ನವದೆಹಲಿ: ದಕ್ಷಿಣ ಆಫ್ರಿಕಾದ ಬಫೆಲೋ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಮಹಿಳೆಯರ ಟಿ20 ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ(IND VS SA) ತಂಡ ಗೆಲುವು ಸಾಧಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲಿ ಭಾರತೀಯ ವನಿತೆಯರು 27 ರನ್ಗಳ ಗೆಲುವು ಸಾಧಿಸಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ನಷ್ಟಕ್ಕೆ 147 ರನ್ ಗಳಿಸಿತು. ಬಳಿಕ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 9 ವಿಕೆಟ್ಗೆ 120 ರನ್ ಗಳಿಸಿ ಶರಣಾಯಿತು.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಪರ ಅಮನ್ಜೋತ್ ಕೌರ್ ಅಜೇಯ 41, ಆರಂಭಿಕ ಆಟಗಾರ್ತಿ ಯಾಸ್ತಿಕಾ ಭಾಟಿಯಾ 35, ದೀಪ್ತಿ ಶರ್ಮ 33 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಆಲ್ರೌಂಡರ್ ಪ್ರದರ್ಶನ ತೋರಿದ ದೀಪ್ತಿ ಶರ್ಮ ಬ್ಯಾಟಿಂಗ್ ಜತೆಗೆ ಬೌಲಿಂಗ್ನಲ್ಲಿಯೂ ಮಿಂಚು ಹರಿಸಿದರು. ಮೂರು ವಿಕೆಟ್ ಕಿತ್ತು ಮಿಂಚಿದರು. ಇವರಿಗೆ ದೇವಿಕಾ ವೈದ್ಯ ಉತ್ತಮ ಸಾಥ್ ನೀಡಿದರು. ಮೂರು ಓವರ್ ಎಸೆದು ಕೇವಲ 19 ರನ್ ಬಿಟ್ಟುಕೊಟ್ಟು ಪ್ರಮುಖ 2 ವಿಕೆಟ್ ಕಿತ್ತರು.
ಸಂಕ್ಷಿಪ್ತ ಸ್ಕೋರ್:
ಭಾರತ: 6 ವಿಕೆಟ್ಗೆ 147( ಅಮನ್ಜೋತ್ ಕೌರ್ ಅಜೇಯ 41, ಯಾಸ್ತಿಕಾ ಭಾಟಿಯಾ 35, ದೀಪ್ತಿ ಶರ್ಮ 33 ರನ್, ಮ್ಲಾಬಾ 15ಕ್ಕೆ 2).
ದಕ್ಷಿಣ ಆಫ್ರಿಕಾ: 9 ವಿಕೆಟ್ಗೆ 120 (ಸುನೆ ಲೂಸ್ 29, ದೀಪ್ತಿ ಶರ್ಮ 30ಕ್ಕೆ 3, ದೇವಿಕಾ ವೈದ್ಯ 19ಕ್ಕೆ 2)
ಇದನ್ನೂ ಓದಿ | Wrestling Federation of India ವಿರುದ್ಧ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವುದು ಯಾಕೆ? ಅವರ ಆರೋಪಗಳೇನು; ಏನಿದು ಪ್ರಕರಣ?