Site icon Vistara News

IND vs SL 1st ODI: ವಿಶ್ವಕಪ್​ ಫೈನಲ್​ ಸೋಲಿನ ಬಳಿಕ ಮೊದಲ ಏಕದಿನ ಆಡಲು ಸಜ್ಜಾದ ಕೊಹ್ಲಿ-ರೋಹಿತ್

IND vs SL 1st ODI

IND vs SL 1st ODI: Kohli, Rohit, Bumrah set to play first ODI after World Cup final defeat

ಕೊಲಂಬೊ: ಭಾರತ ಮತ್ತು ಶ್ರೀಲಂಕಾ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ(IND vs SL 1st ODI) ನಾಳೆ ನಡೆಯಲಿದೆ. ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit sharma), ವಿರಾಟ್​ ಕೊಹ್ಲಿ(virat kohli) ಸೇರಿ ಕೆಲ ಆಟಗಾರರು ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಫೈನಲ್​ ಸೋಲಿನ ಬಳಿಕ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ.

ಕಳೆದ ವರ್ಷ(2023) ನವೆಂಬರ್​ 19ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದಿದ್ದ ಏಕದಿನ ಫೈನಲ್​ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್​ ಅಂತರದ ಸೋಲು ಕಂಡು ನಿರಾಸೆ ಅನುಭವಿಸಿತ್ತು. ಇದಾದ ಬಳಿಕ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮ ಯಾವುದೇ ಏಕದಿನ ಪಂದ್ಯವನ್ನಾಡಿರಲಿಲ್ಲ. ಇದೀಗ ಬರೋಬ್ಬರಿ 9 ತಿಂಗಳ ಬಳಿಕ ಏಕದಿನ ಸರಣಿಯನ್ನಾಡಲು ಸಜ್ಜಾಗಿದ್ದಾರೆ.

ಇದನ್ನೂ ಓದಿ IND vs SL : ಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲೂ ಭಾರತಕ್ಕೆ ಜಯ, ಸರಣಿ ಕ್ಲೀನ್ ಸ್ವೀಪ್ ಮಾಡಿದ ಸೂರ್ಯಕುಮಾರ್ ಪಡೆ

ಮುಂದಿನ ವರ್ಷ ಪಾಕ್​ ಆತಿಥ್ಯದಲ್ಲಿ ನಡೆಯುವ ಏಕದಿನ ಮಾದರಿಯ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಟೂರ್ನಿಯ ನಿಟ್ಟಿನಲ್ಲಿ ಭಾರತಕ್ಕೆ ಈ ಸರಣಿ ಮಹತ್ವದ್ದಾಗಿದೆ. ಟಿ20 ಕ್ರಿಕೆಟ್​ಗೆ ವಿದಾಯ ಹೇಳಿರುವ ವಿರಾಟ್​ ಕೊಹ್ಲಿ ಮತ್ತು ನಾಯಕ ರೋಹಿತ್​ ಅವರು 2027ರ ಏಕದಿನ ವಿಶ್ವಕಪ್​ ಆಡಬೇಕಿದ್ದರೆ ಈ ಸರಣಿಯಿಂದಲೇ ತಮ್ಮ ಸಾಮರ್ಥ್ಯ ತೋರಬೇಕಿದೆ. ನೂತನ ಕೋಚ್​ ಗಂಭೀರ್​ ಮಾರ್ಗದರ್ಶನಲ್ಲಿ ಆಡುತ್ತಿರುವ ಮೊದಲ ಏಕದಿನ ಸರಣಿ ಕೂಡ ಇದಾಗಿದೆ.

