Site icon Vistara News

IND vs SA: ಹವಾಮಾನ ವರದಿಯಲ್ಲಿ ಅಡಗಿದೆ ದ್ವಿತೀಯ ಏಕದಿನ ಪಂದ್ಯದ ಭವಿಷ್ಯ!

St George's Park, Gqeberha

ಗ್ಕೆಬರ್ಹಾ: ಇಂದು(ಡಿ.19) ನಡೆಯುವ ದ್ವಿತೀಯ ಏಕದಿನ(South Africa vs India, 2nd ODI) ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ(IND vs SA) ಮುಖಾಮುಖಿಯಾಗಲಿವೆ. ಇತ್ತಂಡಗಳ ಈ ಪಂದ್ಯ ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್​ನಲ್ಲಿ(St George’s Park, Gqeberha) ನಡೆಯಲಿದೆ. ಈ ಪಂದ್ಯಕ್ಕೆ ಮಳೆ ಭೀತಿ ತಪ್ಪಿದ್ದಲ್ಲ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹೇಗಿದೆ ಹವಾಮಾನ ವರದಿ?

ಅಕ್ಯುವೆದರ್ ವರದಿ ಪ್ರಕಾರ ದಕ್ಷಿಣ ಆಫ್ರಿಕಾದಲ್ಲಿ ಬೆಳಗ್ಗಿನ ಜಾವವೇ ಮಳೆಯ ಸಾಧ್ಯತೆ ಇದೆ ಎಂದು ತಿಳಿಸಿದೆ. ಪಂದ್ಯದ ವೇಳೆ ಶೇ.20ರಷ್ಟು ಮಳೆಯಾಗಲಿದೆ ಎಂದು ತಿಳಿಸಿದೆ. ಇಲ್ಲಿ ನಡೆದಿದ್ದ ಟಿ20 ಪಂದ್ಯಕ್ಕೂ ಮಳೆ ಅಡ್ಡಿ ಪಡಿಸಿತ್ತು. ಬಳಿಕ ಪಂದ್ಯವನ್ನು ಓವರ್​ ಕಡಿತಗೊಳಿಸಿ ಆಡಿಸಲಾಗಿತ್ತು. ಒಂದೊಮ್ಮೆ ಈ ಪಂದ್ಯಕ್ಕೂ ಮಳೆ ಕಾಡಿದರೆ ಡಕ್​ವರ್ತ್​ ಲೂಯಿಸ್​ ನಿಮಯದ ಪ್ರಕಾರ ಪಂದ್ಯ ನಡೆಸಬಹುದು. ಪಂದ್ಯ ರದ್ದಾಗುವ ಸಾಧ್ಯತೆ ಕ್ಷೀಣವಾಗಿದೆ. ಮಳೆ ಬಂದು ಪಂದ್ಯ ರದ್ದಾದರು ಭಾರತಕ್ಕೆ ಯಾವುದೇ ಹಿನ್ನಡೆಯಾಗದು. ಏಕೆಂದರೆ ರಾಹುಲ್​ ಪಡೆ ಮೊದಲ ಪಂದ್ಯ ಗೆದ್ದು 1-0 ಮುನ್ನಡೆ ಕಾಯ್ದುಕೊಂಡಿದೆ.

ಪಿಚ್​ ರಿಪೋರ್ಟ್​

ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ನಡೆದ ಕೊನೆಯ ಐದು ಏಕದಿನ ಪಂದ್ಯಗಳಲ್ಲಿ ಬೌಲರ್​ಗಳೇ ಮೇಲುಗೈ ಸಾಧಿಸಿದ್ದಾರೆ. ಆದಾಗ್ಯೂ, ಆಟ ಸಾಗುತ್ತಲೇ ಹೋದಾಗ ಬ್ಯಾಟರ್​ಗಳು ಸಹಾಯವನ್ನು ಪಡೆಯಬಹುದು. ಮೊದಲು ಬ್ಯಾಟಿಂಗ್ ಮಾಡುವ ತಂಡದ ಸರಾಸರಿ ಇನ್ನಿಂಗ್ಸ್ 233 ಆಗಿರುತ್ತದೆ. ಚೇಸಿಂಗ್​ ನಡೆಸುವ ತಂಡಕ್ಕೆ ಇಲ್ಲಿ ಹೆಚ್ಚು ಸಹಕಾರಿ. ಹೀಗಾಗಿ ಟಾಸ್ ಗೆದ್ದ ತಂಡ ಬೌಲಿಂಗ್​ ಆಯ್ಕೆ ಮಾಡಬಹುದು.

