Site icon Vistara News

Rinku Singh: ಏಕದಿನ ಕ್ರಿಕೆಟ್​ಗೂ ಪದಾರ್ಪಣೆ ಮಾಡಿದ ಸಿಕ್ಸರ್​ ಸಿಂಗ್​ ಖ್ಯಾತಿಯ ರಿಂಕು

After a smashing start to his T20I career, it is now time for Rinku Singh to make his mark in the ODI format.

ಗ್ಕೆಬರ್ಹಾ: ಟಿ20 ಕ್ರಿಕೆಟ್​ನಲ್ಲಿ ಈಗಾಗಲೇ ಭಾರತ ತಂಡದ ಪರ ಉತ್ತಮ ಪ್ರದರ್ಶನ ತೋರುವ ಮೂಲಕ ತಂಡದಲ್ಲಿ ಖಾಯಂ ಸ್ಥಾನ ಪಡೆದಿರುವ ಸಿಕ್ಸರ್​ ಸಿಂಗ್​ ಖ್ಯಾತಿಯ ರಿಂಕು ಸಿಂಗ್(Rinku Singh)​ ಅವರು ಇದೀಗ ಏಕದಿನ ಕ್ರಿಕೆಟ್​ನಲ್ಲಿಯೂ ತಮ್ಮ ಚಾರ್ಮ್​ ತೋರಲು ಸಿದ್ಧರಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಕಣ್ಕಕ್ಕಿಳಿಯುವ ಮೂಲಕ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ.

ರಿಂಕು ಸಿಂಗ್​ ಅವರಿಗೆ ಕುಲ್​ದೀಪ್​ ಯಾದವ್​ ಅವರು ಟೀಮ್​ ಇಂಡಿಯಾದ ಕ್ಯಾಪ್ ನೀಡಿ ತಂಡಕ್ಕೆ ಸ್ವಾಗತಿಸಿದರು. ರಿಂಕು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಲಿದ್ದಾರೆ. ಮೊದಲ ಪಂದ್ಯದಲ್ಲಿ ಸಾಯಿ ಸುದರ್ಶನ್ ಪದಾರ್ಪಣೆಗೈದಿದ್ದರು. ​ಭಾರತ ಪರ 12 ಟಿ20 ಪಂದ್ಯ ಆಡಿರುವ ರಿಂಕು ಸಿಂಗ್​ ಅವರು ಒಂದು ಅರ್ಧಶತಕ ಒಳಗೊಂಡಂತೆ 262 ರನ್​ ಬಾರಿಸಿದ್ದಾರೆ.

2019ರಲ್ಲೊಮ್ಮೆ ರಿಂಕು ಸಿಂಗ್‌ ಬಿಸಿಸಿಐನಿಂದ ನಿಷೇಧಕ್ಕೂ ಒಳಗಾಗಿದ್ದರು. ಕಾರಣ, ಬಿಸಿಸಿಐ ಅನುಮತಿ ಪಡೆಯದೆ ವಿದೇಶಿ ಟಿ20 ಲೀಗ್‌ ಒಂದರಲ್ಲಿ ಆಡಿದ್ದು. ಈ 3 ತಿಂಗಳ ನಿಷೇಧವನ್ನು ಅನುಭವಿಸಿದ್ದರು.

ಕಷ್ಟಗಳನ್ನು ದಾಟಿ ಬಂದ ಪ್ರತಿಭೆ

ರಿಂಕು ಅವರು ಟೀಮ್​ ಇಂಡಿಯಾದಲ್ಲಿ ಅವಕಾಶ ಪಡೆಯಲು ತುಂಬಾ ಕಷ್ಟಗಳನ್ನು ದಾಟಿ ಬಂದ ಪ್ರತಿಭೆ. ಕಡು ಬಡತನದಲ್ಲಿ ಬೆಳೆದ ಅವರು ಕೂಲಿ ಕೆಲಸವನ್ನು ಮಾಡುವ ಜತೆಗೆ ಕ್ರಿಕೆಟ್​ ಅಭ್ಯಾಸ ನಡೆಸಿ ಇಂದು ಒಂದು ಹಂತಕ್ಕೆ ಬೆಳೆದು ನಿಂತಿದ್ದಾರೆ. ಅಂಡರ್‌-16, ಕಾಲೇಜು ಮಟ್ಟದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ ರಿಂಕು ರಣಜಿಗೆ ಆಯ್ಕೆಯಾದರು. ಇಲ್ಲಿನ ಯಶಸ್ಸು ಐಪಿಎಲ್‌ ಬಾಗಿಲು ತೆರೆಯಿತು.

