ಪರ್ತ್: ಟೀಮ್ ಇಂಡಿಯಾದಲ್ಲಿ ಫಿನಿಶರ್ ಸ್ಥಾನ ಪಡೆದುಕೊಂಡಿರುವ ಆಟಗಾರ ದಿನೇಶ್ ಕಾರ್ತಿಕ್ ದಕ್ಷಿಣ ಆಫ್ರಿಕಾ (IND VS SA) ವಿರುದ್ಧದ ಟಿ20 ವಿಶ್ವ ಕಪ್ ಸೂಪರ್-12 ಪಂದ್ಯದ ವೇಳೆ ಗಾಯಗೊಂಡು ಮೈದಾನದಿಂದ ಹೊರನಡೆದಿದ್ದಾರೆ. ಬಳಿಕ ರಿಷಭ್ ಪಂತ್ ಕೀಪಿಂಗ್ ನಡೆಸಿದ್ದಾರೆ. ಇದು ಪಂತ್ ಪಾಲಿಗೆ ಗುಡ್ ನ್ಯೂಸ್ ಹಾಗೂ ಟೀಮ್ ಇಂಡಿಯಾ ಪಾಲಿಗೆ ಬ್ಯಾಡ್ ನ್ಯೂಸ್. ಯಾಕೆಂದರೆ ಕಾರ್ತಿಕ್ ಮುಂದಿನ ಪಂದ್ಯದಲ್ಲಿ ಆಡದಿದ್ದರೆ ಕಳೆದ ಮೂರು ಪಂದ್ಯಗಳಿಂದ ಬೆಂಚು ಕಾಯುತ್ತಿದ್ದ ರಿಷಭ್ ಪಂತ್‌ಗೆ ಅವಕಾಶ ಸಿಗಲಿದೆ. ಅದರೆ, ಭಾರತ ತಂಡ ಹಿರಿಯ ಅನುಭವಿ ಆಟಗಾರನ ಸೇವೆ ಕಳೆದುಕೊಳ್ಳಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ನಿಗದಿತ 20 ಓವರ್ಗಳಲ್ಲಿ 9 ವಿಕೆಟಿಗೆ 133 ರನ್ ಗಳಿಸಿತು. ಗುರಿ ಬೆನ್ನಟ್ಟುತ್ತಿದ್ದ ದಕ್ಷಿಣ ಆಫ್ರಿಕಾದ 16ನೇ ಇನಿಂಗ್ಸ್ ವೇಳೆ ದಿನೇಶ್ ಕಾರ್ತಿಕ್ ಬೆನ್ನು ನೋವಿಗೆ ಸಿಲುಕಿ ಅರ್ಧಕ್ಕೆ ಕೀಪಿಂಗ್ ಮೊಟಕುಗೊಳಿಸಿ ಮೈದಾನದಿಂದ ಹೊರ ನಡೆದರು. ಕಾರ್ತಿಕ್ ಅನುಪಸ್ಥಿತಿಯಲ್ಲಿ ಪಂತ್ ಕೀಪಿಂಗ್ ಗ್ಲೌಸ್ ತೊಟ್ಟು ಮೈದಾನಕ್ಕೆ ಬಂದರು. ಇದೀಗ ಕಾರ್ತಿಕ್ ಮುಂದಿನ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ವರದಿಯೊಂದು ತಿಳಿಸಿದೆ. ಒಂದೊಮ್ಮೆ ಕಾರ್ತಿಕ್ ಮುಂದಿನ ಪಂದ್ಯಕ್ಕೆ ಅಲಭ್ಯರಾದರೆ ಟೀಮ್ ಇಂಡಿಯಾ ಪರ ಇದ್ದ ಏಕೈಕ ಮ್ಯಾಚ್ ಫಿನಿಶರ್ ಕೂಡ ಕಳೆದುಕೊಂಡಂತಾಗುತ್ತದೆ. ಒಟ್ಟಾರೆ ಕಾರ್ತಿಕ್ ಗಾಯದ ಕುರಿತು ಅಪ್ಡೇಟ್ ಬಂದ ಬಳಿಕ ಎಲ್ಲ ಪ್ರಶ್ನೆಗೂ ಉತ್ತರ ಸಿಗಲಿದೆ.
ದಕ್ಷಿಣ ಆಫ್ರಿಕಾ ಪಂದ್ಯಕ್ಕೂ ಮುನ್ನ ಶನಿವಾರ ನಡೆದ ನೆಟ್ ಪ್ರಾಕ್ಟೀಸ್ ವೇಳೆಯೇ ಕಾರ್ತಿಕ್ ಗಾಯಗೊಂಡಿದ್ದರು. ಕಾರ್ತಿಕ್ ಕ್ಯಾಚಿಂಗ್ ಅಭ್ಯಾಸ ನಡೆಸುತ್ತಿರುವಾಗ ಗಾಯಕ್ಕೆ ತುತ್ತಾಗಿ. ನೋವಿನಿಂದ ಮೈದಾನದಲ್ಲೇ ಕೂತಿರುವ ಕಾರ್ತಿಕ್ ವಿಡಿಯ ಹರಿದಾಡಿತ್ತು. ಅದಾಗಲೆ ಕಾರ್ತಿಕ್ ಭಾನುವಾರ ಪಂದ್ಯ ಆಡುವುದು ಅನುಮಾನ ಎನ್ನಲಾಗಿತ್ತು. ಆದರೆ ಟಾಸ್ ವೇಳೆ ಕಾರ್ತಿಕ್ ತಂಡದಲ್ಲಿ ಕಾಣಿಸಿಕೊಂಡ ಕಾರಣ ಟೀಮ್ ಇಂಡಿಯಾ ಅಭಿಮಾನಿಗಳು ನಿಟ್ಟುಸಿರು ಬಿಟ್ಟರು. ಇದೀಗ ಕಾರ್ತಿಕ್ ಮತ್ತೆ ಗಾಯಗೊಂಡಿರುವುದು ತಂಡಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಜತೆಗೆ ಗಾಯದ ನಡುವೆ ಕಾರ್ತಿಕ್ಗೆ ಪಂದ್ಯ ಆಡಲು ಅವಕಾಶ ನೀಡಿದಕ್ಕೆ ಕೆಲವರು ಟೀಮ್ ಮ್ಯಾನೇಜ್ಮೆಂಟ್ ಮೇಲೆ ಗರಂ ಆಗಿದ್ದಾರೆ. ಅಭ್ಯಾಸದ ವೇಳೆಯೆ ಕಾರ್ತಿಕ್ ಗಾಯದಿಂದ ನರಲಾಡಿದ್ದಾರೆ ಆದರೂ ಇಂದಿನ ಪಂದ್ಯಕ್ಕೆ ಅವರಿಗೆ ಏಕೆ ಅವಕಾಶ ನೀಡಿದ್ದೀರಿ. ಅವರಿಗೆ ಒಂದು ಪಂದ್ಯದಲ್ಲಿ ವಿಶ್ರಾಂತಿ ನೀಡಬಹುದಿತ್ತು. ಎಂದು ಕೆಲವರು ಬಿಸಿಸಿಐ ವಿರುದ್ಧ ಚಾಟಿ ಬೀಸಿದ್ದಾರೆ.
ಇದನ್ನೂ ಓದಿ | IND VS SA | ಮೈದಾನದಲ್ಲೇ ಅಂಪೈರ್ಗೆ ಗುದ್ದಿದ ಸ್ಪಿನ್ನರ್ ಯಜ್ವೇಂದ್ರ ಚಹಲ್; ಏನಾಯಿತು ಅವರಿಗೆ?