Site icon Vistara News

IND vs SA: ಇಂದು ನಡೆಯುವ ಸರಣಿ ನಿರ್ಣಾಯಕ ಪಂದ್ಯಕ್ಕೆ ಮಳೆ ಕಾಟ ಇದೆಯೇ?

India vs South Africa, 3rd ODI

ಪಾರ್ಲ್: ಇಂದು(ಗುರುವಾರ) ನಡೆಯುವ ದಕ್ಷಿಣ ಆಫ್ರಿಕಾ(IND vs SA) ಮತ್ತು ಭಾರತ ನಡುವಣ ನಿರ್ಣಾಯಕ(IND vs SA 3rd ODI) ಮೂರನೇ ಏಕದಿನ ಪಂದ್ಯಕ್ಕೆ ಯಾವುದೇ ಮಳೆಯ ಭೀತಿ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದಿದೆ. ಹೀಗಾಗಿ ಪಂದ್ಯವನ್ನು ಅಭಿಮಾನಿಗಳು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು. ಅಲ್ಲದೆ ಪಂದ್ಯ ಕೂಡ ಸ್ಪಷ್ಟ ಫಲಿತಾಂಶ ಕಾಣಲಿದೆ. ಯಾರೇ ಗೆದ್ದರೂ ಸರಣಿ ಜಯ ಸಾಧಿಸಲಿದ್ದಾರೆ. ಈ ತಂಡ ಯಾವುದು ಎನ್ನುವುದು ಪಂದ್ಯದ ಕೌತುಕ.

ಹವಾಮಾನ ವರದಿ

ಈ ಹಿಂದಿನ ಎಲ್ಲ ಪಂದ್ಯಗಳಿಗೂ ಮಳೆಯ ಭೀತಿ ಕಾಡಿತ್ತು. ಆದರೆ ಅಂತಿಮ ಪಂದ್ಯ ನಡೆಯುವ ಪಾರ್ಲ್‌ನಲ್ಲಿ ಬಿಸಿಲು ಇರಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ. ‘ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಏಕದಿನ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ ಶೂನ್ಯವಾಗಿರುತ್ತದೆ. ತಾಪಮಾನವು ಸುಮಾರು 35 ಡಿಗ್ರಿ ಸೆಲ್ಸಿಯಸ್‌ನಿಂದ 18 ಡಿಗ್ರಿ ಸೆಲ್ಸಿಯಸ್ ಆಗಿರಬಹುದು. ಓಪನ್​ ಮೈದಾನವಾದ ಕಾರಣ ಗಾಳಿಯ ವೇಗ ಗಂಟೆಗೆ 28 ​​ಕಿ.ಮೀ. ಇರಲಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.

5 ವರ್ಷಗಗಳಿಂದ ಭಾರತ ಸರಣಿ ಗೆದ್ದಿಲ್ಲ

ಭಾರತ ತಂಡ ದಕ್ಷಿಣ ಆಫ್ರಿಕಾ ನೆಲದಲ್ಲಿ ಕೊನೆಯ ಬಾರಿಗೆ ಏಕದಿನ ಸರಣಿ ಗೆಲುವು ಕಂಡಿದ್ದು 2018ರಲ್ಲಿ. ಇದಾದ ಬಳಿಕ ಭಾರತ ಆಡಿದ ಎಲ್ಲ ಏಕದಿನ ಸರಣಿಯಲ್ಲೂ ಸೋಲು ಕಂಡಿದೆ. ಇದೀಗ 5 ವರ್ಷದ ಬಳಿಕ ಈ ಪ್ರಶಸ್ತಿ ಬರವನ್ನು ನೀಗಿಸುವ ವಿಶ್ವಾಸದಲ್ಲಿ ರಾಹುಲ್​ ಸಾರಥ್ಯದ ಯಂಗ್​ ಟೀಮ್​ ಇಂಡಿಯಾ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರವೆಂದರೆ ರಾಹುಲ್​ ಸಾರಥ್ಯದಲ್ಲೇ ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿ ಆಡಲಾಗಿತ್ತಾದರೂ ಗೆಲುವು ಸಿಕ್ಕಿರಲಿಲ್ಲ. ಇದೀಗ ಈ ಸೋಲಿನ ಸೇಡನ್ನು ರಾಹುಲ್​ ತೀರಿಸಿಕೊಳ್ಳಬೇಕಿದೆ.

