹಿಳಾ ಕ್ರಿಕೆಟ್ ತಂಡ
Our ODI group has arrived in Johannesburg! 🙌🏽
— BCCI (@BCCI) December 15, 2023
Preparations have begun. 1st one-day on Sunday.#TeamIndia #SAvIND pic.twitter.com/82ho3o8qQK
ಮುಖಾಮುಖಿ
ಉಭಯ ತಂಡಗಳು ಒಟ್ಟಾರೆ 91 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ದಕ್ಷಿಣ ಆಫ್ರಿಕಾ 50 ಪಂದ್ಯಗಳನ್ನು ಗೆದ್ದಿದೆ. ಭಾರತ 38 ಪಂದ್ಯಗಳನ್ನು ಜಯಿಸಿದೆ. 3 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ತವರಿನಲ್ಲಿ ಹರಿಣ ಪಡೆ 25 ಪಂದ್ಯ ಗೆದ್ದರೆ, ಭಾರತ 18 ಪಂದ್ಯ ಗೆದ್ದಿದೆ.
ಮೊದಲ ಮುಖಾಮುಖಿ
ಭಾರತ ಮತ್ತು ದಕ್ಷಿಣ ಆಫ್ರಿಕಾ ಮೊದಲ ಏಕದಿನ ಸರಣಿ ಆಡಿದ್ದು 1991/92ರಲ್ಲಿ. ಇದು ಮೂರು ಪಂದ್ಯಗಳ ಸರಣಿಯಾಗಿತ್ತು. ಭಾರತ ಈ ಸರಣಿಯನ್ನು 2-1 ಅಂತರದಿಂದ ಗೆದ್ದಿತ್ತು. ಭಾರತದಲ್ಲಿ ಸರಣಿ ನಡೆದಿತ್ತು.
ನೇರ ಪ್ರಸಾರ
ಇತ್ತಂಡಗಳ ನಡುವಣ ಏಕದಿನ ಕ್ರಿಕೆಟ್ ಸರಣಿಯ ಎಲ್ಲ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ 1 ಮತ್ತು ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯಲ್ಲಿ ನೇರ ಪ್ರಸಾರವಾಗಲಿದೆ. ದೂರದರ್ಶನದಲ್ಲೂ ನೇರ ಪ್ರಸಾರ ಸಿಗಲಿದೆ. ಲೈವ್ ಸ್ಟ್ರೀಮಿಂಗ್ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಸಿಗಲಿದೆ.
ಸಂಭಾವ್ಯ ತಂಡ
ಭಾರತ: ಸಂಜು ಸ್ಯಾಮ್ಸನ್, ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ತಿಲಕ್ ವರ್ಮ, ರಿಂಕು ಸಿಂಗ್, ಕೆ.ಎಲ್ ರಾಹುಲ್, ಅಕ್ಷರ್ ಪಟೇಲ್, ಮುಕೇಶ್ ಕುಮಾರ್ , ಕುಲ್ದೀಪ್ ಯಾದವ್, ಅರ್ಶದೀಪ್ ಸಿಂಗ್, ಅವೇಶ್ ಖಾನ್.
ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಮ್ (ನಾಯಕ), ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಆಂಡಿಲ್ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ, ಡ್ಯುಸ್ಸೆ ವಿಲ್ಸೆನ್ ಕ್ವೆನ್‌ಡೆರ್, ರಸ್ಸಿ ವಾನ್ಡರ್ ಡುಸ್ಸೆನ್, ಮಿಹ್ಲಾಲಿ ಎಂಪೊಂಗ್ವಾನಾ.