ಭಾರತ ಟಿ20 ಕ್ರಿಕೆಟ್​ ತಂಡದಿಂದ ಕೈಬಿಟ್ಟಿರುವ ಕನ್ನಡಿಗ ಕೆ.ಎಲ್​ ರಾಹುಲ್(KL Rahul)​ ಅವರಿಗೆ ತಂಡದಲ್ಲಿ ಭದ್ರ ಸ್ಥಾನವೊಂದನ್ನು ಗಿಟ್ಟಿಸಿಕೊಳ್ಳಲು ಈ ಸರಣಿ ಮುಖ್ಯವಾಗಿದೆ. ತೀವ್ರ ಪೈಪೋಟಿಯ ಮಧ್ಯೆಯೂ ಅವರು ಏಕದಿನ ಸರಣಿಯಲ್ಲಿ ಅವಕಾಶ ಗಿಟ್ಟಿಸಿಕೊಂಡು ನಿರೀಕ್ಷಿತ ಬ್ಯಾಟಿಂಗ್​ ಪ್ರದರ್ಶನ ತೋದರೇ ಹೋದರೆ ಏಕದಿನ ತಂಡದಲ್ಲಿಯೂ ಅವರಿಗೆ ಬಾಗಿಲು ಬಂದ್​ ಆಗುವುದು ಖಚಿತ. ಈ ಹಿಂದೆ ಪಂತ್​ ಅನುಪಸ್ಥಿತಿಯಲ್ಲಿ ರಾಹುಲ್​ಗೆ ಕೀಪಿಂಗ್​ ಜವಾಬ್ದಾರಿ ನೀಡಿ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಆದರೆ ಈಗ ಪಂತ್​ ತಂಡಕ್ಕೆ ಆಗಮಿಸಿದ್ದಾರೆ.

ವಿರಾಟ್​ ಕೊಹ್ಲಿಗೆ(Virat Kohli) ಶ್ರೀಲಂಕಾ(India tour of Sri Lanka) ವಿರುದ್ಧದ ಏಕದಿನ ಸರಣಿಯಲ್ಲಿ ವಿಶೇಷ ದಾಖಲೆಯೊಂದನ್ನು ಬರೆಯುವ ಅವಕಾಶವಿದೆ. ಹೌದು, ಕೊಹ್ಲಿ 152 ರನ್ ಗಳಿಸಿದರೆ ಏಕದಿನ ಕ್ರಿಕೆಟ್​ನಲ್ಲಿ 14 ಸಾವಿರ ರನ್ ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಸದ್ಯ 292* ಏಕದಿನ ಪಂದ್ಯಗಳನ್ನಾಡಿರುವ ವಿರಾಟ್​ ಕೊಹ್ಲಿ 13,848* ರನ್(virat kohli odi runs)​ ಬಾರಿಸಿದ್ದಾರೆ. ಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಕೊಹ್ಲಿ 152 ರನ್​ ಬಾರಿಸಿದರೆ 14 ಸಾವಿರ ರನ್​ ಮೈಲುಗಲ್ಲು ತಲುಪಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 14000ಕ್ಕೂ ಹೆಚ್ಚು ರನ್ ಗಳಿಸಿದ ಸಾರ್ವಕಾಲಿದ ದಾಖಲೆ ಸಚಿನ್ ತೆಂಡೂಲ್ಕರ್ ಮತ್ತು ಕುಮಾರ ಸಂಗಕ್ಕಾರ ಹೆಸರಿನಲ್ಲಿದೆ. ಸಚಿನ್ 463 ಏಕದಿನ ಪಂದ್ಯಗಳಲ್ಲಿ 18,426 ರನ್ ಗಳಿಸಿದ್ದರೆ, ಕುಮಾರ ಸಂಗಕ್ಕಾರ 404 ಪಂದ್ಯಗಳನ್ನಾಡಿ 14,234 ರನ್ ಬಾರಿಸಿದ್ದಾರೆ. ಕೊಹ್ಲಿಗೆ ಸಂಗಕ್ಕಾರ ದಾಖಲೆ ಮುರಿಯುವ ಅವಕಾಶವಿದೆ. ಆದರೆ ಸಚಿನ್​ ದಾಖಲೆ ಮುರಿಯುವುದು ಕಷ್ಟ ಸಾಧ್ಯ.

Exit mobile version