Site icon Vistara News

IND vs SA: ದಕ್ಷಿಣ ಆಫ್ರಿಕಾ ತಲುಪಿದ ಯಂಗ್​ ಟೀಮ್​ ಇಂಡಿಯಾ; ಡಿ.10ರಿಂದ ಸರಣಿ ಆರಂಭ

team india

ಜೊಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕಾ(IND vs SA) ವಿರುದ್ಧದ ಟಿ20 ಸರಣಿಯನ್ನಾಡಲು ಭಾರತ ತಂಡ ಹರಿಣಗಳ ನಾಡಿಗೆ ತಲುಪಿದೆ. ಟೀಮ್​ ಇಂಡಿಯಾದ ಆಟಗಾರರು ತವರಿನಿಂದ ಹೊರಟು ದಕ್ಷಿಣ ಆಫ್ರಿಕಾಕ್ಕೆ ತಲುಪಿದ ವಿಡಿಯೊವನ್ನು ಬಿಸಿಸಿಐ(BCCI) ತನ್ನ ಅಧಿಕೃತ ಟ್ವಿಟರ್ ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿದೆ.

ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮೂರು ಟಿ20, ಮೂರು ಏಕದಿನ ಮತ್ತು 2 ಟೆಸ್ಟ್​ ಪಂದ್ಯಗಳನ್ನು ಆಡಲಿದೆ. ಟಿ20 ಸರಣಿಯನ್ನಾಡುವ ಮೂಲಕ ಸರಣಿಗೆ ಚಾಲನೆ ಸಿಗಲಿದೆ. ಡಿ.10ರಂದು ಮೊದಲ ಟಿ20 ಪಂದ್ಯ ನಡೆಯಲಿದೆ. ಮೊದಲ ಹಂತದಲ್ಲಿ ಟಿ20 ಸರಣಿಯಲ್ಲಿ ಆಡುವ ಆಟಗಾರರು ಮಾತ್ರ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಿದ್ದಾರೆ.

ನಾಯಕ ಸೂರ್ಯಕುಮಾರ್​ ಯಾದವ್​, ಯಶಸ್ವಿ ಜೈಸ್ವಾಲ್​, ಮೊಹಮ್ಮದ್​ ಸಿರಾಜ್​, ಆವೇಶ್​ ಖಾನ್​, ಶ್ರೇಯಸ್​ ಅಯ್ಯರ್​, ಅರ್ಶದೀಪ್​ ಸಿಂಗ್​ ಸೇರಿ ಕೆಲ ಆಟಗಾರರು ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳಿಗೆ ಕೈ ಬೀಸುತ್ತಾ ಸಾಗುವ ದೃಶ್ಯವನ್ನು ಬಿಸಿಸಿಐ ಹಂಚಿಕೊಂಡ ವಿಡಿಯೊದಲ್ಲಿ ಕಾಣಬಹುದಾಗಿದೆ.

ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್​ ದೃಷ್ಟಿಯಲ್ಲಿ ಬಿಸಿಸಿಐ ಈ ಸರಣಿಗೆ ಯುವ ಆಟಗಾರರನ್ನು ಮಾತ್ರ ಆಯ್ಕೆ ಮಾಡಿ ಈಗಿಂದಲೇ ಬಲಿಷ್ಠ ತಂಡವನ್ನು ಕಟ್ಟಲು ಅಡಿಪಾಯ ಹಾಕಿದೆ. ಹೀಗಾಗಿ ಸಿಕ್ಕ ಅವಕಾಶವನ್ನು ಯುವ ಆಟಗಾರರು ಸದುಪಯೋಗ ಪಡಿಸಿಕೊಳ್ಳಬೇಕಿದೆ. ಆಸ್ಟ್ರೇಲಿಯಾವನ್ನು 4-1 ಅಂತರದಿಂದ ಮಣಿಸಿದ ಸೂರ್ಯಕುಮಾರ್​ ಪಡೆ ಈ ಸರಣಿಯಲ್ಲಿಯೂ ಕಮಾಲ್​ ಮಾಡುವ ಆತ್ಮವಿಶ್ವಾಸದಲ್ಲಿದೆ.

ನೂತನ ಟಿ20 ಬೌಲಿಂಗ್​ ಶ್ರೇಯಾಂಕದಲ್ಲಿ ನಂ.1 ಸ್ಥಾನ ಪಡೆದಿರುವ ರವಿ ಬಿಷ್ಟೋಯಿ ಅವರು ವಿದೇಶಿ ನೆಲದಲ್ಲಿ ಯಾವ ರೀತಿಯ ಬೌಲಿಂಗ್​ ನಡೆಸಬಲ್ಲರು ಎಂಬ ಕುತೂಹಲ ಟೀಮ್​ ಮ್ಯಾನೆಜ್​ಮೆಂಟ್ ಮುಂದಿದೆ. ಒಂದೊಮ್ಮೆ ಅವರು ಇಲ್ಲಿಯೂ ಕ್ಲಿಕ್​ ಆದರೆ ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತವಾಗಲಿದೆ.​

ಇದನ್ನೂ ಓದಿ ವಿಶ್ವಕಪ್​ ಫೈನಲ್​ ಪಂದ್ಯದ ಕ್ಯಾಮೆರಾ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ನೀರಜ್ ಚೋಪ್ರಾ

ಭಾರತ ಟಿ20 ತಂಡ

ಸೂರ್ಯಕುಮಾರ್ ಯಾದವ್ (ನಾಯಕ),ರವೀಂದ್ರ ಜಡೇಜಾ (ಉಪನಾಯಕ) ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ , ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅರ್ಶದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ದೀಪಕ್ ಚಹಾರ್.

ಭಾರತ ಏಕದಿನ ತಂಡ

ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಟಿದಾರ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ-ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್, ಮುಖೇಶ್ ಕುಮಾರ್, ಅವೇಶ್ ಖಾನ್, ಅರ್ಶದೀಪ್​ ಸಿಂಗ್, ದೀಪಕ್ ಚಹಾರ್.

ಭಾರತ ಟೆಸ್ಟ್​ ತಂಡ

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್‌ವಾಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಮೊಹಮದ್ ಶಮಿ, ಜಸ್​ಪ್ರೀತ್​ ಬುಮ್ರಾ (ಉಪನಾಯಕ), ಪ್ರಸಿದ್ಧ್​ ಕೃಷ್ಣ.

Exit mobile version