ಇದನ್ನೂ ಓದಿ IPL 2024 Auction : 24.75 ಕೋಟಿ ರೂ. ಪಡೆದು ಸಾರ್ವಕಾಲಿಕ ದಾಖಲೆ ಬರೆದ ಸ್ಟಾರ್ಕ್​

2017ರಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ 10 ಲಕ್ಷ ರೂ.ಗೆ ಇವರನ್ನು ಖರೀದಿಸಿತು. ಮುಂದಿನ ವರ್ಷ 80 ಲಕ್ಷ ರೂ.ಗೆ ಕೆಕೆಆರ್‌ ಪಾಲಾದರು. ಆದರೆ ಬಳಿಕ ಬಿಡುಗಡೆ ಮಾಡಿತು. 2022ರಲ್ಲಿ ಮತ್ತೆ 55 ಲಕ್ಷ ರೂ.ಗೆ ಖರೀದಿಸಿತು. ಈಗ ಕೆಕೆಆರ್‌ನ ಕೀ ಪ್ಲೇಯರ್‌ ಆಗಿದ್ದಾರೆ. ಇದೀಗ ಟೀಮ್​ ಇಂಡಿಯಾದಲ್ಲೂ ನಿರೀಕ್ಷಿತ ಪ್ರದರ್ಶನ ತೋರುವ ಮೂಲಕ ತಂಡದ ಫಿನಿಶರ್​ ರೋಲ್​ ನಿರ್ವಹಿಸುತ್ತಿದ್ದಾರೆ. ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್​ನಲ್ಲಿ ಅವರು ಆಡುವುದು ಬಹುತೇಖ ಖಚಿತ ಎನ್ನಲಡ್ಡಿಯಿಲ್ಲ.

ಬಡ ಕ್ರಿಕೆಟ್​ ಆಟಗಾರರಿಗೆ ಹಾಸ್ಟೆಲ್ ನಿರ್ಮಾಣ

ರಿಂಕು ಸಿಂಗ್​ ಅವರು ತಮ್ಮ ಊರು ಅಲಿಘರ್​​ನಲ್ಲಿ ಬಡ ಕ್ರಿಕೆಟ್​ ಆಟಗಾರರಿಗೆ​ 50 ಲಕ್ಷ ಮೌಲ್ಯದಲ್ಲಿ ಮೂಲಭೂತ ಸೌಕರ್ಯವುಳ್ಳ ಹಾಸ್ಟೆಲ್​ ನಿರ್ಮಾಣ ಮಾಡುತ್ತಿದ್ದಾರೆ. ಕಷ್ಟ ಏನೆಂಬುದನ್ನು ಹತ್ತಿರದಿಂದ ಕಂಡ ಅವರು ಬಡ ಕ್ರಿಕೆಟ್​ ಪ್ರತಿಭೆಗಳಿಗೆ ನೆರವು ನೀಡುವ ಮೂಲಕ ಅವರ ಕನಸನ್ನು ನನಸು ಮಾಡುವ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಹಾಸ್ಟೆಲ್ ನಿರ್ಮಾಣ ಬಹುತೇಕ ಕೊನೆಯ ಹಂತವನ್ನ ತಲುಪಿದೆ. ಮುಂದಿನ ವರ್ಷದ ಮಾರ್ಚ್​ ವೇಳೆಗೆ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ. ರಿಂಕು ಅವರ ಈ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ. ಹಾಸ್ಟೆಲ್​ ನಿರ್ಮಾಣದ ವಿಚಾರವನ್ನು ರಿಂಕು ಅವರು ಈ ಬಾರಿಯ ಐಪಿಎಲ್​ ಟೂರ್ನಿಯ ವೇಳೆ ಘೋಷಿಸಿದ್ದರು.

Exit mobile version