ಇದನ್ನು ಓದಿ Soumya Sarkar: 14 ವರ್ಷಗಳ ಹಳೆಯ ಸಚಿನ್​ ದಾಖಲೆ ಮುರಿದ ಸೌಮ್ಯ ಸರ್ಕಾರ್

ಪಿಚ್​ ರಿಪೋರ್ಟ್​

ಪಾರ್ಲ್‌ನಲ್ಲಿರುವ ಬೋಲ್ಯಾಂಡ್ ಪಾರ್ಕ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಇಲ್ಲಿ ತಂಡಗಳು ಕನಿಷ್ಠ 250 ರನ್ ಮೊತ್ತವನ್ನು ಗಳಿಸುವ ನಿರೀಕ್ಷೆ ಮಾಡಬಹುದು. ಬೋಲ್ಯಾಂಡ್ ಪಾರ್ಕ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡಗಳು ಹೆಚ್ಚು ಪಂದ್ಯಗಳನ್ನು ಗೆದ್ದಿರುವ ಕಾರಣ ಟಾಸ್​ ಗೆದ್ದ ತಂಡ ಬ್ಯಾಟಿಂಗ್​ ಆಯ್ದುಕೊಳ್ಳಬಹುದು.

ಇಲ್ಲಿ ಆಡಿದ 15 ಪಂದ್ಯಗಳಲ್ಲಿ, ವೇಗದ ಬೌಲರ್‌ಗಳು 29.29 ಸರಾಸರಿಯಲ್ಲಿ 142 ವಿಕೆಟ್‌ಗಳನ್ನು ಪಡೆದರೆ, ಸ್ಪಿನ್ನರ್‌ಗಳು 15 ಪಂದ್ಯಗಳಲ್ಲಿ 37.93 ಸರಾಸರಿಯಲ್ಲಿ 60 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡ 8. ಚೇಸಿಂಗ್​ ನಡೆಸಿದ ತಂಡ 6ರಲ್ಲಿ ಗೆದ್ದಿದೆ. ಒಂದು ಪಂದ್ಯ ಟೈಗೊಂಡಿದೆ.

ಮುಖಾಮುಖಿ

ಇತ್ತಂಡಗಳು ಇದುವರೆಗೆ 93 ಏಕದಿನ ಪಂದ್ಯಗಳನ್ನು ಆಡಿದ್ದು ಭಾರತ 39 ಪಂದ್ಯ ಗೆದ್ದರೆ, ದಕ್ಷಿಣ ಆಫ್ರಿಕಾ 51 ಗೆಲುವುಗಳನ್ನು ಕಂಡಿದೆ. ಮೂರು ಪಂದ್ಯಗಳು ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ. ಗಮನಾರ್ಹವಾಗಿ, ದಕ್ಷಿಣ ಆಫ್ರಿಕಾದಲ್ಲಿ, ಭಾರತದ ಒಟ್ಟಾರೆ ದಾಖಲೆಯು ಪ್ರಭಾವಶಾಲಿಯಾಗಿಲ್ಲ. ‘ಮೆನ್ ಇನ್ ಬ್ಲೂ’ ತಂಡವು 39 ಪಂದ್ಯಗಳಲ್ಲಿ 11 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ, ಆತಿಥೇಯರು 26 ರಲ್ಲಿ ಜಯಗಳಿಸಿದ್ದಾರೆ, ಎರಡು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.

ಸಂಭಾವ್ಯ ತಂಡ

ಭಾರತ: ಕೆ.ಎಲ್ ರಾಹುಲ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಷರ್​ ಪಟೇಲ್​/ಯಜುವೇಂದ್ರ ಚಹಲ್​, ಕುಲದೀಪ್ ಯಾದವ್, ಅರ್ಶ್​ದೀಪ್​ ಸಿಂಗ್, ಅವೇಶ್ ಖಾನ್, ಮುಖೇಶ್ ಕುಮಾರ್.

ದಕ್ಷಿಣ ಆಫ್ರಿಕಾ: ಟೋನಿ ಡಿ ಝೋರ್ಜಿ, ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್ (ವಿಕೆಟ್​ ಕೀಪರ್​), ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಕೇಶವ್ ಮಹಾರಾಜ್, ನಾಂಡ್ರೆ ಬರ್ಗರ್, ಲಿಜಾಡ್ ವಿಲಿಯಮ್ಸ್, ಬ್ಯೂರಾನ್ ಹೆಂಡ್ರಿಕ್ಸ್.

.

Exit mobile version