ಇದನ್ನೂ ಓದಿ Mallika Sagar: ಐಪಿಎಲ್‌ನ ಮೊದಲ ಮಹಿಳಾ ಹರಾಜುಗಾರ್ತಿ ಮಲ್ಲಿಕಾ ಸಾಗರ್ ಯಾರು?

ಏಕದಿನ ದಾಖಲೆ ಹೇಗಿದೆ?

ಈ ಸ್ಟೇಡಿಯಂನಲ್ಲಿ ಒಟ್ಟು 42 ಏಕದಿನ ಪಂದ್ಯಗಳು ನಡೆದಿವೆ. 21 ಪಂದ್ಯಗಳನ್ನು ದಕ್ಷಿಣ ಆಫ್ರಿಕಾ ಗೆದ್ದರೆ, ಪ್ರವಾಸಿ ತಂಡಗಳು 13 ಪಂದ್ಯಗಳಲ್ಲಿ ಮಾತ್ರ ಗೆದ್ದಿವೆ. 20 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಹಾಗೂ 21 ಬಾರಿ ಚೇಸಿಂಗ್​ ನಡೆಸಿದ ತಂಡಗಳು ಗೆಲುವು ಸಾಧಿಸಿದೆ. 330 ರನ್​ ಇಲ್ಲಿನ ಇದುವರೆಗಿನ ಗರಿಷ್ಠ ಚೇಸಿಂಗ್​ ಮೊತ್ತವಾಗಿದೆ.

ಭಾರತ ತಂಡ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ಇದುವರೆಗೆ 6 ಏಕದಿನ ಪಂದ್ಯಗಳನ್ನು ಆಡಿದೆ. ಗೆದ್ದಿರುವುದು ಕೇವಲ ಒಂದು ಪಂದ್ಯ ಮಾತ್ರ. 5 ರಲ್ಲಿ ಸೋಲು ಕಂಡಿದೆ. ದಕ್ಷಿಣ ಆಫ್ರಿಕಾ 35 ಪಂದ್ಯಗಳನ್ನು ಆಡಿ 21 ಗೆಲುವು, 13 ಸೋಲು ಕಂಡಿದೆ.

ಇದನ್ನೂ ಓದಿ IPL 2024 : ಐಪಿಎಲ್​ ಹರಾಜು ಬಗ್ಗೆ ತಿಳಿದುಕೊಳ್ಳಲೇಬೇಕಾದ ಸಂಗತಿಗಳಿವು

ಪಂದ್ಯ ಆರಂಭ

ಮೊದಲ ಪಂದ್ಯ ಭಾರತೀಯ ಕಾಲ ಮಾನ ಮಧ್ಯಾಹ್ನ 1.30ಕ್ಕೆ ಆರಂಭವಾಗಿತ್ತು. ಆದರೆ ದ್ವಿತೀಯ ಪಂದ್ಯ ಸಂಜೆ 4:30 ಕ್ಕೆ ಆರಂಭವಾಗಲಿದೆ. ಸ್ಟಾರ್​ ಸ್ಪೋರ್ಟ್ಸ್​ನಲ್ಲಿ ಪಂದ್ಯ ಪ್ರಸಾರವಾಗಲಿದೆ.

ಸಂಭಾವ್ಯ ತಂಡ

ಭಾರತ: ಕೆ.ಎಲ್ ರಾಹುಲ್ (ನಾಯಕ), ಋತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ರಿಂಕು ಸಿಂಗ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಅರ್ಶ್​ದೀಪ್​ ಸಿಂಗ್, ಅವೇಶ್ ಖಾನ್, ಕುಲದೀಪ್ ಯಾದವ್, ಮುಖೇಶ್ ಕುಮಾರ್.

ದಕ್ಷಿಣ ಆಫ್ರಿಕಾ: ರೀಜಾ ಹೆಂಡ್ರಿಕ್ಸ್, ಟೋನಿ ಡಿ ಜೊರ್ಜಿ, ರಸ್ಸಿ ವಾನ್​ಡರ್​ ಡುಸ್ಸೆನ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಆಂಡಿಲ್ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ನಾಂದ್ರೆ ಬರ್ಗರ್, ತಬ್ರೈಜ್ ಶಮ್ಸಿ.

Exit mobile version